ಬ್ರಿಸ್ಬೇನ್ ಹೋಟೆಲ್‌ನಲ್ಲಿ ಖೈದಿಯಂತೆ ಬಂಧಿಯಾದ ಟೀಮ್ ಇಂಡಿಯಾ!

ಬ್ರಿಸ್ಬೇನ್: ಸಾಕಷ್ಟು ಚರ್ಚೆ, ವಿವಾದಗಳ ಮಧ್ಯೆಯೂ ನಾಲ್ಕನೇ ಟೆಸ್ಟ್ ಪಂದ್ಯದ ಸಲುವಾಗಿ ಬ್ರಿಸ್ಬೇನ್‌ಗೆ ತಲುಪಿರುವ ಟೀಮ್ ಇಂಡಿಯಾ ಆಘಾತ ಅನುಭವಿಸಿದೆ. ಬ್ರಿಸ್ಬೇನ್‌ನ ಹೋಟೆಲ್‌ನಲ್ಲಿ ಭಾರತೀಯ ಆಟಗಾರರನ್ನು ಖೈದಿಗಳಂತೆ ಪ್ರತ್ಯೇಕ ಬಂಧಿಸಿಡಲಾಗಿದೆ. ಆಟಗಾರರಿಗೆ ಕ್ವಾರಂಟೈನ್ ಸಡಿಲಿಸುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಕೋರಿಕೊಂಡ ನಂತರವೂ ಕ್ರಿಕೆಟ್ ಆಸ್ಟ್ರೇಲಿಯಾ ಆಟಗಾರರಿಗೆ ಕಟ್ಟುನಿಟ್ಟಿನ ಕ್ವಾರಂಟೈನ್ ವಿಧಿಸಿದೆ.
ಭಾರತ-ಆಸ್ಟ್ರೇಲಿಯಾ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಂನಲ್ಲಿ ಜನವರಿ 15ರಿಂದ ಆರಂಭಗೊಳ್ಳಲಿದೆ. ಆಸ್ಟ್ರೇಲಿಯಾದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅಲ್ಲಿ ಕಠಿಣ ಕ್ವಾರಂಟೈನ್ ವಿಧಿಸಲಾಗಿದೆ ಎನ್ನಲಾಗುತ್ತಿದೆ.
ಆದರೆ ಇಡೀ ಹೋಟೆಲ್ ಖಾಲಿಯಿದ್ದರೂ ಅಲ್ಲಿ ಯಾವುದೇ ಸೌಲಭ್ಯಗಳನ್ನು ಬಳಸಿಕೊಳ್ಳಲು ಅವಕಾಶವಿಲ್ಲದಾಗಿದೆ ಎಂದು ಆಟಗಾರರು ಬೇಸರ ತೋರಿಕೊಂಡಿದ್ದಾರೆ.

ಶೌಚಾಲಯ ತಾವೇ ಕ್ಲೀನ್ ಮಾಡಬೇಕು
ಬ್ರಿಸ್ಬೇನ್‌ನಲ್ಲಿ ಭಾರತೀಯ ಆಟಗಾರರಿಗೆ ಎಷ್ಟು ಕಟ್ಟುನಿಟ್ಟಿನ ಕ್ವಾರಂಟೈನ್ ವಿಧಿಸಲಾಗಿದೆಯೆಂದರೆ; ಆಟಗಾರರು ತಮ್ಮ ತಮ್ಮ, ಹಾಸಿಗೆಗಳನ್ನು ತಾವೇ ಸಿದ್ಧಪಡಿಸಿಕೊಳ್ಳಬೇಕು, ಶೌಚಾಲಯವನ್ನೂ ತಾವೇ ಸ್ವಚ್ಛ ಮಾಡಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವರದಿಯೊಂದು ಹೇಳಿದೆ.

ಆಟಗಾರರು ಖೈದಿಯಂತೆ ಬಂಧಿ
'ನಮ್ಮನ್ನು ಕೋಣೆಯಲ್ಲಿ ಬಂಧಿಸಿಡಲಾಗಿದೆ. ಇಲ್ಲಿ ನಾವೇ ನಮ್ಮ ಹಾಸಿಗೆ ಸಿದ್ಧಪಡಿಸಿಕೊಳ್ಳಬೇಕು, ನಮ್ಮ ಶೌಚಾಲಯ ನಾವೇ ಸ್ವಚ್ಛ ಮಾಡಿಕೊಳ್ಳಬೇಕು. ಹತ್ತಿರದ ಭಾರತೀಯ ರೆಸ್ಟೋರೆಂಟ್‌ನಿಂದ ಊಟ ತಂದು ನಮ್ಮ ಮಹಡಿಗೆ ನೀಡಲಾಗುತ್ತದೆ. ನಮಗೆ ಗೊತ್ತುಪಡಿಸಿದ ಮಹಿಡಿ ಬಿಟ್ಟು ನಾವು ಬೇರೆಕಡೆ ಚಲಿಸುವಂತೆಯೂ ಇಲ್ಲ,' ಎಂದು ಭಾರತೀಯ ತಂಡದ ಸದಸ್ಯರೊಬ್ಬರು ಹೇಳಿದ್ದಾರೆ.

ಯಾವುದೇ ಸೌಲಭ್ಯಗಳು ಬಳಸುವಂತಿಲ್ಲ
ಟೀಮ್ ಇಂಡಿಯಾ ಆಟಗಾರರು ಉಳಿದುಕೊಳ್ಳುತ್ತಿರುವ ಹೋಟೆಲ್‌ನಲ್ಲಿ ಬೇರೆ ಯಾರೂ ಇಲ್ಲದಿರುವುದರಿಂದ ಇಡೀ ಹೋಟೆಲ್ ಖಾಲಿಯಿದೆ. ಅಲ್ಲಿ ಸ್ವಿಮ್ಮಿಂಗ್ ಪೂಲ್ ಮತ್ತು ಜಿಮ್‌ನಂತ ಸೌಲಭ್ಯಗಳೂ ಇವೆ. ಆದರೆ ಆ ಯಾವುದೇ ಸೌಲಭ್ಯಗಳನ್ನು ಬಳಸಿಕೊಳ್ಳಲು ಆಟಗಾರರಿಗೆ ಅವಕಾಶವಿಲ್ಲ. ಹೋಟೆಲ್ ಒಳಗಿರುವ ಕೆಫೇಸ್, ರೆಸ್ಟೋರೆಂಟ್‌ಗಳು ಮುಚ್ಚಲ್ಪಟ್ಟಿವೆ ತಂಡದ ಜೊತೆಗಿರುವ ಒಬ್ಬರು ಹೋಟೆಲ್ ಅನ್ನು ವಿವರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications