Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಕೆನ್ನೆ ಸವರಿದ್ದ ಟೀಮ್ ಇಂಡಿಯಾದ ಅಭಿಮಾನಿ ಅಜ್ಜಿ ಇನ್ನಿಲ್ಲ

ಚಾರುಲತಾ ಪಟೇಲ್ ನಿಧನಕ್ಕೆ ಸಂತಾಪ ಸೂಚಿಸಿದ ಬಿಸಿಸಿಐ | CHARULATHA PATIL | BCCI | ONEINDIA KANNADA
Indian crickets 87-year-old superfan Charulata Patel passes away

ನವದೆಹಲಿ, ಜನವರಿ 16: ಇಂಗ್ಲೆಂಡ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್ 2019ರ ವೇಳೆ ಸ್ಟೇಡಿಯಂ ಬಳಿ ಕಾಣಿಸಿಕೊಂಡು, ನಾಯಕ ವಿರಾಟ್ ಕೊಹ್ಲಿ, ಉಪನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾ ಕ್ರಿಕೆಟಿಗರ ಕೆನ್ನೆ ಸವರಿ ಪ್ರೀತಿ-ಅಭಿಮಾನ ತೋರಿಕೊಂಡಿದ್ದ ಕ್ರಿಕೆಟ್‌ ಅಭಿಮಾನಿ ಅಜ್ಜಿ ಚಾರುಲತಾ ಪಟೇಲ್ ಮೃತಪಟ್ಟಿದ್ದಾರೆ.

87 ವರ್ಷ ವಯಸ್ಸಾಗಿದ್ದ ಚಾರುಲತಾ ಪಟೇಲ್, ಜನವರಿ 13ರಂದು 5.30 pm ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ವಿಶ್ವಕಪ್‌ ಗ್ರೂಪ್‌ ಗೇಮ್‌ ವೇಳೆ ಭಾರತ ತಂಡ ಬಾಂಗ್ಲಾದೇಶ ವಿರುದ್ಧ ಮೈದಾನಕ್ಕಿಳಿದಿದ್ದ ಪಂದ್ಯದ ಸಮಯ ಸ್ಟೇಡಿಯಂ ಬಳಿ ಅಜ್ಜಿ ಮೊದಲ ಬಾರಿ ಕ್ರಿಕೆಟ್‌ ಪ್ರಿಯರ ಗಮನ ಸೆಳೆದಿದ್ದರು.

ಅಜ್ಜಿ ನಿಧನಕ್ಕೆ ಬಿಸಿಸಿಐ ಸಂತಾಪ ಸೂಚಿಸಿ ಟ್ವೀಟ್‌ ಮಾಡಿದೆ. 'ಟೀಮ್ ಇಂಡಿಯಾದ ಸೂಪರ್ ಫ್ಯಾನ್ ಚಾರುಲತಾ ಅವರು ಯಾವತ್ತಿಗೂ ನಮ್ಮ ಹೃದಯದಲ್ಲಿರಲಿದ್ದಾರೆ. ಕ್ರಿಕೆಟ್‌ನೆಡೆಗಿನ ಅವರ ಪ್ರೀತಿ ನಮಗೆಲ್ಲರಿಗೂ ಸ್ಫೂರ್ತಿ ತುಂಬುತ್ತಿರಲಿದೆ,' ಎಂದು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದೆ.

ಬಾಂಗ್ಲಾ ಪಂದ್ಯ ವೇಳೆ, ವಿಶ್ವಕಪ್ ಪಂದ್ಯಗಳ ಟಿಕೆಟ್ ಒದಗಿಸಿಕೊಡುವುದಾಗಿ ವಿರಾಟ್ ಕೊಹ್ಲಿ ಭರವಸೆ ನೀಡಿದ ಬಳಿಕ ವಿಶ್ವಕಪ್ ಗ್ರೂಪ್‌ ಹಂತದ ಅಂತಿಮ ಪಂದ್ಯದಲ್ಲಿ, ಅಂದರೆ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆಯೂ ಚಾರುಲತಾ ಅಜ್ಜಿ ಮೈದಾನದ ಬಳಿ ಕಾಣಿಸಿಕೊಂಡಿದ್ದರು. ಇಳಿವಯಸ್ಸಿನಲ್ಲೂ ಅಜ್ಜಿಗಿದ್ದ ಕ್ರಿಕೆಟ್‌ ಪ್ರೀತಿ ಬಗ್ಗೆ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ಆಗ ಶ್ಲಾಘನೆ ವ್ಯಕ್ತಪಡಿಸಿದ್ದರು.

Story first published: Thursday, January 16, 2020, 13:08 [IST]
Other articles published on Jan 16, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+