ಸಿಪಿಎಲ್‌ನ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪಾಲಾದ ಪ್ರವೀಣ್ ತಾಂಬೆ

ನವದೆಹಲಿ, ಜುಲೈ 6: ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯ ಎಂಬ ದಾಖಲೆಗೆ ಮುಂಬೈ ಮಾಜಿ ಲೆಗ್ ಸ್ಪಿನ್ನರ್ ಪ್ರವೀಣ್ ತಾಂಬೆ ಕಾರಣರಾಗಲಿದ್ದಾರೆ. ಸಿಪಿಎಲ್ ತಂಡವಾದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ತಾಂಬೆ ಆರಿಸಲ್ಪಟ್ಟಿದ್ದಾರೆ.
ಪ್ರಥಮದರ್ಜೆ ಕ್ರಿಕೆಟ್‌ನಿಂದ 48ರ ಹರೆಯದ ಪ್ರವೀಣ್ ತಾಂಬೆ ನಿವೃತ್ತಿ ಹೊಂದಿರುವುದರಿಂದ ಸಿಪಿಎಲ್‌ನಲ್ಲಿ ಪಾಲ್ಗೊಳ್ಳಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ)ನಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ತಾಂಬೆ ಪಿಸಿಎಲ್‌ನಲ್ಲಿ ಆಡುವುದಾದರೆ ಬಿಸಿಸಿಐನಿಂದ ನೋ ಅಬ್ಜೆಕ್ಷನ್ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.
2020ರ ಆವೃತ್ತಿಗೆ 6 ಸಿಪಿಎಲ್ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಆಯ್ಕೆ ನಡೆಸಿಕೊಂಡಿವೆ. ಸಿಪಿಎಲ್ ಟೂರ್ನಿ ಆಗಸ್ಟ್ 18ರಿಂದ ಸೆಪ್ಟೆಂಬರ್ 10ರ ವರೆಗೆ ನಡೆಯಲಿದೆ. ಕೊರೊನಾವೈರಸ್ ಪಿಡುಗಿನ ಕಾರಣ ಈ ಬಾರಿಯ ಸಿಪಿಎಲ್ ವೀಕ್ಷಕರಿಲ್ಲದ ಮೈದಾನದಲ್ಲಿ ನಡೆಯಲಿದೆ.
'ಸಿಪಿಎಲ್‌ಗೆ ಆರು ಫ್ರಾಂಚೈಸಿಗಳು ತಂಡಗಳನ್ನು ಆರಿಸಿವೆ. ರಶೀದ್ ಖಾನ್, ಮಾರ್ಕಸ್ ಸ್ಟೋಯ್ನಿಸ್, ರಾಸ್ ಟೇಲರ್, ಪ್ರವೀಣ್ ತಾಂಬೆ ಮತ್ತು ಕಾರ್ಲೋಸ್ ಬ್ರಾತ್‌ವೇಟ್ ಸೇರಿದಂತೆ ಕೆರಿಬಿಯನ್‌ನ ಮತ್ತು ವಿದೇಶಿ ಆಟಗಾರರೆಲ್ಲ ಒಪ್ಪಿಗೆ ಸೂಚಿಸಿದ್ದಾರೆ,' ಎಂದು ಸಿಪಿಎಲ್ ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications