ಕಣ್ಸನ್ನೆ ಹುಡುಗೀನೇ ಸರಿಗಟ್ಟೋ ಕ್ರಿಕೆಟ್ ಸುಂದರಿ ಪ್ರಿಯಾ ಪೂನಿಯಾ!

ಜೈಪುರ, ಅಕ್ಟೋಬರ್ 15: ಕಣ್ಹೊಡೆದು ಭಾರತೀಯ ಯುವಕರ ಗುಂಡಿಗೆಗೆ ಗುಂಡೇಟು ಕೊಟ್ಟಿದ್ದ ಪ್ರಿಯಾ ವಾರಿಯರ್ ಬೆಳಗ್ಗೆಯಾಗೋವಷ್ಟರಲ್ಲಿ ಫೇಮಸ್ ಆಗಿದ್ದರು. ಆಕೆ ಕಣ್ಣೊಡೆದು ಕೈಯಲ್ಲೇ ಗುಂಡು ಹೊಡೆಯೋ ವಿಡಿಯೋವನ್ನು ಐದತ್ತು ಬಾರಿ ನೋಡಿದವರೆಷ್ಟೋ. ಈ ಬಾರಿ ಮತ್ತೊಬ್ಬಳು ಪ್ರಿಯಾ ದೇಶದ್ಯಾಂತ ಹುಡುಗರ ಕ್ರಷ್ ಆಗಿ ಕಾಣಿಸಿಕೊಂಡಿದ್ದಾರೆ.
ಈಕೆ ಹೆಸರು ಪ್ರಿಯಾ ಪೂನಿಯಾ. ಭಾರತ ಪ್ರವಾಸದಲ್ಲಿದ್ದ ದಕ್ಷಿಣ ಆಫ್ರಿಕಾ ವನಿತಾ ತಂಡದ ವಿರುದ್ಧ ಟೀಮ್ ಇಂಡಿಯಾ ಪರ ಅಕ್ಟೋಬರ್ 9ರಂದು ಏಕದಿನಕ್ಕೆ ಪಾದಾರ್ಪಣೆ ಮಾಡಿದ್ದರು. ಪಾದಾರ್ಪಣೆ ಪಂದ್ಯದಲ್ಲೇ ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ದೇಸಿಗರ ಮನಸ್ಸೂ ಕದ್ದಿದ್ದರು.
ಆರಂಭಿಕ ಆಟಗಾರ್ತಿ ಪ್ರಿಯಾ ಪೂನಿಯಾ 75, ಜೆಮಿಮಾ ರೋಡ್ರಿಗಸ್ 55 ರನ್ ಕೊಡುಗೆಯೊಂದಿಗೆ ಭಾರತ 41.4 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 165 ರನ್ ಗಳಿಸಿ, ಆ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದಿತ್ತು; ಅದೂ ಬರೋಬ್ಬರಿ 50 ಎಸೆತಗಳು ಬಾಕಿಯಿರಿಸಿ.

ಆಕರ್ಷಕ ಫೋಟೋಗಳು
ಪಾದಾರ್ಪಣೆ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ತೋರಿಸಿದ್ದ ಸುಂದರಿ ಪ್ರಿಯಾ ಪೂನಿಯಾ, ಇನ್‌ಸ್ಟಾಗ್ರಾಮ್‌ನಲ್ಲಿ ಆಕರ್ಷಕ ಫೋಟೋಗಳನ್ನು ಹಂಚಿಕೊಂಡು ಮತ್ತೆ ಸುದ್ದಿಯಲ್ಲಿದ್ದಾರೆ.

3 ಏಕದಿನ ಪಂದ್ಯಗಳು
ದಕ್ಷಿಣ ಆಫ್ರಿಕಾ ವನಿತಾ ತಂಡದ ವಿರುದ್ಧವೇ 3 ಏಕದಿನ ಪಂದ್ಯಗಳನ್ನಾಡಿದ್ದ ಪ್ರಿಯಾ ಒಟ್ಟಿಗೆ 95 ರನ್ ಗಳಿಸಿದ್ದಾರೆ. 3 ಟಿ20ಐ ಪಂದ್ಯಗಳಲ್ಲಿ 9 ರನ್ ಗಳಿಸಿದ್ದಾರೆ.

ಜೈಪುರ್ ಬೆಡಗಿ ಪ್ರಿಯಾ
23ರ ಹರೆಯದ ಬಲಗೈ ಆಟಗಾರ್ತಿ ಪ್ರಿಯಾ ಜನಿಸಿದ್ದು ರಾಜಸ್ಥಾನ ರಾಜ್ಯದ ಜೈಪುರ್‌ನಲ್ಲಿ 1996ರ ಆಗಸ್ಟ್ 6 ರಂದು.

ಗಾಯಗೊಂಡಿದ್ದ ಸ್ಮೃತಿ
ಭಾರತದ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಮೃತಿ ಮಂಧಾನ ಗಾಯಗೊಂಡಿದ್ದರಿಂದ ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧದ ಸರಣಿಯಲ್ಲಿ ಪ್ರಿಯಾಗೆ ಅವಕಾಶ ಲಭಿಸಿತ್ತು.

ಪ್ರಮುಖ ತಂಡಗಳು
ಟೀಮ್ ಇಂಡಿಯಾವಲ್ಲದೆ ದೆಹಲಿ ಮಹಿಳಾ ತಂಡ, ಇಂಡಿಯಾ ಗ್ರೀನ್, ಸೂಪರ್ ನೋವಾಸ್ ತಂಡಗಳನ್ನು ಪ್ರಿಯಾ ಪೂನಿಯಾ ಪ್ರತಿನಿಧಿಸುತ್ತಿದ್ದಾರೆ.

ಟಿ20ಐಗೆ ಪಾದಾರ್ಪಣೆ
ಟೀಮ್ ಇಂಡಿಯಾ ಮಹಿಳಾ ತಂಡ ನ್ಯೂಜಿಲೆಂಡ್ ಪ್ರವಾಸದಲ್ಲಿದ್ದಾಗ ವೆಲ್ಲಿಂಗ್ಟನ್‌ನಲ್ಲಿ 2019ರ ಫೆಬ್ರವರಿ 6ರಂದು ಪೂನಿಯಾ ಟಿ20ಐಗೆ ಪಾದಾರ್ಪಣೆ ಮಾಡಿದ್ದರು.

ಆಟ-ನೋಟ ಎರಡೂ ಸೊಗಸು
ಸೊಗಸಾಗಿ ಕ್ರಿಕೆಟ್ ಆಡುವ ಪ್ರತಿಭಾನ್ವಿತೆ ಪ್ರಿಯಾ, ನೋಡೋದಕ್ಕೂ ಸೊಗಸಾಗಿದ್ದಾರೆ. ಪ್ರಿಯಾ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications