ಟಿ20 ವಿಶ್ವಕಪ್‌ಗೂ ಮುನ್ನ ಎಷ್ಟು ಪಂದ್ಯ ಆಡಲಿದೆ ಟೀಮ್ ಇಂಡಿಯಾ?
ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾರತ ಇಂದು ಯುಎಇ ವಿರುದ್ಧ ಅಂಗಳ ಪ್ರವೇಶಿಸಲಿದೆ. ಕ್ರಿಕೆಟ್ ಅಭಿಮಾನಿಗಳ ಕಣ್ಣು ಟೀಮ್ ಇಂಡಿಯಾದ ಸ್ಟಾರ್ ಆಟಗಾರರ ಮೇಲೆ ನೆಟ್ಟಿದೆ. ಹಾಲಿ ಟಿ20 ವಿಶ್ವಕಪ್ ಚಾಂಪಿಯನ್ ತಂಡ, ಬಲಢ್ಯವಾಗಿದ್ದು, ಕಪ್ ಗೆಲ್ಲುವ ಭರವಸೆಯನ್ನು ಹೊಂದಿದೆ. ಇನ್ನು ಟಿ20 ವಿಶ್ವಕಪ್ ಬಳಿಕ ಇದೇ ಮೊದಲ ಬಾರಿಗೆ ಸುರ್ಯಕುಮಾರ್ ಪಡೆ ದೊಡ್ಡ ಟೂರ್ನಿಯೊಂದರಲ್ಲಿ ಭಾಗವಹಿಸಲಿದೆ. ಗೌತಮ್ ಗಂಭೀರ್ ಪಡೆಯ ದೃಷ್ಟಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮೇಲೆ ನೆಟ್ಟಿದೆ. ಹಾಗಿದ್ದರೆ ಟೀಮ್ ಇಂಡಿಯಾ ಇನ್ನು ಎಷ್ಟು ಟಿ20 ಪಂದ್ಯಗಳನ್ನು ಆಡಲಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಟಿ20 ವಿಶ್ವಕಪ್‌ಗೂ ಮುನ್ನ ಭಾರತವು ಏಷ್ಯಾ ಕಪ್ ಸೇರಿದಂತೆ ಒಟ್ಟು ಮೂರು ಟಿ20 ಸರಣಿಗಳನ್ನು ಆಡಲಿದೆ. ದ್ವಿಪಕ್ಷೀಯ ಸರಣಿಗಳು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್ ವಿರುದ್ಧ ನಡೆಯಲಿದೆ. ಏಷ್ಯಾ ಕಪ್ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಬೆಳೆಸಲಿದೆ. ಈ ಸರಣಿ ಅ.29 ರಿಂದ ಆರಂಭವಾಗಿ ನ.8ರ ವರೆಗೆ ನಡೆಯಲಿದೆ. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ, ಆಸೀಸ್ ವಿರುದ್ಧ ಕಾದಾಟ ನಡೆಸಲಿದೆ. ಇದೇ ವೇಳೆ ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಸಹ ಆಡಲಿದೆ.

ಆಸೀಸ್ ಪ್ರವಾಸದ ಬಳಿಕ ಸೂರ್ಯ ಪಡೆ ದಕ್ಷಿಣ ಆಫ್ರಿಕಾ ವಿರುದ್ಧ ಕಾದಾಟವನ್ನು ನಡೆಸಲಿದೆ. ಉಭಯ ದೇಶಗಳ ನಡುವೆ ಒಟ್ಟು 5 ಟಿ20 ಪಂದ್ಯಗಳು ನಡೆಯಲಿವೆ. ಈ ಸರಣಿ ಡಿ.9 ರಿಂದ ಡಿ.19 ರವರೆಗೆ ನಡೆಯಲಿದೆ. ಇದಾದ ಬಳಿಕ ಭಾರತ ತಂಡ ಮುಂದಿನ ವರ್ಷದ ಆರಂಭದಲ್ಲಿ ನ್ಯೂಜಿಲೆಂಡ್ ವಿರುದ್ಧ 5 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿ 2026ರ ಜ.21 ರಿಂದ ಜ.31ರ ವರೆಗೆ ನಡೆಯಲಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಒಟ್ಟು 20 ಟಿ20 ಪಂದ್ಯಗಳನ್ನು ಆಡಲಿದೆ.
ಏಷ್ಯಾ ಕಪ್‌ನಲ್ಲಿ ಎಷ್ಟು ಪಂದ್ಯ ಆಡಲಿದೆ ಭಾರತ?
ಭಾರತ ತಂಡ ಬುಧವಾರ ಏಷ್ಯಾಕಪ್‌ನಲ್ಲಿ ತನ್ನ ಲೀಗ್ ಹಂತದ ಮೊದಲ ಪಂದ್ಯವನ್ನು ಆಡಲಿದೆ. ಇದಾದ ಬಳಿಕ ಪಾಕಿಸ್ತಾನ ವಿರುದ್ಧ ಸೆ.14 ರಂದು ಜಿದ್ದಾಜಿದ್ದಿನ ಕಾದಾಟ ಕಾಣಲಿದೆ. ಸೆ.19 ರಂದು ಭಾರತ ಓಮನ್ ವಿರುದ್ಧ ಲೀಗ್ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಗುಂಪು ಹಂತದ ಪಂದ್ಯದಲ್ಲಿಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಸೂಪರ್ 4ಗೆ ಅರ್ಹತೆ ಪಡೆಯಲಿವೆ. ಸೂಪರ್ 4 ಹಂತದಲ್ಲೂ ಪ್ರತಿ ತಂಡಕ್ಕೆ ಮೂರು ಪಂದ್ಯಗಳು ಸಿಗಲಿದ್ದು, ಇದಾದ ಬಳಿಕ ಸೆ.28 ರಂದು ಫೈನಲ್ ಪಂದ್ಯ ನಡೆಯಲಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರಂತಹ ಸೂಪರ್ ಸ್ಟಾರ್ ಆಟಗಾರರು ಇಲ್ಲದೇ ಇದೇ ಮೊದಲ ಬಾರಿಗೆ ತಂಡ ಬಹು ವರ್ಷಗಳ ಬಳಿಕ ಕಣಕ್ಕೆ ಇಳಿಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications