Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವೈವಾಹಿಕ ಜೀವನಕ್ಕೆ ಕಾಲಿಟ್ಟ ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ

ಭಾರತದ ವೇಗದ ಬೌಲರ್ ನವ್‌ದೀಪ್ ಸೈನಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈರ್ಯಾಣದಲ್ಲಿ ಹುಟ್ಟಿ ಬೆಳೆದಿರುವ ಅವರು 2019ರಲ್ಲಿ ಭಾರತ ತಂಡದ ಪರವಾಗಿ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇದೀಗ ಅವರು ತಮ್ಮ 30ನೇ ಹರೆಯದಲ್ಲಿ ಸುದೀರ್ಘ ಕಾಲದ ಗೆಳತಿ ಸ್ವಾತಿ ಅಸ್ಥಾನ ಜೊತೆಗೆ ವೂವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವುದನ್ನು ಸ್ವತಃ ನವ್‌ದೀಪ್ ಸೈನಿ ಇನ್‌ಸ್ಟಾಗ್ರಾಂ ಪೋಸ್ಟ್ ಪೂಲಕ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. "ನಿನ್ನ ಜೊತೆಗೆ ಪ್ರತಿ ದಿನವೂ ಪ್ರೀತಿಯ ದಿನ. ಇಂದು ನಾವು ಎಂದೆಂದಿಗೂ ಜೊತೆಯಾಗಿರಲು ನಿರ್ಧರಿಸಿದ್ದೇವೆ. ನಿಮ್ಮೆಲ್ಲರ ಆಶಿರ್ವಾದ ಬಯಸುತ್ತಿದ್ದೇನೆ. ನಮ್ಮ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ" ಎಂದು ನವ್‌ದೀಪ್ ಸೈನಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

Indian cricketer Navdeep Saini married his long time girlfriend Swati Asthana

ಸ್ವಾತಿ ಅಸ್ಥಾನ ವ್ಲಾದರ್ ಆಗಿದ್ದು ಫ್ಯಾಶನ್, ಟ್ರಾವೆಲ್ ಹಾಗೂ ಲೈಫ್‌ಸ್ಟೈಲ್ ವಿಭಾಗದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಅವರ ಸಾಮಾಜಿಕ ಜಾಲತಾಣದ ಖಾತೆಯ ಪೋಸ್ಟ್‌ಗಳನ್ನು ನೋಡಿದಾಗಲೇ ಸಾಕಷ್ಟು ವಿಭಿನ್ನ ವಿಚಾರಗಳ ಬಗ್ಗೆ ಆಸಕ್ತರಾಗಿರುವುದು ಸ್ಪಷ್ಟವಾಗುತ್ತದೆ.

ಇನ್ನು ವೇಗಿ ಸೈನಿ ತೀರಾ ಇತ್ತೀಚೆಗೆ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT) ನಲ್ಲಿ ಕಾಣಿಸಿಕೊಂಡಿದ್ದಾರೆ. ದೆಹಲಿ ಪರವಾಗಿ ಆಡುವ ಸೈನಿ ಸೆಮಿ-ಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಸೋಲಿನ ರುಚಿ ಅನುಭವಿಸುವ ಮೂಲಕ ನಿರಾಸೆ ಕಂಡಿದ್ದರು. ಈ ಪಂದ್ಯದಲ್ಲಿ ಸೈನಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದರು. ಈ ಟೂರ್ನಿಯಲ್ಲಿ ಸೈನಿ ಏಳು ಪಂದ್ಯಗಳಲ್ಲಿ ಕೇವಲ ನಾಲ್ಕು ವಿಕೆಟ್‌ಗಳನ್ನು ಪಡೆಯುವಲ್ಲಿ ಮಾತ್ರವೇ ಯಶಸ್ವಿಯಾದರು.

Story first published: Friday, November 24, 2023, 11:33 [IST]
Other articles published on Nov 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+