Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಶ್ರೀಲಂಕಾ ಸೋಲಿಸಿ ಮಹಿಳೆಯರ 'ಎಮರ್ಜಿಂಗ್ ಏಷ್ಯಾ ಕಪ್‌' ಗೆದ್ದ ಭಾರತ

Indian women beat Sri Lanka by 14 runs, clinch Emerging Asia Cup title

ಕೊಲಂಬೋ, ಅಕ್ಟೋಬರ್ 31: ಕೊಲಂಬೋದಲ್ಲಿ ನಡೆದ ಮಹಿಳೆಯರ ಎಮರ್ಜಿಂಗ್ ಏಷ್ಯಾ ಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಭಾರತದ ಮಹಿಳೆಯರು 14 ರನ್ ಜಯ (ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ) ದಾಖಲಿಸಿದ್ದಾರೆ.

ದೇವಿಕಾ ವೈದ್ಯ ಮತ್ತು ತನುಜಾ ಕನ್ವರ್ ತಲಾ 4 ವಿಕೆಟ್ ಕೆಡವಿ ಎದುರಾಳಿ ಶ್ರೀಲಂಕಾ ತಂಡವನ್ನು ಕಾಡಿದರು. ತನುಶ್ರೀ ಸರ್ಕಾರ್, ಸಿಮ್ರನ್ ಬಹದ್ದೂರ್ ಅವರ ಬ್ಯಾಟಿಂಗ್‌ ನೆರವೂ ದೊರೆತಿದ್ದರಿಂದ ಭಾರತದ ಮಹಿಳಾ ತಂಡ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದ ಮಹಿಳಾ ತಂಡ, ತಾನಿಯಾ ಭಾಟಿಯಾ 18, ತನುಶ್ರೀ ಸರ್ಕಾರ್ 47, ಸಿಮ್ರನ್ ಬಹದ್ದೂರ್ 34, ಸುಶ್ರೀ ದಿವ್ಯದರ್ಶಿನಿ 14, ಮನಾಲಿ ದಕ್ಷಿಣಿ 18 ರನ್‌ನೊಂದಿಗೆ 50 ಓವರ್‌ಗೆ 9 ವಿಕೆಟ್ ನಷ್ಟದಲ್ಲಿ 175 ರನ್ ಮಾಡಿತು.

ಶ್ರೀಲಂಕಾ ಮಹಿಳಾ ತಂಡದ ಬ್ಯಾಟಿಂಗ್‌ ವೇಳೆ ಮಳೆ ಸುರಿದಿದ್ದರಿಂದ 35 ಓವರ್‌ಗೆ 150 ರನ್ ಗುರಿ ನೀಡಲಾಗಿತ್ತು. ನಾಯಕಿ ಹರ್ಷಿತಾ ಮಾದವಿ 39, ಲಿಹಿನಿ ಅಪ್ಸರ 22, ಮಧುಶಿಕಾ ಮೆತಾನಂದ 25 ರನ್ ಸೇರ್ಪಡೆಯೊಂದಿಗೆ ಲಂಕಾ 34.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 135 ರನ್ ಮಾಡಿತು.

Story first published: Thursday, October 31, 2019, 11:26 [IST]
Other articles published on Oct 31, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+