IML 2025: ಇಂಡಿಯಾ ಮಾಸ್ಟರ್ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲುವು
ವಡೋದರಾದ ಬಿಸಿಎ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನ 7ನೇ ಪಂದ್ಯ ನಡೆಯಿತು. ಶನಿವಾರ ವಡೋದರಾದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 8 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಇಂಟರ್ನ್ಯಾಷನಲ್ ಮಾಸ್ಟರ್ಸ್ ಲೀಗ್‌ನಲ್ಲಿ ಭಾರತ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದು, ಅಂಕಪಟ್ಟಿಯಲ್ಲಿ ಆಗ್ರ ಸ್ಥಾನವನ್ನು ಪಡೆದುಕೊಂಡಿದೆ. ಇತ್ತ ಸತತ ಎರಡು ಸೋಲು ಕಂಡಿರುವ ದಕ್ಷಿಣ ಆಫ್ರಿಕಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.
ಭಾರತ ತನ್ನ ಮೊದಲ ಎರಡು ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಇಂಗ್ಲೆಂಡ್ ತಂಡಗಳನ್ನು ಸೋಲಿಸಿತ್ತು. ದಕ್ಷಿಣ ಆಫ್ರಿಕಾ ಆಡಿದ ಎರಡು ಪಂದ್ಯಗಳನ್ನು ಸೋತಿದೆ. ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಶ್ರೀಲಂಕಾ ಗೆದ್ದಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಸಚಿನ್ ತೆಂಡೂಲ್ಕರ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೆನ್ರಿ ಡೇವಿಡ್ಸ್ (38) ಮತ್ತು ಡೇನ್ ವಿಲಾಸ್ (21) ಹೊರತುಪಡಿಸಿ, ದಕ್ಷಿಣ ಆಫ್ರಿಕಾದ ಯಾವುದೇ ಬ್ಯಾಟರ್‌ಗಳು ಭಾರತೀಯ ಬೌಲರ್‌ಗಳನ್ನು ಎದುರಿಸಲು ಸಾಧ್ಯವಾಗಲಿಲ್ಲ.
ಪವರ್‌ಪ್ಲೇನಲ್ಲಿ ಭಾರತ ತಂಡದ ಸ್ಪಿನ್ನರ್ ರಾಹುಲ್ ಶರ್ಮಾ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಇಹಾಸ ಸೃಷ್ಟಿಸಿದರು. ಪವನ್ ನೇಗಿ ಕೂಡ ಎರಡು ವಿಕೆಟ್‌ಗಳನ್ನು ಕಬಳಿಸಿದರು. ಆಲ್‌ರೌಂಡರ್ ಯುವರಾಜ್ ಸಿಂಗ್ 3 ವಿಕೆಟ್‌ಗಳನ್ನು ಪಡೆದರೆ, ಸ್ಟುವರ್ಟ್ ಬಿನ್ನಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡಿದರು. ಪರಿಣಾಮ ದಕ್ಷಿಣ ಆಫ್ರಿಕಾ 13.5 ಓವರ್‌ಗಳಲ್ಲಿ ಕೇವಲ 85 ರನ್‌ಗಳಿಗೆ ಆಲೌಟ್ ಆಯಿತು.
ದಕ್ಷಿಣ ಆಫ್ರಿಕಾ ನೀಡಿದ ಸುಲಭ ಗುರಿ ಬೆನ್ನಟ್ಟಿದ ಭಾರತ ಉತ್ತಮ ಆರಂಭ ಪಡೆಯಲಿಲ್ಲ. ಸಚಿನ್ ತೆಂಡೂಲ್ಕರ್ ಬೇಗನೆ ವಿಕೆಟ್ ಕಳೆದುಕೊಂಡು ಕ್ರೀಸ್ ತೊರೆದರು. ಅಂಬಟಿ ರಾಯುಡು ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಅವರು 41 ರನ್‌ಗಳೊಂದಿಗೆ ಅಜೇಯರಾಗಿ ಉಳಿದರು. ಮತ್ತೊಂದೆಡೆ ಪವನ್ ನೇಗಿ ಕೂಡ 21 ರನ್‌ಗಳ ಗಳಿಸುವ ಮೂಲಕ ಗೆಲುವು ತಂದು ಕೊಟ್ಟರು.
ಉಭಯ ತಂಡಗಳ ಪ್ಲೇಯಿಂಗ್-11
ಭಾರತ: ಸಚಿನ್ ತೆಂಡೂಲ್ಕರ್(ನಾಯಕ), ಅಂಬಟಿ ರಾಯುಡು (ವಿಕೆಟ್‌ಕೀಪರ್), ಗುರುಕೀರತ್ ಸಿಂಗ್ ಮಾನ್, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್, ಪವನ್ ನೇಗಿ, ಧವಳ್ ಕುಲಕರ್ಣಿ, ಅಭಿಮನ್ಯು ಮಿಥುನ್, ರಾಹುಲ್ ಶರ್ಮಾ
ದಕ್ಷಿಣ ಆಫ್ರಿಕಾ: ಹಾಶಿಮ್ ಆಮ್ಲಾ, ಜಾಕ್ವೆಸ್ ರುಡಾಲ್ಫ್, ಜಾಕ್ವೆಸ್ ಕಾಲಿಸ್(ನಾಯಕ), ಡೇನ್ ವಿಲಾಸ್(ವಿಕೆಟ್‌ಕೀಪರ್), ಹೆನ್ರಿ ಡೇವಿಡ್ಸ್, ಫರ್ಹಾನ್ ಬೆಹಾರ್ಡಿಯನ್, ವೆರ್ನಾನ್ ಫಿಲಾಂಡರ್, ಎಡ್ಡಿ ಲೀ, ಗಾರ್ನೆಟ್ ಕ್ರುಗರ್, ಮಖಾಯಾ ಎನ್ಟಿನಿ, ಥಂಡಿ ತ್ಶಬಲಾಲ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications