ಏಷ್ಯಾ ಕಪ್ ಟಿ20 ಟೂರ್ನಿಗೆ ಎಂಟು ತಂಡಗಳು ತಯಾರಿ ನಡೆಸಿವೆ. ಈ ಟೂರ್ನಿಯಲ್ಲಿ ಭಾರತ ಸಹ ಪಾಲ್ಗೊಳುತ್ತಿದೆ. ಟೀಮ್ ಇಂಡಿಯಾದ ಸೂರ್ಯಕುಮಾರ್ ಯಾದವ್ ಈ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಯುಎಇನಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಮೇಲೆ ನೆಟ್ಟಿರಲಿವೆ. ಇನ್ನು ಈ ಬಾರಿ ಟೀಮ್ ಇಂಡಿಯಾ ಪ್ರಾಯೋಜಕರು ಯಾರು ಎಂಬ ಪ್ರಶ್ನೆಗಳು ಎದ್ದಿವೆ. ಈ ಬಗ್ಗೆ ಬಿಸಿಸಿಐ ಬಿಗ್ ಅಪ್‌ಡೇಟ್ ನೀಡಿದೆ.
ಈ ಬಾರಿ ಟೀಮ್ ಇಂಡಿಯಾದ ಜೆರ್ಸಿಯ ಮೇಲೆ ಯಾವುದೇ ಪ್ರಾಯೋಜಕರು ಹೆಸರು ಕಾಣಿಸಿಕೊಳ್ಳುವುದಿಲ್ಲ. ಇಷ್ಟು ದಿನ ಭಾರತ ತಂಡದ ಜೆರ್ಸಿಯ ಮೇಲೆ ಡ್ರೀಮ್ 11 ಕಂಪನಿಯ ಹೆಸರಿತ್ತು. ಆದರೆ ಭಾರತ ಸರ್ಕಾರ ಆನ್‌ಲೈನ್ ಗೇಮಿಂಗ್ ಕುರಿತು ಕಠಿಣ ಕಾನೂನು ತಂದ ನಂತರ, ಡ್ರೀಮ್ ಇಲೆವೆನ್ ತನ್ನ ಹೆಸರನ್ನು ಜೆರ್ಸಿಯನ್ನು ಹಿಂತೆಗೆದುಕೊಳ್ಳಲಿದೆ. ಅಷ್ಟೇ ಅಲ್ಲದೆ ಈ ಕಂಪನಿಯ ಒಪ್ಪಂದ ಸಹ ಪೂರ್ಣಗೊಳ್ಳಲಿದೆ. ಹೀಗಾಗಿ ಬಿಸಿಸಿಐ ಹಾಗೂ ಗೇಮಿಂಗ್ ಫ್ಲಾಟ್ ಫಾರ್ಮ್ ಡ್ರೀಮ್ 11 ನಡುವಣ ಒಪ್ಪಂದ ತಿಲಾಂಜಲಿ ಬಿದ್ದಿದೆ. ಈಗ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯ ಮೇಲೆ ಯಾವ ಕಂಪನಿಯ ಹೆಸರು ನಮೂದಿಸುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಇನ್ನು ಬಿಸಿಸಿಐ ಈಗಾಗಲೇ ಪ್ರಾಯೋಜಕರಿಗಾಗಿ ಹುಡುಕಾಟ ನಡೆಸಿದೆ. ಇನ್ನು ಪ್ರಾಯೋಜಕತ್ವಕ್ಕೆ ಇಚ್ಛೆಯನ್ನು ಉಳ್ಳ ಕಂಪನಿಗಳು ಸೆ.16 ರ ಒಳಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹೀಗಾಗಿ ಏಷ್ಯಾ ಕಪ್‌ನಲ್ಲಿ ಟೀಮ್ ಇಂಡಿಯಾ ಜೆರ್ಸಿಯ ಮೇಲೆ ಯಾವ ಪ್ರಾಯೋಜಕರ ಹೆಸರು ಸಹ ಕಾಣಿಸಿಕೊಳ್ಳುವುದಿಲ್ಲ. ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಸೆ.2 ರಿಂದ ಅರ್ಜಿಯನ್ನು ಸ್ವೀಕರಿಸಲು ಆರಂಭಿಸಿದೆ.
ಆನ್‌ಲೈನ್ ಗೇಮಿಂಗ್ ಫ್ಲಾಟ್ ಫಾರ್ಮ್‌ಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಬಿಗ್ ಪ್ಲ್ಯಾನ್ ಮಾಡಿಕೊಂಡಿದೆ. ಡ್ರೀಮ್ 11, ವಿನ್ಜೊ ಮತ್ತು ಮೈ 11 ಸರ್ಕಲ್ ಸೇರಿದಂತೆ ಎಲ್ಲಾ ಫ್ಯಾಂಟಸಿ ಕಂಪನಿಗಳಿಗೆ ಸರ್ಕಾರದ ಈ ನಿಲುವ ಪೆಟ್ಟು ನೀಡಿದೆ. ಡ್ರೀಮ್ 11 ತನ್ನ ಒಪ್ಪಂದಕ್ಕೂ ಮೊದಲೇ ಜೆರ್ಸಿ ಪ್ರಾಯೋಜಕತ್ವದಿಂದ ಹಿಂದೆ ಸರಿಯಲು ನಿರ್ಧರಿಸಿದೆ. ಕೇಂದ್ರ ಸರ್ಕಾರದ ಕಾನೂನಿನ ಪ್ರಕಾರ ಹಣಗಳ ಗೇಮಿಂಗ್ ಫ್ಲಾಟ್ ಫಾರ್ಮ್ ಹಾಗೂ ಪ್ರಚಾರ ಮಾಡುವ ಜನರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ. ಇನ್ನು ಕೇಂದ್ರ ಸರ್ಕಾರ ಯಾವುದೇ ತೀರ್ಮಾನ ತೆಗೆದುಕೊಂಡರು ಅದನ್ನು ತಾವು ಉಲ್ಲಂಘಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟ ಪಡಿಸಿದೆ.
ಈ ಬಾರಿ ಏಷ್ಯಾ ಕಪ್ ಟಿ20 ಕ್ರಿಕೆಟ್‌ನ್ನು ಟೀಮ್ ಇಂಡಿಯಾ ಆಯೋಜಿಸುತ್ತಿದೆ. ಮುಂದಿನ ವರ್ಷ ಟಿ20 ವಿಶ್ವಕಪ್ ನಡೆಯಲಿದ್ದು, ಈ ಉದ್ದೇಶದಿಂದ ಏಷ್ಯಾ ಕಪ್ ಅನ್ನು ಟಿ20 ಸ್ವರೂಪದಲ್ಲಿ ಆಡಿಸಲಾಗುತ್ತಿದೆ. ಈಗ ಮೂರನೇ ಬಾರಿಗೆ ಏಷ್ಯಾ ಕಪ್ ಟಿ20 ಟೂರ್ನಿಯನ್ನು ಆಯೋಜಿಸಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾ ಯುಎಇಗೆ ಪ್ರಯಾಣವನ್ನು ಬೆಳೆಸಲಿದೆ. ಸೆ.9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಆರಂಭವಾಗಲಿದೆ. ಇನ್ನು ಟೀಮ್ ಸೆ.10 ರಂದು ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಆರಂಭಿಸಲಿದೆ. ಇನ್ನು ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಸೆ.14 ರಂದು ನಡೆಯಲಿದೆ. ಈ ಟೂರ್ನಿಯ ಫೈನಲ್ ಪಂದ್ಯ ಸೆ.29 ರಂದು ನಡೆಯಲಿದೆ.