ಭಾರತ vs ದಕ್ಷಿಣ ಆಫ್ರಿಕಾ 4ನೇ ಟಿ20 ಪಂದ್ಯದ ವರದಿ

ಸೆಂಚೂರಿಯನ್, ಫೆಬ್ರವರಿ 21: ದಕ್ಷಿಣ ಆಫ್ರಿಕಾ ಮಹಿಳಾ ತಂಡದ ವಿರುದ್ಧ 4ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತದ ಮಹಿಳೆಯರ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ದ.ಆಫ್ರಿಕಾ ತಂಡ ವಿಕೆಟ್ ನಷ್ಟವಿಲ್ಲದೆ 12 ಓವರ್‌ಗೆ 93 ರನ್ ಗಳಿಸಿದೆ.
ಐದು ಟಿ20 ಪಂದ್ಯಗಳ ಸರಣಿಯಲ್ಲಿ ಇಂದು ನಾಲ್ಕನೇ ಪಂದ್ಯ ನಡೆಯುತ್ತಿದ್ದು, 2 ಪಂದ್ಯದಲ್ಲಿ ಗೆದ್ದಿರುವ ಭಾರತದ ಮಹಿಳೆಯರು ಈ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಸೆಂಚುರಿಯನ್‌ನ ಸೂಪರ್‌ಸ್ರೋರ್ಟ್ ಪಾರ್ಟ್ ಅಂಗಳದಲ್ಲಿ ನಡೆಯುತ್ತಿರುವ ಈ ಟಿ20 ಪಂದ್ಯ ಉಭಯ ತಂಡಗಳಿಗೂ ಮಹತ್ತರವಾಗಿದ್ದು, ಭಾರತದ ಮಹಿಳೆಯರು ಸರಣಿ ಜಯಿಸುವ ವಿಶ್ವಾಸದಲ್ಲಿ ದ.ಆಫ್ರಿಕಾದ ಮಹಿಳೆಯರು ಈ ಪಂದ್ಯ ಗೆದ್ದು ಸರಣಿಯನ್ನು ಜೀವಂತವಾಗಿಡುವ ಪ್ರಯತ್ನದಲ್ಲಿದ್ದಾರೆ.
ಮೊದಲ ಎರಡು ಪಂದ್ಯವನ್ನು ಅಧಿಕಾರಯುತವಾಗಿ ಗೆದ್ದಿದ್ದ ಭಾರತದ ಮಹಿಳೆಯರು ಮುರನೇ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಸೋಲನ್ನಪ್ಪಿದ್ದರು. ಮೊದಲ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಭಾರಿಸಿ ಮಿಂಚಿದ್ದ ನಾಯಕಿ ಮಿಥಾಲಿ ರಾಜ್ ಅವರು ಮೂರನೇ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು.
ಭಾರತದ ಬ್ಯಾಟಿಂಗ್ ಶಕ್ತಿಯುತವಾಗಿದ್ದು, ಮಿಥಾಲಿ ರಾಜ್, ಸ್ಮೃತಿ ಮಂದಾನಾ, ವೇದಾ ಕೃಷ್ಣಮೂರ್ತಿ ಅವರುಗಳು ತಂಡದ ಪ್ರಮುಖ ಬ್ಯಾಟಿಂಗ್ ಶಕ್ತಿ ಎನಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications