Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಕೌಂಟಿ 11: ಕೊಹ್ಲಿ ಪಡೆಯ 3 ದಿನಗಳ ಅಭ್ಯಾಸ ಪಂದ್ಯ ಇಂದು ಆರಂಭ

Indian vs County Select XI: When And Where To Watch Warm-up Match

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಸೋಲು ಕಂಡ ಬಳಿಕ ಭಾರತೀಯ ಟೆಸ್ಟ್ ತಂಡ ಸುದೀರ್ಘ ವಿರಾಮದ ಅವಧಿಯನ್ನು ಇಂಗ್ಲೆಂಡ್‌ನಲ್ಲಿ ಕಳೆದಿದೆ. ಈಗ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಸಜ್ಜಾಗಿರುವ ವಿರಾಟ್ ಕೊಹ್ಲಿ ಪಡೆ ಇಂದು (ಮಂಗಳವಾರ) ಕೌಂಟಿ ಸೆಲೆಕ್ಟ್ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನಾಡಲಿದೆ. ಡರ್ಹಾಮ್‌ನ ರಿವರ್‌ಸೈಡ್ ಮೈದಾನದಲ್ಲಿ ಈ ಪಂದ್ಯ ಆಯೋಜನೆಯಾಗಿದೆ.

ಕೊರೊನಾವೈರಸ್‌ಗೆ ತುತ್ತಾಗಿರುವ ರಿಷಭ್ ಪಂತ್ ಇನ್ನು ಕೂಡ ಐಸೋಲೇಶನ್‌ನಲ್ಲಿದ್ದಾರೆ. ಜೊತೆಗೆ ವೃದ್ಧಿಮಾನ್ ಸಾಹಾ ಕೂಡ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕವಾಗಿದ್ದಾರೆ. ಹೀಗಾಗಿ ಈ ಇಬ್ಬರು ಕೂಡ ಈ ಅಭ್ಯಾಸ ಪಂದ್ಯದಿಂದ ಹೊರಗುಳಿಯುವುದು ಖಚಿತವಾಗಿದೆ. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಕೆಎಲ್ ರಾಹುಲ್ ಹೆಗಲಿಗೇರಲಿದೆ.

ಇನ್ನು ಟೆಸ್ಟ್ ಸರಣಿಯ ಆರಂಭಕ್ಕೂ ಮುನ್ನವೇ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ಗಾಯಗೊಂಡಿದ್ದು ಇಂಗ್ಲೆಂಡ್ ವಿರುದ್ಧದ ಸಂಪೂರ್ಣ ಸರಣಿಯಿಂದ ಹೊರಗುಳಿಯಲಿದ್ದಾರೆ. ಹೀಗಾಗಿ ಮಯಾಂಕ್ ಅಗರ್ವಾಲ್ ಆರಂಭಿಕನಾಗಿ ಈ ಅಭ್ಯಾಸ ಪಂದ್ಯದಲ್ಲಿ ರೋಹಿತ್ ಶರ್ಮಾಗೆ ಸಾಥ್ ನೀಡಲಿದ್ದಾರೆ.

ಅಭ್ಯಾಸ ಪಂದ್ಯದ ಆರಂಭ ಹಾಗೂ ನೇರಪ್ರಸಾರದ ಮಾಹಿತಿ:
ಪಂದ್ಯ: ಕೌಂಟಿ ಸೆಲೆಕ್ಟ್ 11 vs ಭಾರತ, 3 ದಿನಗಳ ಅಭ್ಯಾಸ ಪಂದ್ಯ
ದಿನ: ಜುಲೈ 20 ರಿಂದ ಜುಲೈ 22
ಸಮಯ: ಭಾರತೀಯ ಕಾಲಮಾನ 3:30 PM
ಸ್ಥಳ: ರಿವರ್‌ಸೈಡ್ ಗ್ರೌಂಡ್
ನೇರಪ್ರಸಾರ: ಟಿವಿ ಚಾನೆಲ್‌ಗಳಲ್ಲಿ ಇಲ್ಲ, ಡರ್ಹಾಮ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ನ ಯುಟ್ಯೂಬ್‌ ಚಾನೆಲ್‌ನಲ್ಲಿ ನೇರಪ್ರಸಾರ

Ishan Kishan ಮೊದಲ ಬಾಲ್ ಸಿಕ್ಸ್ ಹೊಡೆಯೋದಕ್ಕೆ ಅಸಲಿ ಕಾರಣ | Oneindia Kannada

Story first published: Tuesday, July 20, 2021, 12:16 [IST]
Other articles published on Jul 20, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+