For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಹರಾಜಿನಲ್ಲಿ ಆಯ್ಕೆಯಾದ ಕನ್ನಡಿಗರ ಪಟ್ಟಿ, ಅಂಕಿ-ಅಂಶಗಳು

Indian Players in IPL 2021: Statewise contribution of players to IPL

ಬೆಂಗಳೂರು: ಭಾರತೀಯ ಕ್ರಿಕೆಟ್‌ಗೆ ಕರ್ನಾಟಕದ ಕೊಡುಗೆ ಅಪಾರ. ಕನ್ನಡ ಮಣ್ಣಿನ ಅನೇಕ ಪ್ರತಿಭೆಗಳು ಭಾರತ ತಂಡದ ಪರ ಆಡಿ, ನಾಡಿನ ಹಿರಿಮೆಯನ್ನು ವಿಶ್ವದಗಲ ಪಸರಿಸಿದ್ದಾರೆ. ರಾಹುಲ್ ದ್ರಾವಿಡ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ, ಜಾಗಲ್ ಶ್ರೀನಾಥ್, ವಿಜಯ್ ಭಾರದ್ವಾಜ್, ಸಯ್ಯದ್ ಕಿರ್ಮಾನಿ ಹೀಗೆ ಹೆಸರಿಸುತ್ತಾ ಹೋದರೆ ಪಟ್ಟಿ ಹನುಮನ ಬಾಲದ ರೀತೀಲಿ ಬೆಳೆಯುತ್ತಾ ಹೋಗುತ್ತದೆ.

ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌)ನಲ್ಲೂ ಕನ್ನಡಿಗರು ಮಿಂಚುತ್ತಿರುವುದನ್ನು ನಾವು ನೋಡಿದ್ದೇವೆ. ಕೆಎಲ್ ರಾಹುಲ್, ಮನೀಶ್ ಪಾಂಡೆ, ಕರುಣ್ ನಾಯರ್ ಇವು ಈ ದಿನಗಳ ಸ್ಟಾರ್‌ಗಳು. ಫೆಬ್ರವರಿ 18ರಂದು ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ಕರ್ನಾಟಕದ 4 ಆಟಗಾರರು ಆರಿಸಲ್ಪಟ್ಟಿದ್ದಾರೆ.

ಬೇರೆ ಬೇರೆ ಐಪಿಎಲ್ ತಂಡಗಳಲ್ಲಿ ಸದ್ಯ ಆಡುತ್ತಿರುವ ಆಟಗಾರರ ರಾಜ್ಯವಾರು ಅಂಕಿ ಅಂಶಗಳನ್ನು ಗಮನಿಸಿದರೆ; ಹರ್ಯಾಣ 5, ಕೇರಳ 8, ತಮಿಳುನಾಡು 13, ಕರ್ನಾಟಕ 11, ಉತ್ತರಪ್ರದೇಶ 11, ದೆಹಲಿ 9, ರಾಜಸ್ಥಾನ್ 7, ಮುಂಬೈ 12, ಝಾರ್ಖಂಡ್ 6, ಬೆಂಗಾಲ್ 5, ಬರೋಡಾ 4, ಗುಜರಾತ್ 4, ಮಹರಾಷ್ಟ್ರ 3, ಸೌರಾಷ್ಟ್ರ 4, ಮಧ್ಯಪ್ರದೇಶ 3, ಆಂಧ್ರಪ್ರದೇಶ 4 ಹೀಗಿದೆ.

ಈ ಬಾರಿ ಹರಾಜಿನಲ್ಲಿ ಆಯ್ಕೆಯಾದ ಕರ್ನಾಟಕದ ಆಟಗಾರರು
* ಕೃಷ್ಣಪ್ಪ ಗೌತಮ್, ಚೆನ್ನೈ ಸೂಪರ್ ಕಿಂಗ್ಸ್, 9.25 ಕೋ.ರೂ.
* ಕೆಸಿ ಕಾರಿಯಪ್ಪ, ರಾಜಸ್ಥಾನ್ ರಾಯಲ್ಸ್, 20 ಲಕ್ಷ ರೂ.
* ಜಗದೀಶ ಸುಚಿತ್, ಸನ್ ರೈಸರ್ಸ್ ಹೈದರಾಬಾದ್, 30 ಲಕ್ಷ ರೂ.
* ಕರುಣ್ ನಾಯರ್, ಕೋಲ್ಕತ್ತಾ ನೈಟ್ ರೈಡರ್ಸ್, 50 ಲಕ್ಷ ರೂ.

Story first published: Saturday, February 20, 2021, 10:01 [IST]
Other articles published on Feb 20, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+