ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸಿದೆ ಪರ್ತ್ ಪಿಚ್
ಈ ವರ್ಷದ ಬಹು ನಿರೀಕ್ಷಿತ ಟೆಸ್ಟ್ ಸರಣಿಗಳಲ್ಲಿ ಬಾರ್ಡರ್ ಗವಾಸ್ಕರ್ ಸರಣಿ ಒಂದು. ಈ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಟ ನಡೆಸಲಿವೆ. ಈ ಸರಣಿ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿದೆ. ಟೀಮ್ ಇಂಡಿಯಾದ ಹಲವು ಆಟಗಾರರು ಈಗಾಗಲೇ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದ್ದಾರೆ. ಸ್ಟಾರ್ ಆಟಗಾರರು ಇನ್ನು ಪ್ರವಾಸ ಬೆಳೆಸಬೇಕಿದೆ. ಈ ನಡುವೆ ಟೀಮ್ ಇಂಡಿಯಾ ಆಟಗಾರರ ಟೆನ್ಷನ್ ಹೆಚ್ಚಿಸುವ ಅಂಶವೊಂದು ಬೆಳಕಿಗೆ ಬಂದಿದೆ.
ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಸರಣಿ ಸೋಲು ಕಂಡಿರುವ ಟೀಮ್ ಇಂಡಿಯಾ, ಈ ಆಘಾತದಿಂದ ಹೊರ ಬರಬೇಕಿದೆ. ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪ್ರವೇಶಿಸುವ ನಿಟ್ಟಿನಲ್ಲಿ ಈ ಸರಣಿ ಮಹತ್ವ ಪಡೆದಿದೆ. ಈ ಸರಣಿಯ ಮೊದಲ ಟೆಸ್ಟ್ ಪಂದ್ಯದ ಪಿಚ್ ನಿಜಕ್ಕೂ ಟೀಮ್ ಇಂಡಿಯಾದ ಚಿಂತೆಯನ್ನು ದ್ವಿಗುಣ ಗೊಳಿಸಿದೆ.

ಟೀಮ್ ಇಂಡಿಯಾ ಟೆನ್ಷನ್ ಹೆಚ್ಚಿಸಿದ ಅಂಶ ಯಾವುದು?
ತವರಿನಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿರುವ ಟೀಮ್ ಇಂಡಿಯಾದ ಬ್ಯಾಟರ್‌ಗಳಿಗೆ ಪರ್ತ್ ಪಿಚ್ ಸಮಸ್ಯೆಯನ್ನು ಉಂಟು ಮಾಡಲಿದೆ. ಉಭಯ ತಂಡಗಳ ನಡುವಣ ಮೊದಲ ಟೆಸ್ಟ್ ನವೆಂಬರ್ 22 ರಿಂದ ಆರಂಭವಾಗಲಿದೆ. ಪರ್ತ್‌ನ ಐತಿಹಾಸಿಕ ಮೈದಾನ ಟೀಮ್ ಇಂಡಿಯಾ ಬ್ಯಾಟರ್‌ಗಳನ್ನು ಕಾಡಲಿದೆ. ಸ್ಪಿನ್ ಬೌಲರ್‌ಗಳನ್ನು ಎದುರಿಸುವ ಅಭ್ಯಾಸ ಮಾಡಿಕೊಂಡಿರುವ ಟೀಮ್ ಇಂಡಿಯಾ ಬೌನ್ಸಿ ಟ್ರ್ಯಾಕ್ ದುಸ್ವಪ್ನದಂತೆ ಕಾಡಲಿದೆ.
ಪರ್ತ್ ನಲ್ಲಿ ತಯಾರಾದ ಪಿಚ್ ಡ್ರಾಪ್ ಇನ್ ಪಿಚ್ ಎಂದು ಹೇಳಲಾಗುತ್ತಿದೆ. ಅಂದರೆ ಅದು ಪರ್ತ್ ನ ಪಿಚ್ ಅಲ್ಲ. ಬೇರೆಡೆಯಿಂದ ಸಿದ್ದಪಡಿಸಿ ಇಲ್ಲಿ ತಂದು ಇಡಲಾಗಿದೆ. ಸೆಪ್ಟೆಂಬರ್‌ನಲ್ಲಿ ಪಿಚ್ ಸಿದ್ಧಪಡಿಸಲಾಗಿದ್ದು, ಇದೀಗ ಪರ್ತ್ ತಲುಪಿದೆ. ಕ್ರಿಕ್ ಇನ್ಫೋ ವರದಿಯ ಪ್ರಕಾರ ಈ ಪಿಚ್ ಮೇಲೆ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಣ ಮೊದಲ ಟೆಸ್ಟ್ ನಡೆಯಲಿದೆ.
ಮೂರನೇ ಟ್ರೋಫಿಯ ಕನಸು
ಟಿ20 ವಿಶ್ವಕಪ್ ವೇಳೆಯೂ ಟೀಮ್ ಇಂಡಿಯಾ, ಡ್ರಾಪ್ ಇನ್ ಪಿಚ್‌ನಲ್ಲಿ ಆಡಿರುವ ಅನುಭವ ಹೊಂದಿದೆ. ಹೀಗಾಗಿ ಮೊದಲ ಟೆಸ್ಟ್ ಪಂದ್ಯದಲ್ಲಿ ಕೊಂಚ ಅನುಭವದ ಬುತ್ತಿಯನ್ನು ಹೊತ್ತುಕೊಂಡು ಹೋಗಬಹುದು. ಟೀಮ್ ಇಂಡಿಯಾ ಈ ಸರಣಿಯಲ್ಲಿ ಗೆಲ್ಲುವುದು ಅನಿವಾರ್ಯತೆ ಇದೆ. ಭಾರತ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಸೋತ ಬಳಿಕ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಿಂದ, ಎರಡನೇ ಸ್ಥಾನಕ್ಕೆ ಕುಸಿತ ಕಂಡಿತ್ತು.

ಬಾರ್ಡರ್ ಗವಾಸ್ಕರ್ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ ಗೆಲ್ಲುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಅಗ್ರ ಸ್ಥಾನವನ್ನು ತಲುಪುಬಹುದು. ಕಳೆದ ಎರಡು ಪ್ರವಾಸದಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡಿ ಗೆಲುವು ದಾಖಲಿಸಿತ್ತು. ಇದೇ ಸಾಧನೆಯನ್ನು ಮುಂದುವರೆಸುವ ಪ್ಲ್ಯಾನ್‌ನ್ನು ಟೀಮ್ ಇಂಡಿಯಾ ಮಾಡಿಕೊಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications