Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಲಂಡನ್ : ಬ್ರಿಟಿಷ್ ತಮಿಳು ಕ್ರಿಕೆಟರ್ ದುರಂತ ಸಾವು

ಲಂಡನ್, ಜುಲೈ 07: ಕ್ರಿಕೆಟ್ ದುರಂತಗಳ ಪಟ್ಟಿಗೆ ಬ್ರಿಟಿಷ್ ತಮಿಳ್ ಕ್ರಿಕೆಟರ್ ಸೇರ್ಪಡೆಯಾಗಿದ್ದಾರೆ. ಭಾರತೀಯ ಮೂಲದ ಕ್ರಿಕೆಟರ್ ಎದೆಗೆ ಚೆಂಡು ಬಡಿದು ಸಾವನ್ನಪ್ಪಿದ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸರೆಯಲ್ಲಿ ಬ್ರಿಟಿಷ್ ತಮಿಳ್ಸ್ ಕ್ರಿಕೆಟ್ ಲೀಗ್ (ಬಿಟಿಸಿಎಲ್) ಟೂರ್ನಿಯಲ್ಲಿ ಪ್ಯಾರಿಸ್ ಸ್ಪೋರ್ಟ್ಸ್ ಕ್ಲಬ್ ಪರ ಆಡುತ್ತಿದ್ದ 24 ವರ್ಷದ ಬಾವಲನ್ ಪದ್ಮನಾಥನ್ ಅವರು ದುರಂತ ಅಂತ್ಯ ಕಂಡಿದ್ದಾರೆ.

Indian origin cricketer Bavalan Pathmanathan dies

ಕಳೆದ ಭಾನುವಾರದ ಪಂದ್ಯದಲ್ಲಿ ಬಾವಲನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಎದೆಗೆ ಚೆಂಡು ಬಿದ್ದ ಪರಿಣಾಮ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಗಾರ್ಡಿಯನ್ ವರದಿ ಮಾಡಿದೆ. ಬಾವಲನ್ ಸಾವಿಗೆ ಮಾನಿಪಾಯ್ ಪ್ಯಾರಿಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಸರೆ ಕೌಂಟಿ ಕ್ರಿಕೆಟ್ ಕ್ಲಬ್ ಸಂತಾಪ ವ್ಯಕ್ತಪಡಿಸಿದೆ.

ಇತ್ತೀಚೆಗಷ್ಟೆ ಬಂಗಾಳದ 19ವರ್ಷ ವಯೋಮಿತಿಯೊಳಗಿನ ತಂಡದ ಯುವ ಕ್ರಿಕೆಟಿಗ ಅಂಕಿತ್ ಕೇಸರಿ ಅವರು ಕ್ಷೇತ್ರರಕ್ಷಣೆ ವೇಳೆ ತೀವ್ರವಾಗಿ ಗಾಯಗೊಂಡು ಸಾವನ್ನಪ್ಪಿದ್ದರು. ಕಳೆದ ವರ್ಷ ಆಸ್ಟ್ರೇಲಿಯಾದ ಆರಂಭಿಕ ಫಿಲ್ ಹ್ಯೂಸ್ ತಲೆಗೆ ಚೆಂಡು ಬಡಿದು ದುರಂತ ಅಂತ್ಯ ಕಂಡಿದ್ದರು.

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+