
ಜನವರಿ- ಮಾರ್ಚ್, ಇಂಗ್ಲೆಂಡ್ ವಿರುದ್ಧ ಸರಣಿ
ಭಾರತ ಆಸ್ಟ್ರೇಲಿಯಾ ವಿರುದ್ಧದ ಸರಣಿ ಅಂತ್ಯವಾಗುತ್ತಿದ್ದಂತೆಯೇ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಭಾರತ ಆಯೋಜಿಸುವ ಈ ಸುದೀರ್ಘ ಸರಣಿಯಲ್ಲಿ 4 ಟೆಸ್ಟ್, 4 ಏಕದಿನ ಹಾಗೂ 4 ಟಿ 20 ಪಂದ್ಯಗಳನ್ನು ಹೊಂದಿದೆ.

ಮಾರ್ಚ್- ಮೇ, ಐಪಿಎಲ್ 2021
ಮಾರ್ಚ್‌ನಿಂದ ಮೆ ವರೆಗಿನ ಅವಧಿಯಲ್ಲಿ ಐಪಿಎಲ್ 14ನೇ ಆವೃತ್ತಿ ಆಯೋಜನೆಯಾಗಲಿದೆ. ಈ ಹಿಂದಿನ ಆವೃತ್ತಿ ಕೊರೊನಾ ವೈರಸ್‌ನ ಕಾರಣದಿಂದಾಗಿ 6 ತಿಂಗಳು ತಡವಾಗಿ ಟೂರ್ನಿ ನಡೆದಿತ್ತು. ಅದಾಗಿ 5-6 ತಿಂಗಳ ಅಂತರದಲ್ಲಿ ಮತ್ತೊಂದು ಐಪಿಎಲ್ ಟೂರ್ನಿ ಆಯೋಜನೆಯಾಗಲಿದೆ.

ಜೂನ್- ಜುಲೈ, ಶ್ರೀಲಂಕಾ ಪ್ರವಾಸ
ಐಪಿಎಲ್ ಮುಕ್ತಾಯವಾಗುತ್ತಿದ್ದಂತೆಯೇ ಜೂನ್ ತಿಂಗಳಿನಲ್ಲಿ ಭಾರತ ಶ್ರೀಲಂಕಾಗೆ ಹಾರಲಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯನ್ನು ಶ್ರಿಲಂಕಾದಲ್ಲಿ ಆಡಲಿದೆ. 3 ಏಕದಿನ ಪಂದ್ಯಗಳ ಸರಣಿ ಹಾಗೂ 5 ಟಿ20 ಪಂದ್ಯಗಳ ಸರಣಿ ಆಡಲಿದೆ. ಈ ಸರಣಿ ಮುಕ್ತಾಯವಾಗುತ್ತಿದ್ದಂತೆಯೆ ಶ್ರೀಲಂಕಾದಲ್ಲೇ ನಡೆಯಲಿರುವ ಏಷ್ಯಾಕಪ್‌ನಲ್ಲಿ ಭಾರತ ಪಾಲ್ಗೊಳ್ಳಲಿದೆ.

ಜುಲೈನಲ್ಲಿ ಜಿಂಬಾಬ್ವೆಗೆ ಹಾರಲಿದೆ ಭಾರತ
ಏಷ್ಯಾ ಕಪ್ ಮುಗಿದ ಬಳಿಕ ಜುಲೈನಲ್ಲಿ ಭಾರತ ಮತ್ತೊಂದು ಪ್ರವಾಸಕ್ಕೆ ತೆರಳಲಿದೆ. 3 ಏಕದಿನ ಪಂದ್ಯಗಳ ಸರಣಿಗೆ ಭಾರತ ಜಿಂಬಾಬ್ವೆಗೆ ಹಾರಲಿದೆ. ಈ ಸರಣಿಗೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಯುವ ಅಟಗಾರರಿಗೆ ಹೆಚ್ಚಿನ ಅವಕಾಶ ಈ ಸರಣಿಯಲ್ಲಿ ದೊರೆಯಲಿದೆ.

ಜುಲೈ-ಸೆಪ್ಟೆಂಬರ್, ಇಂಗ್ಲೆಂಡ್ ಪ್ರವಾಸಕ್ಕೆ ಭಾರತ
ವರ್ಷಾರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿ ತವರಿನಲ್ಲಿ ಆಯೋಜನೆ ಮಾಡಿದ ಬಳಿಕ ಇಂಗ್ಲೆಂಡ್‌ಗೆ ತೆರಳಿ ಅಲ್ಲೂ ಭಾರತ ತನ್ನ ಅಗ್ನಿಪರೀಕ್ಷೆಗೆ ಒಳಗಾಗಲಿದೆ. ಸುದೀರ್ಘ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ಇಂಗ್ಲೆಂಡ್ ಭಾಗವಹಿಸಲಿದೆ. ಇದು ವಿಶ್ವ ಟೆಸ್ಟ್ ಚಾಂಪಿಯನ್‌ನ ಭಾಗವಾದ ಕಾರಣ ಎರಡು ತಂಡಗಳಿಗೂ ಮಹತ್ವದ್ದಾಗಿರಲಿದೆ.

ಅಕ್ಟೊಬರ್- ಆಫ್ರಿಕಾ ವಿರುದ್ಧ ಸರಣಿ ಆಯೋಜನೆ
ಅಕ್ಟೋಬರ್ ತಿಂಗಳಿನಲ್ಲಿ ಭಾರತ ಸಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಪಾಲ್ಗೊಳ್ಳಲಿದೆ. 3 ಏಕದಿನ ಹಾಗೂ 5 ಟಿ20 ಪಂದ್ಯಗಳ ಸೀಮಿತ ಓವರ್‌ಗಳ ಸರಣಿ ಇದಾಗಿದ್ದು ವಿಶ್ವಕಪ್‌ಗೆ ಪೂರ್ವತಯಾರಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿದೆ.

ಐಸಿಸಿ ಟಿ20 ವಿಶ್ವಕಪ್
ದಕ್ಷಿಣ ಆಫ್ರಿಕಾ ವಿರುದ್ಧದ ಸೀಮಿತ ಓವರ್‌ಗಳ ಸರಣಿ ಮುಕ್ತಾಯವಾಗುತ್ತಿದ್ದಂತೆಯೇ ಭಾರತ ಮಹತ್ವದ ಟೂರ್ನಿಗೆ ಸಿದ್ದವಾಗಲಿದೆ. ಅಕ್ಟೊಬರ್- ನವೆಂಬರ್ ತಿಂಗಳ ಅವಧಿಯಲ್ಲಿ ಭಾರತ ಐಸಿಸಿ ಟಿ20 ವಿಶ್ವಕಪ್‌ಅನ್ನು ಆಯೋಜನೆ ಮಾಡಲಿದೆ.

ನ್ಯೂಜಿಲೆಂಡ್ ವಿರುದ್ಧ ಸರಣಿ ಆಯೋಜನೆ
ದಕ್ಷಿಣ ಆಫ್ರಿಕಾ ಹಾಗೂ ಟಿ20 ವಿಶ್ವಕಪ್ ಬಳಿಕ ಕೀವಿಸ್ ಕ್ರಿಕೆಟ್ ತಂಡವನ್ನು ಭಾರತ ಸ್ವಾಗತಿಸಲಿದೆ. ಎರಡು ಟೆಸ್ಟ್ ಹಾಗೂ ಮೂರು ಟಿ20 ಕ್ರಿಕೆಟ್ ಪಂದ್ಯಗಳ ಸರಣಿಯಲ್ಲಿ ಈ ಎರಡು ತಂಡಗಳು ಭಾರತದಲ್ಲಿ ಹೋರಾಟವನ್ನು ನಡೆಸಲಿದೆ.

ಡಿಸೆಂಬರ್‌ನಲ್ಲಿ ದಕ್ಷಿಣ ಆಫ್ರಿಕಾಗೆ ಪ್ರವಾಸ
ನ್ಯೂಜಿಲೆಂಡ್ ವಿರುದ್ಧದ ಸರಣಿ ಅಂತ್ಯಗೊಳ್ಳುತ್ತಿದ್ದಂತೆಯೇ ಭಾರತ ಮತ್ತೊಮ್ಮೆ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಬಾರಿ ದಕ್ಷಿಣ ಆಫ್ರಿಕಾಗೆ ತೆರಳಿ ಅದರ ನೆಲದಲ್ಲೇ ಅಗ್ನಿ ಪರೀಕ್ಷೆಗೆ ಟೀಮ್ ಇಂಡಿಯಾ ಒಳಗಾಗಲಿದೆ. 3 ಟೆಸ್ಟ್ ಹಾಗೂ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಪಾಲ್ಗೊಳ್ಳಲಿದೆ.


Click it and Unblock the Notifications
