ಸೆಕ್ಯೂರಿಟಿ ಗಾರ್ಡ್ ಜೊತೆಗೆ ಡ್ಯಾನ್ಸ್ ಮಾಡಿ ಮನಗೆದ್ದ ಟೀಮ್ ಇಂಡಿಯಾ ಆಟಗಾರ್ತಿ

ಟೀಮ್ ಇಂಡಿಯಾ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಕ್ರಿಕೆಟ್ ಆಟದ ಹೊರತಾಗಿ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ್ದಾರೆ. ಟೀಮ್ ಇಂಡಿಯಾದ ಪ್ರತಿಭಾನ್ವಿತ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಬ್ಯಾಟಿಂಗ್‌ನಲ್ಲಿ ಮಿಂಚಿ ಸದ್ದು ಮಾಡುತ್ತಿರುತ್ತಾರೆ ಆದರೆ ಇಂದು ಬೇರೆಯೇ ಕಾರಣಕ್ಕೆ ಸುದ್ದಿಯಾಗಿದ್ದಾರೆ.
ಜೆಮಿಮಾ ರೋಡ್ರಿಗಸ್ ಇಂದು ಟ್ವಿಟ್ಟರ್‌ನಲ್ಲಿ ಸೌಂಡ್ ಮಾಡಲು ಕಾರಣ ಆಕೆಯ ನೃತ್ಯ. ಹೌದು ಟೀಮ್ ಇಂಡಿಯಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿರುವ ಜೆಮಿಮಾ ರೋಡ್ರಿಗಸ್ ನ್ಯುಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ಸೆಕ್ಯೂರಿಟಿ ಗಾರ್ಡ್ ಯುವತಿಯ ಜೊತೆಗೆ ಹೆಜ್ಜೆ ಹಾಕಿದ್ದಾರೆ.
ಜೆಮಿಮಾ ರೋಡ್ರಿಗಸ್ ಅವರ ಈ ವೀಡಿಯೋವನ್ನು ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಈ ನೃತ್ಯಕ್ಕೆ ಅಭಿಮಾನಿಗಳು ಭರ್ಜರಿಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಜೆಮಿಮಾ ಅವರ ನೃತ್ಯಕ್ಕೆ ಹಾಗೂ ಇತರರೊಂದಿಗೆ ಬೆರೆಯುವ ಗುಣಕ್ಕೆ ಶಬ್ಬಾಷ್‌ಗಿರಿಯನ್ನು ಪಡೆದುಕೊಂಡಿದ್ದಾರೆ.
Yes, @JemiRodrigues! 💃💃
— ICC (@ICC) February 27, 2020
Busting moves with an off-duty security guard at the #T20WorldCup pic.twitter.com/ehUdGQc3QV
ಟೀಮ್ ಇಂಡಿಯಾ ವನಿತೆಯರು ವಿಶ್ವ ಕಪ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದಾರೆ. ಇಂದು ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಈ ರೀತಿ ಜೆಮಿಮಾ ನೃತ್ಯವನ್ನು ಮಾಡಿ ಸೀಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯವನ್ನು ಟೀಮ್ ಇಂಡಿಯಾ ರೋಚಕವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಕೊನೆಯ ಎಸೆತದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡವನ್ನು 3 ರನ್‌ಗಲ ಅಂತರದಲ್ಲಿ ಗೆದ್ದು ಸೆಮಿಫೈನಲ್‌ಗೆ ಹೆಜ್ಜೆಯಿಟ್ಟಿದೆ. ಮುಂದಿನ ಪಂದ್ಯ ಶ್ರೀಲಂಕಾ ವಿರುದ್ಧ 29ನೇ ತಾರೀಕಿನಂದು ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications