ಏಷ್ಯಾ ಕಪ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ, ವಿರಾಟ್ ಕೊಹ್ಲಿಗೆ ವಿಶ್ರಾಂತಿ

ನವದೆಹಲಿ, ಸೆಪ್ಟೆಂಬರ್ 01: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು ಫಾರ್ಮ್‌ನಲ್ಲಿರುವ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ.
16 ಜನರ ತಂಡವನ್ನು ಆಯ್ಕೆ ಬಿಸಿಸಿಐ ಆಯ್ಕೆ ಸಮಿತಿಯು ರೋಹಿತ್ ಶರ್ಮಾ ಅವರಿಗೆ ನಾಯಕತ್ವದ ಜವಾಬ್ದಾರಿ ವಹಿಸಿದೆ. ಶಿಖರ್ ಧವನ್ ಉಪನಾಯಕರಾಗಿದ್ದಾರೆ. ಹಿರಿಯ ಆಟಗಾರ ಎಂಎಸ್ ಧೋನಿ ತಂಡದಲ್ಲಿದ್ದಾರೆ.
ಕರ್ನಾಟಕದ ಮನಿಶ್ ಪಾಂಡೆ ಅವರಿಗೆ ಅವಕಾಶ ನೀಡಲಾಗಿದ್ದು ಅವರ ಜೊತೆಗೆ ಈಗ ಇಂಗ್ಲೆಂಡ್ ನಲ್ಲಿ ಆಡುತ್ತಿರುವ ಕೆ.ಎಲ್.ರಾಹುಲ್ ಅವರಿಗೂ ಅವಕಾಶ ನೀಡಲಾಗಿದೆ.
ಗಾಯದಿಂದ ಚೇತರಿಸಿಕೊಂಡಿರುವ ಭುವನೇಶ್ವರ್ ಕುಮಾರ್ ತಂಡಕ್ಕೆ ಮರಳಿದ್ದರೆ. ಇಂಗ್ಲೆಂಡ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಕೀಪರ್ ರಿಷಬ್ ಪಂತ್ ಅವರನ್ನು ಏಷ್ಯಾ ಕಪ್‌ನಿಂದ ಕೈಬಿಡಲಾಗಿದೆ.
ಏಷ್ಯಾ ಕಪ್‌ಗೆ ಭಾರತ ಕ್ರಿಕೆಟ್ ತಂಡ ಪ್ರಕಟ
ರೋಹಿತ್ ಶರ್ಮ(ನಾಯಕ)
ಶಿಖರ್ ಧವನ್ (ಉಪ ನಾಯಕ)
ಕೆಎಲ್ ರಾಹುಲ್
ಅಂಬಟಿ ರಾಯುಡು
ಮನೀಶ್ ಪಾಂಡೆ
ಕೇದಾರ್ ಜಾಧವ್
ಎಂಎಸ್ ಧೋನಿ(ವಿಕೆಟ್ ಕೀಪರ್)
ದಿನೇಶ್ ಕಾರ್ತಿಕ್
ಹಾರ್ದಿಕ್ ಪಾಂಡ್ಯ
ಅಕ್ಷರ್ ಪಟೇಲ್
ಕುಲದೀಪ್ ಯಾದವ್
ಯಜುವೇಂದ್ರ ಚಾಹಲ್
ಭುವನೇಶ್ವರ್ ಕುಮಾರ್
ಜಸ್ ಪ್ರೀತ್ ಬೂಮ್ರಾ
ಶಾರ್ದೂಲ್ ಠಾಕೂರ್
ಖಲೀಲ್ ಅಹ್ಮದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications