For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟ್‌ನಲ್ಲಿ ಭಾರತ ಮೂಲದ ಆಟಗಾರನ ಅಬ್ಬರ: ತ್ರಿಶತಕ ಬಾರಿಸಿ ಸಾಧನೆ

ಆಸ್ಟ್ರೇಲಿಯಾ ದೇಶೀ ಟೂರ್ನಿಯಲ್ಲಿ ಭಾರತ ಮೂಲದ ಆಟಗಾರ ಇತಿಹಾಸ ನಿರ್ಮಿಸಿದ್ದಾರೆ. ತಮ್ಮ ಧಮಾಕೆದಾರ್ ಬ್ಯಾಟಿಂಗ್‌ನಿಂದ ರನ್‌ ಮಹಲ್‌ ಕಟ್ಟಿದ ಸ್ಟಾರ್ ಏಕದಿನ ಫಾರ್ಮೆಟ್‌ನಲ್ಲಿ ತ್ರಿಶತಕ ಬಾರಿಸಿದ್ದಾರೆ. ವೆಸ್ಟರ್ನ್ ಸಬರ್ಬ್ಸ್ (Western Suburbs) ತಂಡದ ಪರ ಬ್ಯಾಟ್ ಮಾಡಿದ ಭಾರತ ಮೂಲದ ಯುವಕ ಒಮ್ಮೆ ವಿಶ್ವವೇ ಅವರತ್ತ ತಿರುಗಿ ನೋಡುವಂತೆ ಬ್ಯಾಟ್ ಮಾಡಿದ್ದಾರೆ. ಕೇವಲ 141 ಎಸೆತಗಳಲ್ಲಿ ತ್ರಿಶತಕ ಬಾರಿಸಿ ಆರ್ಭಟಿಸಿದರು.

ಈ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆಟಗಾರನ ಹೆಸರು ಹರ್ಜಾಸ್‌ ಸಿಂಗ್‌ (Harjas Singh) ವೆಸ್ಟರ್ನ್ ಸಬರ್ಬ್ಸ್ ಪರ ಬ್ಯಾಟ್ ಮಾಡುವ ಈ ಯುವ ಪ್ರತಿಭೆ ಏಕದಿನ ಫಾರ್ಮೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಈ ಧಮಾಕೆದಾರ್ ಬ್ಯಾಟಿಂಗ್‌ನಲ್ಲಿ 35 ಸಿಕ್ಸರ್‌ಗಳು ಸೇರಿವೆ. ಈ ಅಮೋಘ ಬ್ಯಾಟಿಂಗ್ ಪ್ರದರ್ಶನದಿಂದ ಹರ್ಜಾಸ್‌ ಸಿಂಗ್‌ ವಿಶೇಷ ಎಲೈಟ್‌ ಕ್ಲಬ್‌ಗೆ ಎಂಟ್ರಿ ನೀಡಿದ್ದಾರೆ. ಇವರು ಫಸ್ಟ್‌ ಗ್ರೇಡ್‌ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಕ್ಲಬ್‌ಗೆ ಸೇರಿದ್ದಾರೆ. ಈ ಮೊದಲು ಈ ಪಟ್ಟಿಯಲ್ಲ ಫಿಲ್ ಜಾಕ್ಸ್‌ (321) ಹಾಗೂ ವಿಕ್ಟರ್ ಟ್ರಂಪರ್ (335) ಇದ್ದಾರೆ.

Indian-Origin Harjas Singh Smashes Record-Breaking ODI Triple Century in Australian Domestic Cricket

ಇನ್ನು ಶನಿವಾರ ನಡೆದ ಪಂದ್ಯದಲ್ಲಿ ಹರ್ಜಾಸ್‌ ಸಿಂಗ್‌ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಇವರು ಆರಂಭದಲ್ಲಿ 33 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಆ ಬಳಿಕ ಟಾಪ್‌ ಬ್ಯಾಟಿಂಗ್ ಪ್ರದರ್ಶನ ನೀಡಿದ ಪ್ರತಿಭೆ 74 ಎಸೆತಗಳಲ್ಲಿ ಶತಕ ಕಂಪ್ಲೀಟ್ ಮಾಡಿತು. ಆ ನಂತರ ಹಿಂತಿರುಗಿ ನೋಡದೇ ಬ್ಯಾಟ್ ಮಾಡಿದ ಹರ್ಜಾಸ್‌ ಸಿಂಗ್‌ ಬೌಂಡರಿ ಹಾಗೂ ಸಿಕ್ಸರ್‌ ಸುರಿಮಳೆ ಗೈದರು. ಶತಕದಿಂದ ದ್ವಿಶತಕ ಬಾರಿಸಲು ಇವರು ಬರೀ 29 ಎಸೆತಗಳನ್ನು ತೆಗೆದುಕೊಡಿದ್ದಾರೆ. ಇನ್ನು ನಂತರದ ಇಷ್ಟೇ ಎಸೆತದಲ್ಲಿ ಹರ್ಜಾಸ್‌ ಸಿಂಗ್‌ ತ್ರಿಶತಕ ಬಾರಿಸಿ ಮಿಂಚಿದರು. ಹರ್ಜಾಸ್‌ ಸಿಂಗ್‌ ಅವರ ಅಮೋಘ ಇನಿಂಗ್ಸ್‌ ನಲ್ಲಿ35 ಸಿಕ್ಸರ್‌ 12 ಬೌಂಡರಿಗಳು ಸೇರಿವೆ.

ಭಾರತದ ಮೂಲ

ಹರ್ಜಾಸ್‌ ಸಿಂಗ್‌ ಭಾರತೀಯ ಮೂಲದ ಆಟಗಾರ. ಇವರು ಸಿಡ್ನಿಯಲ್ಲಿ ಜನಿಸಿದರು. ಇವರ ತಂದೆ ಹಾಗೂ ತಾಯಿ ಭಾರತದ ಚಂಡೀಗಡ್ ಮೂಲದವರು. ಇವರು 2000ರಲ್ಲಿ ಸಿಡ್ನಿಗೆ ಬಂದರು. ಇವರು 2024ರಲ್ಲಿ ಭಾರತ ವಿರುದ್ಧ ಅಂಡರ್ 19 ವಿಶ್ವಕಪ್ ಫೈನಲ್‌ನ್ಲಿ 64 ಎಸೆತಗಳಲ್ಲಿ 55 ರನ್‌ ಬಾರಿಸಿ ಗಮನ ಸೆಳೆದಿದ್ದರು. ಇವರ ಈ ಅಮೋಘ ಪ್ರದರ್ಶನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಲಿಡಲು ಮತ್ತೊಬ್ಬ ಯುವ ಪ್ರತಿಭೆ ಸಿದ್ಧ ವಿರುವುದಾಗಿ ತಿಳಿಸಿದೆ.

ಹರ್ಜಾಸ್‌ ಸಿಂಗ್‌ ಅವರ ಸ್ಫೋಟಕ ತ್ರಿಶತಕದ ನೆರವಿನಿಂದ ವೆಸ್ಟರ್ನ್ ಸಬರ್ಬ್ಸ್ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 483 ರನ್‌ ಸಿಡಿಸಿತು. ಈ ಪಂದ್ಯದ ಮತ್ತೊಂದು ವಿಶೇಷತೆ ಅಂದರೆ ಹರ್ಜಾಸ್‌ ಸಿಂಗ್‌ ಬಿಟ್ಟರೆ ಬೇರೆ ಯಾವ ಬ್ಯಾಟರ್ ಸಹ ನೆಲಕ್ಕೂರಿ ನಿಲ್ಲಲಿಲ್ಲ.

Story first published: Sunday, October 5, 2025, 9:20 [IST]
Other articles published on Oct 5, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+