For Quick Alerts
ALLOW NOTIFICATIONS  
For Daily Alerts
 

World Cup Cricket: ಪವರ್‌ ಪ್ಲೇನಲ್ಲಿ 'ಯಾರ್ಕರ್‌ ಸ್ಪೆಷಲಿಸ್ಟ್‌' ಬುಮ್ರಾನೇ ಕಿಂಗ್‌

By ನಾಗೇಶ್

ಗಾಯದ ಬಳಿಕ ಟೀಮ್ ಇಂಡಿಯಾಕ್ಕೆ ಕಮ್‌ ಬ್ಯಾಕ್‌ ಮಾಡಿರುವ ಟೀಮ್ ಇಂಡಿಯಾ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ವಿಕೆಟ್‌ ಬೇಟೆ ನಡೆಸಿ ಅಬ್ಬರಿಸಿದ್ದಾರೆ. ವಿಶ್ವಕಪ್‌ ಮುನ್ನ ನಡೆದ ಏಷ್ಯಾ ಕಪ್‌ ನಲ್ಲಿ ಸ್ಥಿರ ಪ್ರದರ್ಶನ ನೀಡಿದ ಬುಮ್ರಾ, ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್‌ ನಲ್ಲಿ ಭರ್ಜರಿ ಪ್ರದರ್ಶನ ನೀಡಿ ಎಲ್ಲರ ಚಿತ್ತ ಕದ್ದಿದ್ದಾರೆ.

2023ರ ODI ವಿಶ್ವಕಪ್‌ನಲ್ಲಿ ಜಸ್ಪ್ರೀತ್ ಬುಮ್ರಾ ಭಾರತದ ಪರ ಪವರ್‌ ಪ್ಲೇನಲ್ಲಿ ಅತ್ಯಂತ ಪರಿಣಾಮಕಾರಿ ಎಂದು ಸಾಬೀತಾಗಿದೆ. ಟೀಮ್ ಇಂಡಿಯಾ ವಿಶ್ವಕಪ್‌ನ ಎರಡನೇ ಪಂದ್ಯವನ್ನು ಆಡುತ್ತಿದ್ದು, ಎರಡೂ ಪಂದ್ಯಗಳಲ್ಲಿ ಬುಮ್ರಾ ಪವರ್‌ ಪ್ಲೇಯಲ್ಲಿ ತಂಡದ ಪರ ವಿಕೆಟ್‌ ಬೇಟೆ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

Indian Pacer Jasprit Bumrah Again Proved He Is Best In Power Play

ಈ ಅವಧಿಯಲ್ಲಿ, ಅವರ ಎಕಾನಮಿ ಉತ್ತಮವಾಗಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿತ್ತು. ಬುಧವಾರ ಟೀಮ್ ಇಂಡಿಯಾ ದೆಹಲಿಯಲ್ಲಿ ಅಫ್ಘಾನಿಸ್ತಾನ ವಿರುದ್ಧ ಎರಡನೇ ಪಂದ್ಯವನ್ನು ಆಡಿದೆ. ಭಾರತದ ಪರ ಎರಡೂ ಪಂದ್ಯಗಳ ಪವರ್‌ ಪ್ಲೇನಲ್ಲಿ ಬುಮ್ರಾ ಒಟ್ಟು 8 ಓವರ್‌ಗಳನ್ನು ಬೌಲ್ ಮಾಡಿದ್ದಾರೆ.

ಇದರಲ್ಲಿ ಅವರು 2 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಅವರು 2.50 ರ ಎಕನಾಮಿಯಲ್ಲಿ ರನ್ ಗಳನ್ನು ನೀಡಿದ್ದಾರೆ. ಎರಡೂ ಪಂದ್ಯಗಳ ಪವರ್‌ ಪ್ಲೇಯಲ್ಲಿ ಬುಮ್ರಾ ಅವರ ಬೌಲಿಂಗ್ ಅಂಕಿ ಅಂಶಗಳು ಉತ್ತಮವಾಗಿದೆ. ಬುಮ್ರಾ ಪವರ್‌ಪ್ಲೇನಲ್ಲಿ ವಿಕೆಟ್‌ ಟೇಕಿಂಗ್‌ ಬೌಲರ್‌ ಎಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ.

ಕಾಂಗರೂ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್

ಆಸ್ಟ್ರೇಲಿಯ ವಿರುದ್ಧ ಆಡಿದ ಮೊದಲ ಪಂದ್ಯದಲ್ಲಿ ಅವರು ಕಾಂಗರೂ ಬ್ಯಾಟ್ಸ್‌ಮನ್ ಮಿಚೆಲ್ ಮಾರ್ಷ್ ರನ್ನು ಪೆವಿಲಿಯನ್‌ಗೆ ಅಟ್ಟಿದರು. ಇನಿಂಗ್ಸ್ ನ ಮೂರನೇ ಓವರ್ ನ ಎರಡನೇ ಎಸೆತದಲ್ಲಿ ಮಾರ್ಷ್ ವಿಕೆಟ್ ಬಿದ್ದಿತು. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದ ಪವರ್‌ ಪ್ಲೇಯಲ್ಲಿ ಬುಮ್ರಾ ಇಬ್ರಾಹಿಂ ಜದ್ರಾನ್ ಅವರನ್ನು ಔಟ್ ಮಾಡಿದರು. ಇಬ್ರಾಹಿಂ 22 ರನ್ ಗಳಿಸಿ ಔಟಾದರು. ಇನಿಂಗ್ಸ್‌ನ ಏಳನೇ ಓವರ್‌ನಲ್ಲಿ ಅಫ್ಘಾನ್ ಬ್ಯಾಟ್ಸಮ್ಯಾನ್‌ನ ವಿಕೆಟ್ ಪತನವಾಯಿತು.

ಬುಮ್ರಾ ಅವರ ಗಾಯದಿಂದಾಗಿ ಅವರು ಸುಮಾರು ಒಂದು ವರ್ಷ ಕ್ರಿಕೆಟ್‌ನಿಂದ ದೂರವಿದ್ದರು. ಅವರು ಆಗಸ್ಟ್ 2023 ರಲ್ಲಿ ಐರ್ಲೆಂಡ್ ವಿರುದ್ಧ ಆಡಿದ T20 ಸರಣಿಗೆ ಮರಳಿದರು ಮತ್ತು ತಂಡದ ನಾಯಕತ್ವವನ್ನು ವಹಿಸಿಕೊಂಡರು. ಅವರು ಮೂರು ಪಂದ್ಯಗಳ ಸರಣಿಯ ಮೂಲಕ ಫಾರ್ಮ್‌ ಗೆ ಮರಳುವ ಸೂಚನೆಯನ್ನು ನೀಡಿದರು.

ಆಗಸ್ಟ್-ಸೆಪ್ಟೆಂಬರ್ ನಲ್ಲಿ ಆಡಿದ ಏಷ್ಯಾ ಕಪ್

ಆಗಸ್ಟ್-ಸೆಪ್ಟೆಂಬರ್ ನಲ್ಲಿ ಆಡಿದ ಏಷ್ಯಾ ಕಪ್ ನಲ್ಲಿ ಇದೇ ಪ್ರದರ್ಶನವನ್ನು ಮುಂದುವರೆಸಿದರು. ಏಷ್ಯಾಕಪ್‌ನ 2 ಪಂದ್ಯಗಳಲ್ಲಿ 16.67ರ ಸರಾಸರಿಯಲ್ಲಿ 3 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇದೀಗ ವಿಶ್ವಕಪ್‌ನಲ್ಲಿ ತಮ್ಮ ಅಮೋಘ ಫಾರ್ಮ್‌ ಪ್ರದರ್ಶಿಸುತ್ತಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ ಜಸ್ಪ್ರಿತ್‌ ಬುಮ್ರಾ 10 ಓವರ್ ಬೌಲಿಂಗ್ ಮಾಡಿ 4 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಮುಂಬರುವ ಪಂದ್ಯಗಳಲ್ಲೂ ಅಬ್ಬರದ ಪ್ರದರ್ಶನ ನೀಡುವ ಸೂಚನೆ ನೀಡಿದ್ದಾರೆ.

Story first published: Wednesday, October 11, 2023, 21:22 [IST]
Other articles published on Oct 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+