ಧೋನಿ ಬೆಂಬಲಿಸಿ 'ಬಲಿದಾನ್ ಬ್ಯಾಡ್ಜ್' ಪ್ರದರ್ಶಿಸಿದ ಅಭಿಮಾನಿಗಳು!

ಲಂಡನ್, ಜೂನ್ 09: ಸೌತಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಸೆದೆಬಡಿದ ಟೀಮ್ ಇಂಡಿಯಾ ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು. ಆದರೆ, ಈ ಪಂದ್ಯದಲ್ಲಿ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ ಅವರು ಬಳಕೆ ಮಾಡಿದ್ದ ವಿಕೆಟ್‌ಕೀಪಿಂಗ್ ಗ್ಲೌ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪಂದ್ಯದಲ್ಲಿ ಎಂ.ಎಸ್ ಧೋನಿ ಧರಿಸಿದ್ದ ಗ್ಲೌನ ಮೇಲೆ ಹುತಾತ್ಮ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸೂಚಿಸುವ 'ಬಲಿದಾನ್ ಚಿನ್ಹೆ' ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಈ ಚಿನ್ಹೆಯನ್ನು ಬಳಸುವಂತಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ತಕರಾರು ತೆಗೆದಿತ್ತು.
ಸೇನೆಯ ಮೇಲೆ ಧೋನಿ ಹೊಂದಿರುವ ಅಪಾರ ಪ್ರೀತಿಯನ್ನು ಅಭಿಮಾನಿಗಳು ಹಾಡಿ ಹೊಗಳಿದ್ದರು. ಐಸಿಸಿ ಎಷ್ಟೇ ಒತ್ತಯಿಸಿದರೂ ಬಲಿದಾನ ಚಿನ್ಹೆ ಇರುವ ಗ್ಲೌ ಯಾವುದೇ ಕಾರಣಕ್ಕೂ ಬದಲಾಯಿಸಬೇಡಿ ಎಂದು ಕೋಟ್ಯಂತರ ಅಭಿಮಾನಿಗಳು ಧೋನಿ ಬೆಂಬಲಕ್ಕೆ ನಿಂತರು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೂಡ ಮಧ್ಯ ಪ್ರವೇಶಿಸಿ ಧೋನಿಗೆ ಈ ಗ್ಲೌ ಬಳಕೆ ಮಾಡಲು ಅನುಮತಿಸುವಂತೆ ಐಸಿಸಿಗೆ ಮನವಿ ಮಾಡಿತ್ತು. ಆದರೆ, ತನ್ನ ನೀತಿ ನಿಯಮಗಳನ್ನು ವಿವರಿಸಿದ ಬಿಸಿಸಿಐ ಮನವಿಯನ್ನು ತಿರಸ್ಕರಿಸಿತಲ್ಲದೆ. ಧೋನಿಗೆ ಬಲಿದಾನ ಚಿನ್ಹೆ ಇರುವ ಗ್ಲೌ ಬಳಕೆ ಮಾಡದಂತೆ ಸೂಚಿಸಿತು.
ಹೀಗಿರುವಾಗ ಭಾನುವಾರ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಧೋನಿ ಬೆಂಬಲಕ್ಕೆ ನಿಂತ ಅಭಿಮಾನಿಗಳು ಕ್ರೀಡಾಂಗಣದಲ್ಲಿ 'ಬಲಿದಾನ್ ಬ್ಯಾಡ್ಜ್'ನ ಚಿತ್ರಗಳನ್ನು ರಾರಾಜಿಸಿದರು. ಕ್ರೀಡಾಂಗಣದಲ್ಲಿ ತಲೆ ಎತ್ತಿದ ಬಲಿದಾನ್ ಬ್ಯಾಡ್ಜ್‌ನ ಚಿತ್ರಗಳು ಕ್ಷಣಮಾತ್ರದಲ್ಲಿ ಸಾಮಾನಜಿಕ ಜಾಲತಾಣಗಳಲ್ಲಿ ವೈರಲ್ ಆದವು. ಧೋನಿಗೆ ಕೇವಲ ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಯಿತು.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ವೇಳೆ ಧೋನಿ 'ಬಲಿದಾನ್ ಬ್ಯಾಡ್ಜ್' ಇಲ್ಲದೇ ಇರುವ ಗ್ಲೌ ಬಳಕೆ ಮಾಡಿದರು.
'ಗಂಭೀರ' ಬೆಂಬಲ
ಧೋನಿ ಅವರ ದೇಶ ಪ್ರೇಮಕ್ಕೆ ಕ್ರಿಕೆಟಿಗರಿಂದಲೂ ಭಾರಿ ಬೆಂಬಲ ಸಿಕ್ಕಿದೆ. ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್, ಧೋನಿ ಪರವಾಗಿ ಬ್ಯಾಟ್ ಬೀಸಿದ್ದು ಐಸಿಸಿ ಮೊದಲು ವಿಶ್ವಕಪ್ ಟೂರ್ನಿ ಕಡೆಗೆ ಗಮನ ನೀಡಬೇಕು ಧೋನಿ ಗ್ಲೌ ಮೇಲೆ ಅಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೆ ಸತತವಾಗಿ 300ಕ್ಕೂ ಹೆಚ್ಚು ರನ್‌ಗಳನ್ನು ಬಿಟ್ಟುಕೊಡುವ ಪಿಚ್‌ಗಳನ್ನು ನಿಯಂತ್ರಿಸುವ ಕಡೆಗೆ ಐಸಿಸಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದ್ದಾರೆ.
ಐಸಿಸಿ ಕ್ಷಮೆ ಕೋರಬೇಕು ಎಂದ ಶ್ರೀಶಾಂತ್
ಐಪಿಎಲ್‌ನ ಬೆಟ್ಟಿಂಗ್ ಮತ್ತು ಮ್ಯಾಚ್ ಫಿಕ್ಸಿಂಗ್‌ನ ಬಲಿಪಶು ಕೇರಳದ ವೇಗದ ಬೌಲರ್ ಶಾಂತಕುಮಾರನ್ ಶ್ರೀಶಾಂತ್, ಧೋನಿ ಬೆಂಬಲಕ್ಕೆ ನಿಂತಿದ್ದಾರೆ. ಐಸಿಸಿ ಈ ಕೂಡಲೇ ಧೋನಿ ಮತ್ತು ಇಡೀ ಭಾರತಕ್ಕೆ ಕ್ಷಮೆ ಕೋರಬೇಕು ಎಂದು ಒತ್ತಯಿಸಿದ್ದಾರೆ. ಇದಕ್ಕೆ ಮಾಜಿ ವೇಗದ ಬೌಲರ್ ಆರ್.ಪಿ ಸಿಂಗ್ ಕೂಡ ಬೆಂಬಲಿಸಿದ್ದಾರೆ.
ಮಾತಾಡುವ ಮುನ್ನ ಯೋಚಿಸಿ: ಗವಾಸ್ಕರ್
ಧೋನಿಗೆ ಬಲಿದಾನ ಚಿನ್ಹೆಯ ಗ್ಲೌ ಬಳಕೆ ಮಾಡದಂತೆ ಐಸಿಸಿ ಸೂಚಿಸಿದ ಬೆನ್ನಲ್ಲೇ ಹಲವು ಅಭಿಮಾನಿಗಳು ಟೀಮ್ ಇಂಡಿಯಾ ಈ ಕೂಡಲೇ ವಿಶ್ವಕಪ್ ಟೂರ್ನಿಯಿಂದಲೇ ಹೊರಬರಬೇಕು ಎಂದು ದನಿ ಎತ್ತಿದ್ದರು. ಇದಕ್ಕೆ ಖಡಕ್ ಇತ್ತರ ನೀಡಿರುವ ಭಾರತ ತಂಡದ ಮಾಜಿ ನಾಯಕ ಸುನಿಲ್ ಗವಾಸ್ಕರ್, "ಮಾತನಾಡುವ ಮುನ್ನ ಆಲೋಚಿಸಿ. ಭಾರತ ತಂಡದ ವಿಶ್ವಕಪ್‌ನಲ್ಲಿ ಆಡದೇ ಪ್ರಶಸ್ತಿ ಗೆಲ್ಲಲು ಸಾಧ್ಯವಿಲ್ಲ. ಧೋನಿ ಅವರ ಗ್ಲೌ ಮೇಲೆ ಚಿನ್ಹೆ ಇದ್ದರೇನು. ಅಥವಾ ಇಲ್ಲದಿದ್ದರೇನು ಅವರು ಆ ಗ್ಲೌ ತೊಟ್ಟು ತಂಡದ ಗೆಲುವಿಗಾಗಿ ಎಷ್ಟು ಶ್ರಮಿಸುತ್ತಾರೆಂಬುದಷ್ಟೇ ಮುಖ್ಯ.
ವೈಯಕ್ತಿಕ ನಿರ್ಧಾರ
ಧೋನಿ ಬಲಿದಾನ ಚಿನ್ಹೆ ಇರುವ ಗ್ಲೌ ತೊಟ್ಟು ಆಡಿರುವುದು ಅವರ ವೈಯಕ್ತಿಕ ನಿರ್ಧಾರ ಇದರಲ್ಲಿ ಭಾರತೀಯ ಸೇನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಲೆಫ್ಟಿನೆಂಟ್ ಜನರಲ್ ಚೆರಿಷ್ ಮ್ಯಾಥ್ಸನ್ ಹೇಳಿದ್ದಾರೆ. ಇದೇ ವೇಳೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಬಲಿದಾನ್ ಬ್ಯಾಡ್ಜ್ ವಿವಾದದ ಕುರಿತಾಗಿ ತಮ್ಮ ಅನಿಸಿಕೆಯನ್ನು ಯೂಟ್ಯೂಬ್ ಚಾನಲ್ ಮೂಲಕ ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications