Team India Schedule: ಮಹತ್ವದ ಪಂದ್ಯಗಳಿಗೆ ಪುರುಷ-ಮಹಿಳಾ ತಂಡಗಳು ಸಜ್ಜು; ಭಾರತೀಯ ಅಭಿಮಾನಿಗಳಿಗೆ ಹಬ್ಬವೋ ಹಬ್ಬ
ಅಕ್ಟೋಬರ್ ತಿಂಗಳು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಪುರುಷರ ತಂಡದೊಂದಿಗೆ ಮಹಿಳಾ ತಂಡವೂ ಹಲವು ಮಹತ್ವದ ಪಂದ್ಯಗಳನ್ನು ಆಡಲಿದೆ. ಈ ಮಹತ್ವದ ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ.
ಒಂದೆಡೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಪುರುಷರ ಭಾರತ ತಂಡವು ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಕಾನ್ಪುರದಲ್ಲಿ ಆಡುತ್ತಿದೆ. ಮತ್ತೊಂದೆಡೆ ಯುಎಇಯಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಮಹಿಳಾ ತಂಡ ಸಿದ್ಧತೆ ನಡೆಸುತ್ತಿದೆ.

ಟಿ20 ವಿಶ್ವಕಪ್ ಮೇಲೆ ಕಣ್ಣು
ಪುರುಷರ ಮತ್ತು ಮಹಿಳಾ ತಂಡಗಳ ವೇಳಾಪಟ್ಟಿಯನ್ನು ನೋಡಿದರೆ ಅಕ್ಟೋಬರ್ ತಿಂಗಳಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳು ನಾನ್ ಸ್ಟಾಪ್ ಪಂದ್ಯಗಳನ್ನು ವೀಕ್ಷಿಸಬಹುದು. ಜೂನ್ ತಿಂಗಳ ನಂತರ ಟೀಮ್ ಇಂಡಿಯಾ ಮತ್ತೊಂದು ಟಿ20 ವಿಶ್ವಕಪ್ ಗೆಲ್ಲುವ ತವಕದಲ್ಲಿದೆ. ಈ ಬಾರಿ ಟೀಮ್ ಇಂಡಿಯಾ ವನಿತೆಯರಿಂದ ಅದ್ಭುತ ಪ್ರದರ್ಶನ ನಿರೀಕ್ಷಿಸಲಾಗಿದೆ. ಭಾರತ ಇದುವರೆಗೆ 8 ಆವೃತ್ತಿಗಳಲ್ಲಿ ಒಮ್ಮೆ ಮಾತ್ರ ಫೈನಲ್ ತಲುಪಿದೆ. 2020ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಪ್ರಶಸ್ತಿ ಕಳೆದುಕೊಂಡಿತ್ತು. ಕಳೆದ ಬಾರಿ 2023ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಟೀಮ್ ಇಂಡಿಯಾ ವನಿತೆಯರು ಸೋಲನುಭವಿಸಿದ್ದರು.
ಟಿ20 ವಿಶ್ವಕಪ್‌ನಲ್ಲಿ ವನಿತೆಯರ ಅಭಿಯಾನ
2024ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಗೊಂಡಿದೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರ ಹೆಚ್ಚಾದ ಕಾರಣ ಐಸಿಸಿ ಈ ನಿರ್ಧಾರ ತೆಗೆದುಕೊಂಡಿದೆ. ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂನಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಪಡೆ ಅಕ್ಟೋಬರ್ 4 ರಂದು ನ್ಯೂಜಿಲೆಂಡ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಈ ಪಂದ್ಯ ದುಬೈನಲ್ಲಿ ನಡೆಯಲಿದೆ.
ಇದಾದ ಬಳಿಕ ಅದೇ ದುಬೈ ಮೈದಾನದಲ್ಲಿ ಅಕ್ಟೋಬರ್ 6 ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದೊಂದಿಗೆ ಭಾರತ ಸೆಣಾಸಾಡಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ಭಾರತೀಯ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 9 ಮತ್ತು 13 ರಂದು ಶ್ರೀಲಂಕಾ ಹಾಗು ಆಸ್ಟ್ರೇಲಿಯಾ ತಂಡಗಳ ಕ್ರಮವಾಗಿ ಎದುರಿಸಲಿದೆ.
ಅಕ್ಟೋಬರ್‌ನಲ್ಲಿ ನಡೆಯಲಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಮಾತ್ರ ಟೀಮ್ ಇಂಡಿಯಾ ಆಡಲಿದೆ. ಒಂದು ವೇಳೆ ಭಾರತ ಸೆಮಿಫೈನಲ್ ತಲುಪಿದರೆ ಅಕ್ಟೋಬರ್ 17 ಅಥವಾ 18 ರಂದು ಆಡುವ ಅವಕಾಶ ಹೊಂದಿರಲಿದೆ.
ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಕ್ಟೋಬರ್ 20 ರಂದು ನಡೆಯಲಿದೆ.
ರೋಹಿತ್ ಪಡೆ ತಯಾರು
ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯ ನಂತರ ಅಕ್ಟೋಬರ್ 6 ರಂದು ಟಿ20 ಸರಣಿಯು ಪ್ರಾರಂಭವಾಗಲಿದೆ. ಬಾಂಗ್ಲಾದೇಶ ವಿರುದ್ಧ ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಮ್ ಇಂಡಿಯಾ 3 ಪಂದ್ಯಗಳನ್ನು ಆಡಲಿದೆ. ಇದಾದ ಬಳಿಕ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಎರಡು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ. ಈ ಸರಣಿ ಭಾರೀ ಕುತೂಹಲ ಮೂಡಿಸಿದೆ.
ನ್ಯೂಜಿಲೆಂಡ್ ಸೋಲಿಸುವ ಮೂಲಕ ಟೀಮ್ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಟಿಕೆಟ್ ಗಿಟ್ಟಿಸಿಕೊಳ್ಳುವ ತವಕದಲ್ಲಿದೆ. ಅಕ್ಟೋಬರ್ 16 ರಿಂದ 20 ರವರೆಗೆ ಬೆಂಗಳೂರಿನಲ್ಲಿ ಭಾರತ ಮತ್ತ ನ್ಯೂಜಿಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡನೇ ಪಂದ್ಯ ಅಕ್ಟೋಬರ್ 24 ರಿಂದ 28 ರವರೆಗೆ ಪುಣೆಯಲ್ಲಿ ನಡೆಯಲಿದೆ.
ಅಕ್ಟೋಬರ್‌ನಲ್ಲಿ ರೋಹಿತ್ ಪಡೆ ವೇಳಾಪಟ್ಟಿ
- ಎರಡನೇ ಟೆಸ್ಟ್- ಭಾರತ vs ಬಾಂಗ್ಲಾದೇಶ- ಸೆಪ್ಟೆಂಬರ್ 27 - ಅಕ್ಟೋಬರ್ 1- ಕಾನ್ಪುರ ಬೆಳಗ್ಗೆ 9:30 ಗಂಟಗೆ
- ಮೊದಲನೇ ಟಿ20- ಭಾರತ vs ಬಾಂಗ್ಲಾದೇಶ- ಅಕ್ಟೋಬರ್ 6- ಗ್ವಾಲಿಯರ್ ಸಂಜೆ 7:00 ಗಂಟೆಗೆ
- ಎರಡನೇ ಟಿ20- ಭಾರತ vs ಬಾಂಗ್ಲಾದೇಶ- ಅಕ್ಟೋಬರ್ 9- ದೆಹಲ ಸಂಜೆ 7:00 ಗಂಟೆಗೆ
- ಮೂರನೇ ಟಿ20- ಭಾರತ vs ಬಾಂಗ್ಲಾದೇಶ- ಅಕ್ಟೋಬರ್ 12- ಹೈದರಾಬಾದ್ ಸಂಜೆ 7:00 ಗಂಟೆಗೆ
- ಮೊದಲನೇ ಟೆಸ್ಟ್- ಭಾರತ vs ನ್ಯೂಜಿಲೆಂಡ್- ಅಕ್ಟೋಬರ್ 16-20- ಬೆಂಗಳೂರು 9:30 ಬೆಳಗ್ಗೆ 9:30 ಗಂಟೆಗೆ
- ಎರಡನೇ ಟೆಸ್ಟ್- ಭಾರತ vs ನ್ಯೂಜಿಲೆಂಡ್- ಅಕ್ಟೋಬರ್ 24-28- ಪುಣೆ- ಬೆಳಗ್ಗೆ 9:30 ಗಂಟೆಗೆ
ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ವೇಳಾಪಟ್ಟಿ
- ಭಾರತ vs ನ್ಯೂಜಿಲೆಂಡ್- ಅಕ್ಟೋಬರ್ 4- ದುಬೈ ಸಂಜೆ 7:30 ಗಂಟೆಗೆ
- ಭಾರತ vs ಪಾಕಿಸ್ತಾನ- ಅಕ್ಟೋಬರ್ 6- ದುಬೈ ಮಧ್ಯಾಹ್ನ 3:30 ಗಂಟೆಗೆ
- ಭಾರತ vs ಶ್ರೀಲಂಕಾ- ಅಕ್ಟೋಬರ್ 9- ದುಬೈ ಸಂಜೆ 7:30 ಗಂಟೆಗೆ
- ಭಾರತ vs ಆಸ್ಟ್ರೇಲಿಯಾ- ಅಕ್ಟೋಬರ್ 13- ಶಾರ್ಜಾ ಸಂಜೆ 7:30 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications