Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಟೀಮ್ ಇಂಡಿಯಾ ವೇಗಿ ಟಿ ನಟರಾಜನ್

Indian Pacer Natarajan Undergoes Knee Surgery

ಈ ಬಾರಿಯ ಐಪಿಎಲ್‌ನಲ್ಲಿ ಆರಂಭದ ಎರಡು ಪಂದ್ಯಗಳಲ್ಲಿ ಭಾಗಿಯಾದ ಬಳಿಕ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದ ಟಿ ನಟರಾಜನ್ ಮಂಗಳವಾರ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ನಟರಾಜನ್ ಟ್ವಿಟ್ಟರ್‌ನಲ್ಲಿ ಫೋಟೊವನ್ನು ಹಂಚಿಕೊಂಡಿದ್ದು ವೈದ್ಯರು ಹಾಗೂ ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ.

ಕಳೆದ ಬಾರಿಯ ಐಪಿಎಲ್‌ನಲ್ಲಿ ಅದ್ಭುತವಾದ ದಾಳಿಯಿಂದ ಗಮನಾರ್ಹ ಪ್ರದರ್ಶನದ ಬಳಿಕ ರಾಷ್ಟ್ರೀಯ ತಂಡಕ್ಕೆ ನಟರಾಜನ್ ಆಯ್ಕೆಯಾಗಿದ್ದರು. ಟೀಮ್ ಇಂಡಿಯಾ ಪರವಾಗಿಯೂ ಅದ್ಭುತವಾದ ಪ್ರದರ್ಶನದ ಬಳಿಕ ಈ ಬಾರಿಯ ಐಪಿಎಲ್‌ನಲ್ಲಿ ಸಾಕಷ್ಟು ನಿರೀಕ್ಷೆಗಳೊಂದಿಗೆ ಕಣಕ್ಕಿಳಿದಿದ್ದರು. ಆದರೆ ನಟರಾಜನ್ ಮೊಣಕಾಲಿನ ನೋವು ಈ ಬಾರಿಯ ಐಪಿಎಲ್‌ನಿಂದ ಸಂಒಊರ್ಣವಾಗಿ ಹೊರಗುಳಿಯುವಂತೆ ಮಾಡಿತು.

"ನಾನು ಇಂದು ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಇದಕ್ಕಾಗಿ ನಾನು ತಜ್ಞರಿಗೆ, ವೈದ್ಯಕೀಯ ತಂಡ, ವೈದ್ಯರು, ಶಸ್ತ್ರ ಚಿಕಿತ್ಸಕರು ಸರ್ಸ್ ಹಾಗೂ ಸಿಬ್ಬಂದಿಗಳಿಗೆ ನಾನು ಋಣಿಯಾಗಿದ್ದೇನೆ. ಬಿಸಿಸಿಐಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಹಾಗೂ ನನಗೆ ಹಹಾರೈಸುದ ಎಲ್ಲರಿಗೂ ಧನ್ಯವಾದಗಳು" ಎಂದು ನಟರಾಜನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಟಿ ನಟರಾಜನ್‌ಗೆ ಸದ್ಯ ಕೆಲ ದಿನಗಳ ವಿಶ್ರಾಂತಿಯ ಅಗತ್ಯವಿದೆ. ಈ ವಿಶ್ರಾಂತಿಯ ನಂತರ ತಾನು ಅತ್ಯಂತ ಬಲಿಷ್ಠನಾಗಿ ಮತ್ತೆ ಅಂಗಳಕ್ಕಿಳಿಯುತ್ತೇನೆ ಎಂದು ನಟರಾಜನ್ ವಿಶ್ವಾಸದ ಮಾತುಗಳನ್ನು ಈ ಪೋಸ್ಟ್‌ನಲ್ಲಿ ವ್ಯಕ್ತಪಡಿಸಿದ್ದಾರೆ.

Story first published: Wednesday, April 28, 2021, 10:33 [IST]
Other articles published on Apr 28, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+