For Quick Alerts
ALLOW NOTIFICATIONS  
For Daily Alerts
 

ಈ ದಾಖಲೆಯಲ್ಲಿ ವಿರಾಟ್ ಕೊಹ್ಲಿಗಿಂತ ಶುಬ್ಮನ್ ಗಿಲ್ ಮುಂದೆ!

By ನಾಗೇಶ್

ಭಾರತ ಕ್ರಿಕೆಟ್ ತಂಡಕ್ಕೆ 2023ರಲ್ಲಿ ಎರಡು ಟ್ರೋಫಿ ಗೆಲ್ಲುವ ಅವಕಾಶವಿದೆ. ಮೊದಲು ಪಾಕಿಸ್ತಾನ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ ಏಷ್ಯಾಕಪ್ ಮತ್ತು ನಂತರ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಅನ್ನು ಗೆಲ್ಲುವ ಸುವರ್ಣ ಅವಕಾಶ ಇದೆ.

ಮತ್ತೊಂದೆಡೆ, ಭಾರತದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಅವರು ಟೀಮ್ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಗಿಲ್ ಭಾರತದ ಪರ ವಿಶ್ವಕಪ್ ತಂಡದಲ್ಲಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ. ವಾಸ್ತವವಾಗಿ ಶುಬ್ಮನ್ ಗಿಲ್ ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ಪರ ODIಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ.

indian-cricketer-shubman-gill

ಈ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ, ಶುಬ್ಮನ್ ಗಿಲ್ ಗಿಂತ ಹಿಂದಿ ನಿಂತಿದ್ದಾರೆ. ಗಿಲ್ 2019 ರಲ್ಲಿ ಅಂದರೆ ಸುಮಾರು ನಾಲ್ಕು ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದರು. ಚೊಚ್ಚಲ ಪಂದ್ಯದಿಂದ ಇಲ್ಲಿಯವರೆಗೆ, ಅವರು ಏಕದಿನ ಕ್ರಿಕೆಟಿನಲ್ಲಿ ಭಾರತದ ಪರ ಗರಿಷ್ಠ ರನ್ ಗಳನ್ನು ಕಲೆ ಹಾಕಿದ ಕೀರ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಗಿಲ್ 25 ಏಕದಿನ ಪಂದ್ಯಗಳಲ್ಲಿ, ಟೀಮ್ ಇಂಡಿಯಾ ಪರ ಕಣಕ್ಕೆ ಇಳಿದಿದ್ದು 67.66 ಸರಾಸರಿಯಲ್ಲಿ 1,421 ರನ್ ಗಳಿಸಿದ್ದಾರೆ. ಈ ವೇಳೆ ಗಿಲ್ ಬ್ಯಾಟ್‌ನಿಂದ 4 ಶತಕ ಹಾಗೂ 6 ಅರ್ಧ ಶತಕ ಬಂದಿವೆ. ಗಿಲ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ 27 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 62.47 ರ ಸರಾಸರಿಯಲ್ಲಿ 1437 ರನ್ ಗಳಿಸಿದ್ದಾರೆ, ಈ ಅವಧಿಯಲ್ಲಿ ಅವರು 4 ಶತಕಗಳು ಮತ್ತು 6 ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 208 ರನ್

ಏಕದಿನದಲ್ಲಿ ಅವರ ಗರಿಷ್ಠ ಸ್ಕೋರ್ 208 ರನ್. ಗಿಲ್ ಇದುವರೆಗೆ ಭಾರತದ ನೆಲದಲ್ಲಿ ತಮ್ಮ ODI ವೃತ್ತಿಜೀವನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಗಿಲ್ ಭಾರತದಲ್ಲಿ 12 ಏಕದಿನ ಪಂದ್ಯಗಳನ್ನು ಆಡಿದ್ದು, ಅವರು 64 ರ ಸರಾಸರಿಯಲ್ಲಿ 704 ರನ್ ಗಳಿಸಿದ್ದಾರೆ. ಈ ವೇಳೆ ಅವರು 3 ಶತಕ ಹಾಗೂ 1 ಅರ್ಧ ಶತಕ ಬಾರಿಸಿದ್ದಾರೆ.

ಅವರ ODI ವೃತ್ತಿಜೀವನದ ಹೆಚ್ಚಿನ ರನ್ ಗಳನ್ನು ಭಾರತದ ನೆಲದಲ್ಲಿ ಹರಿದು ಬಂದಿವೆ. ಈ ವರ್ಷ ಏಕದಿನ ವಿಶ್ವಕಪ್ ಕೂಡ ಭಾರತದಲ್ಲಿಯೇ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಗಿಲ್ ವಿಶ್ವಕಪ್‌ಗೆ ಅತ್ಯುತ್ತಮ ಆಯ್ಕೆ ಎಂದು ಸಾಬೀತುಪಡಿಸಬಹುದು. ಗಿಲ್ ಏಕದಿನ ತಂಡದಲ್ಲಿ ಸ್ಥಾನ ಪಡೆಯುತ್ತಾರೋ ಇಲ್ಲವೋ ಎಂಬುದು ಈಗ ಕುತೂಹಲ ಮೂಡಿಸಿದೆ.

ಅಂಕಿ ಅಂಶಗಳು ಗಿಲ್ ಪರವಾಗಿ ನಿಲ್ಲುತ್ತವೆ

ಅಂಕಿ ಅಂಶಗಳು ಗಿಲ್ ಪರವಾಗಿ ನಿಲ್ಲುತ್ತವೆ. ಗಿಲ್ ಅಂಗಳದಲ್ಲಿ ರನ್ ಬೇಟೆಗಾರನ ವೇಷ ಧರಿಸಿ ಬೌಂಡರಿ, ಸಿಕ್ಸರ್ ಗಳನ್ನು ಬಾರಿಸುತ್ತಾ, ಸ್ಕೋರ್ ಬೋರ್ಡಿಗೆ ನಿರಂತರವಾಗಿ ಕಾರ್ಯವನ್ನು ನೀಡುತ್ತಾ ಸಾಗುತ್ತಾರೆ. ಇದರಿಂದ ಇವರ ಬಳಿಕ ಬರುವ ಆಟಗಾರರ ಮೇಲೆ ಒತ್ತಡ ಹೆಚ್ಚಾಗಿ ಬೀಳುವುದಿಲ್ಲ.

ಆರಂಭದಲ್ಲಿ ಪವರ್ ಪ್ಲೇಯ ಸಂಪೂರ್ಣ ಲಾಭ ಪಡೆಯುವ ಗಿಲ್ ಇದೇ ವೇಳೆ ಹೆಚ್ಚಿನ ಸ್ಕೋರ್ ಮಾಡುತ್ತಾರೆ. ಎದುರಾಳಿ ಏನೇ ಗೇಮ್ ಪ್ಲ್ಯಾನ್ ಮಾಡಿದರೂ ಸಹ ಅದಕ್ಕೆ ತಕ್ಕ ಉತ್ತರ ನೀಡುವಲ್ಲಿ ಶುಭಮನ್ ನಿಸ್ಸೀಮರು.

Story first published: Wednesday, August 30, 2023, 17:00 [IST]
Other articles published on Aug 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+