For Quick Alerts
ALLOW NOTIFICATIONS  
For Daily Alerts
 

ಇತಿಹಾಸ ನಿರ್ಮಿಸಿದ ದೀಪ್ತಿ ಶರ್ಮಾ: ಈ ದಾಖಲೆ ಮಾಡಿದ ಮೊದಲ ಭಾರತೀಯ ಕ್ರಿಕೆಟರ್

Indian Women Cricketer Deepti Sharma Creates New Record

ಸೂರತ್: ಲಾಲಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ಮಂಗಳವಾರ (ಸೆಪ್ಟೆಂಬರ್ 24) ನಡೆದ ದಕ್ಷಿಣ ಆಫ್ರಿಕಾ ವನಿತೆಯರು ಮತ್ತು ಭಾರತ ವನಿತೆಯರ ನಡುವಿನ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಭಾರತ 11 ರನ್ ಗಳ ಜಯ ದಾಖಲಿಸಿದೆ.

ದೀಪ್ತಿ ಶರ್ಮಾ ಅವರ ಅದ್ಭುತ ಆಲ್ ರೌಂಡರ್ ಆಟದ ನೆರವಿನಿಂದ ಭಾರತ ಮೊದಲ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ಅಪರೂಪದ ದಾಖಲೆಯೊಂದು ನಿರ್ಮಿಸಿದ್ದಾರೆ.

ನಾಲ್ಕು ಓವರ್ ಬೌಲಿಂಗ್ ಮಾಡಿದ ದೀಪ್ತಿ ಶರ್ಮಾ ಅವರು 8 ರನ್ ನೀಡಿ 3 ವಿಕೆಟ್ ಗಳಿಸಿದ್ದರು. ಜೊತೆಗೆ ಬ್ಯಾಟಿಂಗ್ ನಲ್ಲಿ 16 ರನ್ ಬಾರಿಸಿದ್ದರು. ಆದರೆ, ದೀಪ್ತಿ ಶರ್ಮಾ ದಾಖಲೆ ಬರೆದಿರುವುದು ಬೌಲಿಂಗ್ ನಲ್ಲಿ. ಅಷ್ಟಕ್ಕೂ, ಆ ದಾಖಲೆ ಏನು? ಮುಂದೆ ಓದಿ....

3 ಮೇಡಿನ್ ಮಾಡಿದ ಮೊದಲ ಭಾರತೀಯ

3 ಮೇಡಿನ್ ಮಾಡಿದ ಮೊದಲ ಭಾರತೀಯ

ಟಿ-ಟ್ವೆಂಟಿ ಕ್ರಿಕೆಟ್ ನಲ್ಲಿ ಮೇಡಿನ್ ಓವರ್ ಬೌಲಿಂಗ್ ಮಾಡುವುದು ದೊಡ್ಡ ಸವಾಲು. ಅಂತಹದ್ರಲ್ಲಿ ನಾಲ್ಕು ಓವರ್ ಬೌಲಿಂಗ್ ಹಾಕಿದ ದೀಪ್ತಿ ಶರ್ಮಾ ಅವರು ಮೂರು ಓವರ್ ಮೇಡಿನ್ ಮಾಡುವ ಮೂಲಕ ದಾಖಲೆ ಬರೆದಿದ್ದಾರೆ. ಟಿ-ಟ್ವೆಂಟಿ ಪಂದ್ಯವೊಂದರಲ್ಲಿ ಭಾರತದ ಪರ ಮೂರು ಓವರ್ ಮೇಡಿನ್ ಮಾಡಿದ ಮೊದಲ ಮಹಿಳೆ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ದೀಪ್ತಿ ಶರ್ಮಾ ಪಾತ್ರರಾಗಿದ್ದಾರೆ.

19ನೇ ಎಸೆತ ರನ್ ಬಿಟ್ಟು ಕೊಟ್ಟ ದೀಪ್ತಿ

19ನೇ ಎಸೆತ ರನ್ ಬಿಟ್ಟು ಕೊಟ್ಟ ದೀಪ್ತಿ

ಭಾರತದ ಪರ 3ನೇ ಓವರ್ ಬೌಲಿಂಗ್ ಮಾಡಿದ್ದ ದೀಪ್ತಿ ಯಾವುದೇ ರನ್ ಇಲ್ಲದ ಮೇಡಿನ್ ದಾಖಲಿಸಿದರು. ನಂತರ 5ನೇ ಓವರ್ ಬೌಲಿಂಗ್ ಮಾಡಿ 2 ವಿಕೆಟ್ ಪಡೆದು ಮೇಡಿನ್ ಹಾಕಿದರು. ನಂತರ 14 ಓವರ್ ನಲ್ಲಿ ಮೇಡಿನ್ ಮಾಡಿ 1 ವಿಕೆಟ್ ಗಳಿಸಿದರು. ಮೊದಲ ಮೂರು ಓವರ್ ನಲ್ಲಿ ಯಾವುದೇ ರನ್ ನೀಡಿಲ್ಲ. ನಾಲ್ಕನೇ ಓವರ್ ನ ಮೊದಲ ಎಸೆತದಲ್ಲಿ ಎರಡು ರನ್ ಬಿಟ್ಟು ಕೊಟ್ಟರು.

ಯಾವುದೇ ಬೌಂಡರಿ ಇಲ್ಲ

ಯಾವುದೇ ಬೌಂಡರಿ ಇಲ್ಲ

ದೀಪ್ತಿ ಶರ್ಮಾ ಅವರು ತಮ್ಮ ನಾಲ್ಕನೇ ಓವರ್ ಮಾಡಿ 8 ರನ್ ಬಿಟ್ಟುಕೊಟ್ಟರು. ಪಂದ್ಯದಲ್ಲಿ ಒಟ್ಟು ನಾಲ್ಕು ಓವರ್ ಬೌಲಿಂಗ್ ನಲ್ಲಿ ಮಾಡಿದ ದೀಪ್ತಿ, ಯಾವುದೇ ಬೌಂಡರಿ ಕೊಟ್ಟಿಲ್ಲ ಎನ್ನುವುದು ಕೂಡ ವಿಶೇಷ. ಈ ಮೂಲಕ 131 ರನ್ ಗುರಿಯನ್ನ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ತಂಡವನ್ನ 119 ರನ್ ಗಳಿಗೆ ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ವಿಶ್ವದ ಒಂಭತ್ತನೇ ಆಟಗಾರ್ತಿ ದೀಪ್ತಿ

ವಿಶ್ವದ ಒಂಭತ್ತನೇ ಆಟಗಾರ್ತಿ ದೀಪ್ತಿ

ಟಿ-ಟ್ವೆಂಟಿ ಪಂದ್ಯದಲ್ಲಿ ಮೂರು ಓವರ್ ಮೇಡಿನ್ ಮಾಡಿರುವ ಪಟ್ಟಿಯಲ್ಲಿ ಭಾರತದ ದೀಪ್ತಿ ಶರ್ಮಾ ಅವರು ಒಂಭತ್ತನೇ ಸ್ಥಾನ ಪಡೆದುಕೊಂಡಿದ್ದಾರೆ. ಇದಕ್ಕೂ ಮುಂಚೆ ವಿಶ್ವದ ಏಂಟು ಆಟಗಾರ್ತಿಯರು ಮೂರು ಓವರ್ ಮೇಡಿನ್ ಮಾಡಿರುವ ದಾಖಲೆ ಹೊಂದಿದ್ದಾರೆ. ಟಾಂಜೇನಿಯಾದ ಪೆರಿಸ್ ಮಾಮುನ್ಯಾ ಅವರು ನಾಲ್ಕು ಓವರ್ ಮೇಡಿನ್ ಮಾಡಿದ ಒಬ್ಬರೇ ಆಟಗಾರ್ತಿ ಎನಿಸಿಕೊಂಡಿದ್ದಾರೆ.

ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ದೀಪ್ತಿ ಶರ್ಮಾಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ

ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ದೀಪ್ತಿ ಶರ್ಮಾ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ 43 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ಗಳಿಸಿತು. 131 ರನ್ ಗುರಿ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ವನಿತೆಯರು 19.5 ಓವರ್ ಗಳಲ್ಲಿ ತನ್ನ ಎಲ್ಲ ವಿಕೆಟ್ ಕಳೆದುಕೊಂಡು 119 ರನ್ ಗಳಿಸುವಲ್ಲಿ ಮಾತ್ರ ಶಕ್ತವಾಯಿತು.

Story first published: Wednesday, September 25, 2019, 14:30 [IST]
Other articles published on Sep 25, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+