For Quick Alerts
ALLOW NOTIFICATIONS  
For Daily Alerts
 

ಲಂಕಾ ಪ್ರೀಮಿಯರ್ ಲೀಗ್‌ನ ಹರಾಜಿನಲ್ಲಿ CSK ದಿಗ್ಗಜ ಸುರೇಶ್ ರೈನಾ: ಮೂಲ ಬೆಲೆ ಎಷ್ಟು ಗೊತ್ತಾ?

2023ನೇ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಭಾರತದ ಮಾಜಿ ಕ್ರಿಕೆಟಿಗ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ದಿಗ್ಗಜ ಆಟಗಾರ ಸುರೇಶ್ ರೈನಾ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಮುಂಬರುವ ಆವೃತ್ತಿಗಾಗಿ ಹರಾಜು ಪ್ರಕ್ರಿಯೆ ನಡೆಯಲಿದ್ದು ಸುರೇಶ್ ರೈನಾ ಈ ಹರಾಜಿಗಾಗಿ ತಮ್ಮ ಹೆಸರು ನೊಂದಾಯಿಸಿದ್ದಾರೆ. ಹೀಗಾಗಿ ಈ ಅನುಭವಿ ಆಟಗಾರ ಯಾವ ತಂಡಕ್ಕೆ ಎಷ್ಟು ಮೊತ್ತಕ್ಕೆ ಹರಾಜಾಗಬಹುದು ಎಂಬ ಬಗ್ಗೆ ಈಗ ಕುತೂಹಲ ಗರಿಗೆದರಿದೆ.

ಲಂಕಾ ಪ್ರೀಮಿಯರ್ ಲೀಗ್‌ನ 2023ನೇ ಆವೃತ್ತಿಗಾಗಿ ಜೂನ್ 14 ಬುಧವಾರ ಹರಾಜು ಪ್ರಕ್ರಿಯೆ ನಡೆಯಲಿದೆ. USD 50,000 ಮೂಲಬೆಲೆಯನ್ನು ಹೊಂದಿದ್ದಾರೆ ಭಾರತದ ಮಾಜಿ ಕ್ರಿಕೆಟಿಗ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ. ಜುಲೈ 30ರಿಂದ ಆರಂಭವಾಗಿ ಆಗಸ್ಟ್ 20ರಂದು ಈ ಟೂರ್ನಿ ಅಂತ್ಯವಾಗಲಿದೆ.

Indian star cricketer Suresh Raina set to play in IPL: registered his name for Auction

2022ರ ಸಪ್ಟೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಸುರೇಶ್ ರೈನಾ ಬಳಿಕ ವಿದೇಶಿ ಲೀಗ್‌ಗಳ ಮೇಲೆ ಚಿತ್ತನೆಟ್ಟಿದ್ದಾರೆ. 2022ರ ಡಿಸೆಂಬರ್‌ನಲ್ಲಿ ಆರಂಬವಾದ ಅಬುದಾಬಿ ಟಿ10 ಲೀಗ್‌ನಲ್ಲಿ ಆಡಿದ್ದ ರೈನಾ ಡೆಕ್ಕನ್ ಗ್ಲಾಡಿಯೇಟರ್ ಪರವಾಗಿ ಕಣಕ್ಕಿಳಿದಿದ್ದರು. ಕಳೆದ ಮಾರ್ಚ್‌ನಲ್ಲಿ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿಯೂ ರೈನಾ ಭಾಗಿಯಾಗಿದ್ದರು. ಇನ್ನು ಐಪಿಎಲ್‌ನಲ್ಲಿ ಸುರೇಶ್ ರೈನಾ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಲಂಕಾ ಪ್ರೀಮಿಯರ್ ಲೀಗ್ ಈ ಬಾರಿ ನಾಲ್ಕನೇ ಆವೃತ್ತಿಯ ಟೂರ್ನಿಯನ್ನು ಆಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಮಾದರಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದ್ದು 140 ಅಂತಾರಾಷ್ಟ್ರೀಯ ಕ್ರಿಕೆಟಿಗರ ಸಹಿತ ಒಟ್ಟು 500ಕ್ಕೂ ಅಧಿಕ ಕ್ರಿಕೆಟಿಗರು ಈ ಹರಾಜಿ ಪಟ್ಟಿಯಲ್ಲಿದ್ದಾರೆ. ಊರ್ನಿಯಲ್ಲಿ ಭಾಗವಹಿಸುವ ಎಲ್ಲಾ ಐದು ತಂಡಗಳು ಕೂಡ 500,000 ಯುಎಸ್ ಡಾಲರ್ ಹೊಮದಿದ್ದು ಈ ಮೊತ್ತದಲ್ಲಿ ತಂಡವನ್ನು ಕಟ್ಟಿಕೊಳ್ಳಬೇಕಿದೆ. ಪಾಕಿಸ್ತಾನದ ಬಾಬರ್ ಅಜಂ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಈ ಟೂರ್ನಿಯಲ್ಲಿ ಭಾಗವಹಿಸಿರುವ ಪ್ರಮುಖ ಅಂತಾರಾಷ್ಟ್ರೀಯ ಸ್ಟಾರ್ ಕ್ರಿಕೆಟಿಗರಾಗಿದ್ದಾರೆ.

Indian star cricketer Suresh Raina set to play in IPL: registered his name for Auction

ಐಪಿಎಲ್‌ನಲ್ಲಿ ಸಾಕಷ್ಟು ದಾಖಲೆ ಬರೆದು ಮಿಸ್ಟರ್ ಐಪಿಎಲ್ ಎಂದೇ ಖ್ಯಾತವಾಗಿದ್ದ ಸುರೇಶ್ ರೈನಾ ಅವರನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಎಲ್‌ಪಿಎಲ್‌ನ ಫ್ರಾಂಚೈಸಿಗಳು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಹೀಗಾಗಿ ಎಷ್ಟು ಮೊತ್ತಕ್ಕೆ ಭಾರತದ ಈ ಆಟಗಾರ ಹರಾಜಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಪ್ರಮುಖ ಅಸ್ತ್ರವಾಗಿದ್ದ ಸುರೇಶ್ ರೈನಾ 205 ಐಪಿಎಲ್ ಪಂದ್ಯಗಳನ್ನು ಆಡಿದ್ದು 5528 ರನ್‌ಗಳನ್ನು ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಕೇವಲ ನಾಲ್ಕು ಆಟಗಾರರು ಮಾತ್ರವೇ ಸುರೇಶ್ ರೈನಾ ಅವರಿಗಿಂತ ಹೆಚ್ಚಿನ ರನ್‌ ಬಾರಿಸಿದ ಸಾಧನೆ ಮಾಡಿದ್ದಾರೆ.

Story first published: Monday, June 12, 2023, 18:02 [IST]
Other articles published on Jun 12, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+