ಕ್ರಿಕೆಟ್: ಸರಣಿ ಜಯದ ಮೇಲೆ ಭಾರತದ ವನಿತೆಯರ ಕಣ್ಣು

ಕಿಂಬರ್ಲಿ, ಫೆಬ್ರವರಿ 07: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್ ತಂಡದ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮೊದಲ ಪಂದ್ಯ ಗೆದ್ದಿರುವ ಭಾರತದ ಆಟಗಾರ್ತಿಯರು ಇಂದು ನಡೆಯಲಿರುವ ಎರಡನೇ ಪಂದ್ಯ ಗೆದ್ದು ಸರಣಿ ತಮ್ಮದಾಗಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಸರಣಿಯ ಎರಡನೇ ಏಕದಿನ ಪಂದ್ಯ ಕಿಂಬರ್ಲಿಯಲ್ಲಿ ನಡೆಯಲಿದ್ದು, ಮೊದಲ ಪಂದ್ಯದಲ್ಲಿ ಆಡಿದ 11 ಆಟಗಾರ್ತಿಯರೇ ಈ ಪಂದ್ಯದಲ್ಲೂ ಆಡಲಿದ್ದಾರೆ.
ಮೊದಲ ಪಂದ್ಯ ಸೋತಿರುವ ಅತಿಥೇಯ ದ.ಆಫ್ರಿಕಾ ಎರಡನೇ ಪಂದ್ಯವನ್ನು ಗೆದ್ದು ಸರಣಿಯನ್ನು ಜೀವಂತವಾಗಿ ಉಳಿಸುವ ಯೋಜನೆಯಲ್ಲಿದ್ದಾರೆ. ಎರಡೂ ತಂಡಗಳಿಗೆ ಈ ಪಂದ್ಯ ಅತ್ಯಂತ ಮಹತ್ವಾಗಿದ್ದು, ಎರಡೂ ತಂಡಗಳು ಜಯ ಗಳಿಸಲು ಶಕ್ತಿಮೀರಿ ಪ್ರಯತ್ನಿಸಲಿವೆ.
ಈ ಸರಣಿಯನ್ನು ಜಯಿಸಿದ ತಂಡ ನೇರವಾಗಿ 2021ರಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಕಾರಣ ಇತ್ತಂಡಗಳಿಗೆ ಸರಣಿ ಜಯ ಅತ್ಯಂತ ಅವಶ್ಯಕವೂ ಆಗಿವೆ.
ವಿಶ್ವಕಪ್ ಟೂರ್ನಿಯಲ್ಲಿ ಅತ್ಯುತ್ತಮ ಆಟ ಆಡಿ ರನರ್ ಅಪ್ ಆಗಿದ್ದ ಮಿಥಾಲಿ ರಾಜ್ ಪಡೆ ಆ ನಂತರ ಒಂದೂ ಪಂದ್ಯಗಳನ್ನಾಡಿರಲಿಲ್ಲ. ಬಹಳ ಕಾಲದ ವಿರಾಮದ ನಂತರ ದ.ಆಫ್ರಿಕಾಕ್ಕೆ ಬಂದ ತಂಡ ವಿಶ್ವಕಪ್‌ನಲ್ಲಿ ತಾನು ತೋರಿಸಿದ್ದ ಅದೇ ಛಾತಿಯ ಆಟವಾಡಿ ಮೊದಲ ಪಂದ್ಯವನ್ನು ಗೆದ್ದಿದೆ. ತಮ್ಮ ಕ್ರಿಕೆಟ್ ಹೊಳಪು ಇನ್ನೂ ಕಳೆಗುಂದಿಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪಂದ್ಯವು ಕಿಂಬರ್ಲಿಯ ಡೈಮಂಡ್ ಓವಲ್ ಮೈದಾನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 1.30ಕ್ಕೆ ಪ್ರಾರಂಭವಾಗಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications