'ಹೊಸ ಪಯಣ ಆರಂಭ': ಟಿಎಂಸಿ ಸೇರಿದ ಕ್ರಿಕೆಟಿಗ ಮನೋಜ್ ತಿವಾರಿ

ಕೋಲ್ಕತ್ತಾ: ವೆಸ್ಟ್ ಬೆಂಗಾಲ್‌ನಲ್ಲಿ ವಿಧಾನಸಭಾ ಚುನಾವಣೆ ಮುಂದಿರುವಾಗಲೇ ಭಾರತದ ಕ್ರಿಕೆಟಿಗ ಮನೋಜ್ ತಿವಾರಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿಸಿಕೊಂಡಿದ್ದಾರೆ. ಹೂಗ್ಲಿ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜೀ ಪ್ರಚಾರ ರ್‍ಯಾಲಿ ವೇಳೆ ತಿವಾರಿ ಟಿಎಂಸಿಗೆ ಸೇರ್ಪಡೆಯಾಗಿದ್ದಾರೆ.
ಕ್ರಿಕೆಟ್ ವೃತ್ತಿ ಬದುಕಿನಿಂದ ರಾಜಕೀಯಕ್ಕೆ ಪಾದಾರ್ಪಣೆ ಮಾಡುತ್ತಿರುವ ಮನೋಜ್ ತಿವಾರಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಇಂದಿನಿಂದ 'ಹೊಸ ಪಯಣ ಆರಂಭ' ಎಂದು ಬರೆದುಕೊಂಡಿದ್ದಾರೆ. ತಿವಾರಿಯ ಇನ್‌ಸ್ಟಾಗ್ರಾಮ್ ಪರಿಚಯ ಪುಟದಲ್ಲೂ 'ಪೊಲಿಟಿಶಿಯನ್, ಎಐಟಿಎಂಸಿ' ಎಂದು ಬರೆದುಕೊಳ್ಳಲಾಗಿದೆ.
ಇತ್ತೀಚೆಗೆ ತಿವಾರಿ ಭಾರತದ ಪ್ರಸ್ತುತ ಮತ್ತು ಮಾಜಿ ಅನೇಕ ಕ್ರಿಕೆಟಿಗರ ವಿರುದ್ಧ ಕಿಡಿಕಾರಿದ್ದರು. ರೈತರ ಪ್ರತಿಭಟನೆಗೆ ಬೆಂಬಲಿಸಿದ್ದ ವಿದೇಶಿ ಸೆಲೆಬ್ರಿಟಿಗಳ ವಿರುದ್ಧ ಟ್ವೀಟ್ ಮಾಡಿದ್ದ ಭಾರತೀಯ ಕ್ರಿಕೆಟಿಗರಿಗೆ ತಿವಾರಿ ಟ್ವೀಟ್ ಮೂಲಕವೇ ತಿರುಗೇಟು ನೀಡಿದ್ದರು.
ಮೂಲತಃ ಬೆಂಗಾಲ್‌ನವರೇ ಆದ 35ರ ಹರೆಯದ ಮನೋಜ್ ತಿವಾರಿ ಭಾರತ ರಾಷ್ಟ್ರೀಯ ತಂಡದ ಪರ 12 ಏಕದಿನ ಪಂದ್ಯಗಳಲ್ಲಿ 287 ರನ್, 1 ಶತಕ, 1 ಟಿ20ಐ ಇನ್ನಿಂಗ್ಸ್‌ನಲ್ಲಿ 15 ರನ್ ಬಾರಿಸಿದ್ದಾರೆ. 85 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 1695 ರನ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications