5.25 ಕೋ.ರೂ. ಮೌಲ್ಯದ ಲೋನವ್ಲಾ ವಿಲ್ಲಾ ಮಾರಿದ ರೋಹಿತ್ ಶರ್ಮಾ

ಮುಂಬೈ: ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ತನ್ನ ಆಸ್ತಿಯೊಂದನ್ನು ಮಾರಾಟ ನಡೆಸಿದ್ದಾರೆ. 5.25 ಕೋಟಿ ರೂ. ಮೌಲ್ಯದ ಲೋನವ್ಲಾ ವಿಲ್ಲಾವನ್ನು ರೋಹಿತ್ ಮಾರಾಟ ಮಾಡಿದ್ದಾರೆ. ಸುಮಾರು 6,329 ಸ್ಕ್ವೇರ್‌ಫೀಟ್ ವಿಸ್ತೀರ್ಣದ ಈ ಲೋನವ್ಲಾ ವಿಲ್ಲಾವನ್ನು ಮುಂಬೈ ಮೂಲದ ಸುಷ್ಮಾ ಅಶೋಕ್ ಸರಫ್ ಖರೀದಿಸಿದ್ದಾರೆ.
ಝ್ಯಾಪ್‌ಕೀ.ಕಾಮ್ ವರದಿಯ ಪ್ರಕಾರ, ರೋಹಿತ್ ಶರ್ಮಾ ನೋಂದಣಿ ದಾಖಲಾತಿಗಳಿಗಾಗಿ 26.25 ಲಕ್ಷ ರೂ.ವನ್ನು ಒಪ್ಪಂದದ ಸ್ಟ್ಯಾಂಪ್ ಡ್ಯೂಟಿಯಾಗಿ ಪಾವತಿಸಿದ್ದಾರೆ. ಈ ಒಪ್ಪಂದ 2021ರ ಜೂನ್ 1 ರಂದು ನೋಂದಾಯಿಸಲ್ಪಟ್ಟಿತ್ತು.
ರಜಾ ದಿನಗಳನ್ನು ಖುಷಿಯಾಗಿ ಕಳೆಯುವ ತಾಣಗಳಿಗಾಗಿ ಲೋನವ್ಲಾ ವಿಲ್ಲಾ ಹೆಚ್ಚು ಜನಪ್ರಿಯವಾಗಿದೆ. ಪುಣೆ ಮತ್ತು ಮುಂಬೈಯಲ್ಲಿ ಇದರ ಬ್ರ್ಯಾಂಚ್‌ಗಳಿವೆ. ಲೋನಾವ್ಲಾದಲ್ಲಿ ರಿಯಲ್ ಎಸ್ಟೇಟ್ ಮತ್ತು ಆತಿಥ್ಯವನ್ನು ನಿರ್ವಹಿಸುವ ಸಫಲ್ ಗ್ರೂಪ್ನ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕ ಅನುಜ್ ಗಂಗ್ವಾರ್ ಮಾತನಾಡಿ, ಲೋನವ್ಲಾ ವಿಲ್ಲಾ ವಿವಿಧ ಕಾರಣಗಳಿಗಾಗಿ ಜನಪ್ರಿಯವಾಗಿದೆ ಎಂದಿದ್ದಾರೆ.
"ಮುಂಬೈ ಜನರು ಎರಡು ಗಂಟೆಗಳಲ್ಲಿ ಲೋನವ್ಲಾ ವಿಲ್ಲಾಕ್ಕೆ ಬರಬಹುದು. ಸ್ಥಳೀಯ ಭಕ್ಷ್ಯಗಳಿಂದ ನಗರದ ವರೆಗೆ ವಿವಿಧ ರೀತಿಯ ಪಾಕಪದ್ಧತಿಗಳನ್ನು ಇಲ್ಲಿ ಸವಿಯಬಹುದಾಗಿದೆ. ಭೇಟಿ ನೀಡಲು ವಿವಿಧ ಸುಂದರವಾದ ಸ್ಥಳಗಳನ್ನು ಇದು ಹೊಂದಿದೆ ಮತ್ತು ಅತ್ಯುತ್ತಮ ಮೂಲಸೌಕರ್ಯಗಳು ಇಲ್ಲಿವೆ," ಎಂದು ಗಂಗ್ವಾರ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications