ಟೀಮ್ ಇಂಡಿಯಾಕ್ಕೆ ಕಟ್ಟಿ ಹಾಕಲು ಆಸ್ಟ್ರೇಲಿಯಾ ಮಾಸ್ಟರ್ ಪ್ಲ್ಯಾನ್
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಚಾಂಪಿಯನ್ಸ್ ಟ್ರೋಫಿಯ ಮೊದಲ ಸೆಮಿಫೈನಲ್ ಪಂದ್ಯ ನಡೆಯಲಿದೆ. ಈ ಹೈವೋಲ್ಟೇಜ್ ಪಂದ್ಯಕ್ಕಾಗಿ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಆತಿಥ್ಯ ನೀಡಿದರೂ ಸಹ, ಭಾರತ ತನ್ನ ಪಂದ್ಯಗಳನ್ನು ದುಬೈನಲ್ಲಿ ಆಡುತ್ತಿದೆ. ಈ ಬಾರಿಯ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್ ಮಾದರಿಯಲ್ಲಿ ನಡೆಯುತ್ತಿದೆ. ಭಾರತ ಲೀಗ್ ಹಂತದಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದಿದ್ದು ಅಜೇಯವಾಗಿ ಜಯದ ಓಟವನ್ನು ಮುಂದುವರೆಸಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡ ಸಹ ಈ ಟೂರ್ನಿಯಲ್ಲಿ ಒಂದೇ ಒಂದು ಸೋಲನ್ನು ಅನುಭವಿಸದೆ ಸೆಮಿಫೈನಲ್‌ಗೆ ಅರ್ಹತೆ ಪಡೆದಿದೆ.
ಟೀಮ್ ಇಂಡಿಯಾ, ನ್ಯೂಜಿಲೆಂಡ್ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತ ತನ್ನ ಸ್ಪಿನ್ ಮಂತ್ರವನ್ನು ನಡೆಸಿತ್ತು. ಕಿವೀಸ್ ವಿರುದ್ಧ ಟೀಮ್ ಇಂಡಿಯಾ ನಾಲ್ಕು ಮಂದಿ ಸ್ಪಿನ್ ಬೌಲರ್‌ಗಳಿಗೆ ಮಣೆ ಹಾಕಿತ್ತು. ಇದನ್ನೇ ಗಮನದಲ್ಲಿಟ್ಟುಕೊಂಡು ಆಸ್ಟ್ರೇಲಿಯಾ ಸಹ ಮಾಸ್ಟರ್ ಸ್ಟ್ರೋಕ್ ನೀಡಲು ಸಿದ್ಧತೆ ನಡೆಸಿದೆ.

ಈ ಬಾರಿಯ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ವೇಗದ ಬೌಲರ್‌ಗಳಾದ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಟೂರ್ನಿಯಿಂದ ಹಿಂದೆ ಸರೆದಿದ್ದರು. ಹೀಗಾಗಿ ಯುವ ಬೌಲರ್‌ಗಳಿಗೆ ಅವಕಾಶ ನೀಡಲಾಗಿದೆ. ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಆಡಂ ಜಂಪಾ ಅವರ ಮೇಲೆ ಎಲ್ಲರ ಕಣ್ಣು ನೆಟ್ಟಿರುತ್ತವೆ. ಈಗ ಇವರಿಗೆ ಸಾಥ್ ನೀಡಲು ಭಾರತೀಯ ಮೂಲದ ಸ್ಪಿನ್ ಬೌಲರ್‌ಗೆ ಆಸ್ಟ್ರೇಲಿಯಾ ಮಣೆ ಹಾಕುವ ಸಾಧ್ಯತೆ ಇದೆ.
ಭಾರತೀಯ ಮೂಲದ ಆಟಗಾರ ಯಾರು?
ಭಾರತದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಆಸ್ಟ್ರೇಲಿಯಾ ಗೆಲ್ಲಲು ಸ್ಪಿನ್ ಮಂತ್ರವನ್ನು ಪಠಿಸುತ್ತಿದೆ. ದುಬೈನಲ್ಲಿ ಇದುವರೆಗೆ ನಡೆದ ಮೂರು ಪಂದ್ಯಗಳಲ್ಲೂ ಸ್ಪಿನ್ನರ್‌ಗಳೇ ಪ್ರಾಬಲ್ಯ ಮೆರೆದಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಆಸ್ಟ್ರೇಲಿಯಾ ಭಾರತೀಯ ಮೂಲದ ತನ್ವೀರ್ ಸಂಘ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.

ತನ್ವೀರ್ ಸಂಘ ಹಾಗೂ ಆಡಂ ಜಂಪಾ ಭಾರತೀಯ ಬ್ಯಾಟರ್‌ಗಳಿಗೆ ತೊಂದರೆ ನೀಡಬಹುದು. ತನ್ವೀರ್ ಸಂಘ ಕೇವಲ ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಎರಡು ವಿಕೆಟ್‌ಗಳನ್ನು ಮಾತ್ರ ಪಡೆದಿದ್ದರೆ. ಇವರ ಅಂಕಿ ಅಂಶಗಳು ಏಕದಿನ ಮಾದರಿಯಲ್ಲಿ ಉತ್ತಮವಾಗಿಲ್ಲವಾದರೂ, ಆಸಿಸ್ ಇವರಿಗೆ ಮಣೆ ಹಾಕುವ ಸಾಧ್ಯತೆ ಇದೆ. ಭಾರತ ವಿರುದ್ಧದ ಏಕದಿನ ಪಂದ್ಯಗಳಲ್ಲಿ ಜಂಪಾ ಅವರ ಅಂಕಿಅಂಶಗಳ ಉತ್ತಮವಾಗಿದೆ. ಇವರು 23 ಏಕದಿನ ಪಂದ್ಯಗಳಲ್ಲಿ 35 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ ಆಡಮ್ ಜಂಪಾ ವಿರಾಟ್ ಕೊಹ್ಲಿಯನ್ನು 5 ಬಾರಿ, ರೋಹಿತ್ ಶರ್ಮಾ 4 ಬಾರಿ ಅವರಿಗೆ ವಿಕೆಟ್ ನೀಡಿದ್ದಾರೆ.
ತನ್ವೀರ್ ಸಂಘ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಜನಿಸಿದರೂ, ಅವರ ತಂದೆ ಜೋಗ ಸಂಘ ಪಂಜಾಬ್‌ನ ಜೋಗದವರು. 1997 ರಲ್ಲಿ, ತನ್ವೀರ್ ಅವರ ತಂದೆ ಭಾರತವನ್ನು ತೊರೆದು ಆಸ್ಟ್ರೇಲಿಯಾಕ್ಕೆ ಸ್ಥಳಾಂತರಗೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications