Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೋ-ಆಸಿಸ್ ಸರಣಿ: ಕಪಿಲ್‌ದೇವ್ ಕಾಲದ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆಯಾ ಟೀಮ್ ಇಂಡಿಯಾ?

Indian Cricket Team To Wear New Jersey with Retro theme

ಐಪಿಎಲ್ ಟೂರ್ನಿಯ ರೋಚಕ ಅನುಭವದ ನಂತರ ಟೀಮ್ ಇಂಡಿಯಾ ಕ್ರಿಕೆಟ್ ತಂಡ ಮಹತ್ವದ ಸರಣಿಯೊಂದಕ್ಕೆ ಸಜ್ಜಾಗಿದೆ. ಕೊರೊನಾ ವೈರಸ್‌ ಬಳಿಕ ಭಾರತ ಪಾಳ್ಗೊಳ್ಳತ್ತಿರುವ ಮೊದಲ ಸರಣಿ ಇದಾಗಿದೆ. ಆಸ್ಟ್ರೇಲಿಯಾದ ವಿರುದ್ಧ ಆಸ್ಟ್ರೇಲಿಯಾ ನೆಲದಲ್ಲಿ ನಡೆಯುತ್ತಿರುವ ಈ ಸರಣಿ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ.

ಈ ಪ್ರಮುಖ ಸರಣಿಯಲ್ಲಿ ಭಾರತ ಸೀಮತ ಓವರ್‌ಗಳಲ್ಲಿ ವಿಶೇಷ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ ಭಾರತ ಕ್ರಿಕೆಟ್ ತಂಡದ ಜರ್ಸಿ ವಿಶೇಷವಾಗಿರಲಿದೆ. 70-80ರ ದಶಕದಲ್ಲಿ ಭಾರತ ಧರಿಸುತ್ತಿದ್ದ ಮಾದರಿಯ ಜರ್ಸಿಯಲ್ಲಿ ಈ ಟೂರ್ನಿಯಲ್ಲಿ ಕಂಗೊಳಿಸಲಿದೆ ಎನ್ನಲಾಗುತ್ತಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಿದೆ. ಮೊದಲಿಗೆ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿ ಬಳಿಕ ಏಕದಿನ ಸರಣಿಯ ಮೂಲಕ ಟೂರ್ನಿಗೆ ಚಾಲನೆ ದೊರೆಯಲಿದೆ. ಈ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ 3 ಏಕದಿನ, 3 ಟಿ20 ಹಾಗೂ 4 ಟೆಸ್ಟ್ ಪಂದ್ಯಗಳಲ್ಲಿ ಕೋರಾಟವನ್ನು ನಡೆಸಲಿದೆ.

'ರೆಟ್ರೋ' ಥೀಮ್‌ನ ಈ ಜರ್ಸಿ ಕಡು ನೀಲಿ ಹಾಗೂ ತಿಳಿ ನೀಲಿ ಬಣ್ಣದಿಂದ ಕೂಡಿರಲಿದೆ. ಈದರಲ್ಲಿ ಬಿಸಿಸಿಐನ ಲೋಗೋ ಹಾಗೂ ಹೊಸ ಕಿಟ್ ಸ್ಪಾನ್ಸರ್ 'ಎಂಪಿಎಲ್' ಲೋಗೋ ಕೂಡ ಕಾಣಿಸಿಕೊಳ್ಳಲಿದೆ. ಈ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ.

ಇನ್ನು ಭಾರತ ವಿರುದ್ಧದ ಟಿ20 ಸರಣಿಗೆ ಆಸ್ಟ್ರೇಲಿಯಾ ಕೂಡ ವಿಶೇಷ ಜರ್ಸಿಯನ್ನು ಬಿಡುಗಡೆಗೊಳಿಸಿದೆ. ಸ್ಥಳೀಯ ವಿನ್ಯಾಸದ ವಿಶೇಷ ಜರ್ಸಿಯೊಂದಿಗೆ ಆಸ್ಟ್ರೇಲಿಯಾ ಭಾರತದ ವಿರುದ್ಧ ಕಣಕ್ಕಿಳಿಯಲಿದೆ. ಕ್ರೀಡೆಯಲ್ಲಿ ಸ್ಥಳೀಯ ಆಸ್ಟ್ರೇಲಿಯನ್ನರಿಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಕ್ರಿಕೆಟ್ ಆಸ್ಟ್ರೇಲಿಯಾ ಈ ನಿರ್ಧಾರವನ್ನು ಕೈಗೊಂಡಿದೆ.

Story first published: Thursday, November 12, 2020, 9:04 [IST]
Other articles published on Nov 12, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+