ಬೆಂಗಳೂರು, ಜ.1: ಎಂಎಸ್ ಧೋನಿ ಅವರ ಅನುಪಸ್ಥಿತಿಯಲ್ಲಿ ಕೊಹ್ಲಿ ಅವರು ತಂಡವನ್ನು ಹೇಗೆ ನಿಭಾಯಿಸುತ್ತಾರೆ? ಎಂಬ ಪ್ರಶ್ನೆಯ ಬೆನ್ನಲ್ಲೇ ಅಂಕಿ ಅಂಶಗಳನ್ನು ನೋಡಿದಾಗ ಎಂಎಸ್ ಧೋನಿ ಇಲ್ಲಿತನಕ ಟೀಂ ಇಂಡಿಯಾ ಕಂಡಿರುವ ಅತ್ಯಂತ ಯಶಸ್ವಿ ನಾಯಕ ಎಂಬುದು ಸಾಬೀತಾಗುತ್ತದೆ.
ಧೋನಿ ಅವರು ನಾಯಕರಾಗಿ ವಿದೇಶದಲ್ಲಿ ಟೆಸ್ಟ್ ನಾಯಕನಾಗಿ ಹೆಚ್ಚಿನ ಸಾಧನೆ ಮಾಡಿಲ್ಲ. 31 ಪಂದ್ಯಗಳಲ್ಲಿ 15 ಸೋತು, 6 ಗೆದ್ದು ಮಿಕ್ಕಿದ್ದು ಡ್ರಾ ಮಾಡಿಕೊಂಡಿರುವ ದಾಖಲೆ ಇದ್ದರೂ ಒಟ್ಟಾರೆಯಾಗಿ 60 ಟೆಸ್ಟ್ ಪಂದ್ಯಗಳಲ್ಲಿ 27 ಪಂದ್ಯದಲ್ಲಿ ಗೆಲುವು ಕಂಡಿದ್ದು ಕದಿಮೆ ಸಾಧನೆಯಲ್ಲ. [ನಿವೃತ್ತಿ ಘೋಷಣೆ ಅಸಲಿ ಕಾರಣವೇನು? ]
1932ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ಮೊಟ್ಟಮೊದಲಬಾರಿಗೆ ಭಾರತದ ಟೆಸ್ಟ್ ಕ್ರಿಕೆಟ್ ತಂಡದ ಪರವಾಗಿ ಸಿಕೆ ನಾಯ್ಡು ಅವರು ಟಾಸ್ ಗೆ ತೆರಳಿದರು. ಇದಾದ ಬಳಿಕ ಇಲ್ಲಿ ತನಕ ಟೀಂ ಇಂಡಿಯಾ 32 ನಾಯಕರನ್ನು ಕಂಡಿದೆ. ಅಡಿಲೇಡ್ ನಲ್ಲಿ ವಿರಾಟ್ ಕೊಹ್ಲಿ ಭಾರತದ ಟೆಸ್ಟ್ ತಂಡದ 32ನೇ ನಾಯಕರಾದರು. ಇಲ್ಲಿ ತನಕ ಟೆಸ್ ಕ್ರಿಕೆಟ್ ಕ್ಯಾಪ್ಟನ್ ಗಳ ಸಾಧನೆಯ ಕೋಷ್ಟಕ ಇಲ್ಲಿದೆ...

| ಸಂಖ್ಯೆ | ನಾಯಕ | ಕಾಲಾವಧಿ | ಟೆಸ್ಟ್ | ಗೆಲುವು | ಸೋಲು | ಟೈ | ಡ್ರಾ |
| 1 | ಸಿ.ಕೆ ನಾಯ್ಡು | 1932-34 | 4 | 0 | 3 | 0 | 1 |
| 2 | ಮಹಾರಾಜ ವಿಳಿಯನಗರಂ | 1936 | 3 | 0 | 2 | 0 | 1 |
| 3 | ನವಾಬ್ ಪಟೌಡಿ ಇಫ್ತಿಕಾರ್ ಅಲಿ ಖಾನ್ | 1946 | 3 | 0 | 1 | 0 | 2 |
| 4 | ಲಾಲಾ ಅಮರನಾಥ್ | 1947-52 | 15 | 2 | 6 | 0 | 7 |
| 5 | ವಿಜಯ್ ಹಜಾರೆ | 1951-53 | 14 | 1 | 5 | 0 | 8 |
| 6 | ವಿನೂ ಮಂಕಡ್ | 1955-59 | 6 | 0 | 1 | 0 | 5 |
| 7 | ಗುಲಾಂ ಅಹ್ಮದ್ | 1955-59 | 3 | 0 | 2 | 0 | 1 |
| 8 | ಪಾಲಿ ಉಮ್ರಿಗಾರ್ | 1955-58 | 8 | 2 | 2 | 0 | 4 |
| 9 | ಹೇಮು ಅಧಿಕಾರಿ | 1959 | 1 | 0 | 0 | 0 | 1 |
| 10 | ದತ್ತ ಗಾಯಕ್ವಾಡ್ | 1959 | 4 | 0 | 4 | 0 | 0 |
| 11 | ಪಂಕಜ್ ರಾಯ್ | 1959 | 1 | 0 | 1 | 0 | 0 |
| 12 | ಜಿ ರಾಮಚಂದ್ | 1959-60 | 5 | 0 | 2 | 0 | 2 |
| 13 | ನಾರಿ ಕಂಟ್ರಾಕ್ಟರ್ | 1960-62 | 12 | 2 | 2 | 0 | 8 |
| 14 | ಮನ್ಸೂರ್ ಆಲಿ ಖಾನ್ | 1962-75 | 40 | 9 | 19 | 0 | 12 |
| 15 | ಚಂದು ಬೋರ್ಡೆ | 1967 | 1 | 0 | 1 | 0 | 0 |
| 16 | ಅಜಿತ್ ವಾಡೇಕರ್ | 1971-74 | 16 | 4 | 4 | 0 | 8 |
| 17 | ಶ್ರೀನಿವಾಸ್ ವೆಂಕಟರಾಘವನ್ | 1974-79 | 5 | 0 | 2 | 0 | 3 |
| 18 | ಸುನಿಲ್ ಗವಾಸ್ಕರ್ | 1976-85 | 47 | 9 | 8 | 0 | 30 |
| 19 | ಬಿಷನ್ ಸಿಂಗ್ ಬೇಡಿ | 1976-78 | 22 | 6 | 11 | 0 | 5 |
| 20 | ಜಿಆರ್ ವಿಶ್ವನಾಥ್ | 1980 | 2 | 0 | 1 | 0 | 1 |
| 21 | ಕಪಿಲ್ ದೇವ್ | 1983-87 | 34 | 4 | 7 | 1 | 22 |
| 22 | ದಿಲೀಪ್ ವೆಂಗ್ ಸರ್ಕರ್ | 1987-89 | 10 | 2 | 5 | 0 | 3 |
| 23 | ರವಿಶಾಸ್ತ್ರಿ | 1988 | 1 | 1 | 0 | 0 | 0 |
| 24 | ಕ್ರಿಸ್ ಶ್ರೀಕಾಂತ್ | 1989 | 4 | 0 | 0 | 0 | 4 |
| 25 | ಮಹಮ್ಮದ್ ಅಜರುದ್ದೀನ್ | 1990-1999 | 47 | 14 | 14 | 0 | 19 |
| 26 | ಸಚಿನ್ ತೆಂಡೂಲ್ಕರ್ | 1996-2000 | 25 | 4 | 9 | 0 | 12 |
| 27 | ಸೌರವ್ ಗಂಗೂಲಿ | 2000-2005 | 49 | 21 | 13 | 0 | 15 |
| 28 | ರಾಹುಲ್ ದ್ರಾವಿಡ್ | 2003-2007 | 25 | 8 | 6 | 0 | 11 |
| 29 | ವೀರೇಂದ್ರ ಸೆಹ್ವಾಗ್ | 2005-2012 | 4 | 2 | 1 | 0 | 1 |
| 30 | ಅನಿಲ್ ಕುಂಬ್ಳೆ | 2007-08 | 14 | 3 | 5 | 0 | 6 |
| 31 | ಎಂಎಸ್ ಧೋನಿ | 2008 -2014 | 60 | 27 | 18 | 0 | 5 |
| 32 | ವಿರಾಟ್ ಕೊಹ್ಲಿ | 2014- | 1 | 0 | 1 | 0 | 0 |