ಟಿ-20 ಸರಣಿ ಸೋತ ಭಾರತದ ವನಿತೆಯರು
ಬೆಂಗಳೂರು, ಜು. 13: ನ್ಯೂಜಿಲೆಂಡ್ ವನಿತೆಯರ ತಂಡ ಭಾರತದ ವಿರುದ್ಧ ಸತತ ಎರಡನೇ ಜಯ ದಾಖಲಿಸುವ ಮೂಲಕ ಟಿ-20 ಸರಣಿಯನ್ನು ತನ್ನದಾಗಿಸಿಕೊಂಡಿದೆ.
34 ಎಸೆತಗಳಲ್ಲಿ 60 ರನ್ ಗಳಿಸಿದ ರಚೆಲ್ ಪ್ರೀಸ್ಟ್ ನ್ಯೂಜಿಲೆಂಡ್ ಗೆಲುವಿಗೆ ಕಾರಣಕರ್ತರಾದರು. ಮೊದಲ ಪಂದ್ಯದಂತೆ ಇಲ್ಲೂ ಭಾರತೀಯರು ಬ್ಯಾಟಿಂಗ್ ನಲ್ಲಿ ಎಡವಿದರು. ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡ 136 ರನ್ ಗಳ ಸಾಧಾರಣ ಮೊತ್ತ ದಾಖಲು ಮಾಡಿತ್ತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಗೆ ಇಳಿದ ಕಿವೀಸ್ 17.5 ಓವರ್ ಗಳಲ್ಲೇ ಗುರಿ ಮುಟ್ಟಿತು.[ನಾಯಕಿ ಮಿಥಾಲಿ ದಿಟ್ಟ ಹೋರಾಟ, ಕಿವೀಸ್ ವಿರುದ್ಧ ಜಯ]

ಆರಂಭದಲ್ಲೇ ಮಿಥಾಲಿ ರಾಜ್ ಮತ್ತು ಲತಿಕಾ ಕುಮಾರಿ ಅವರನ್ನು ಕಳೆದುಕೊಂಡ ಭಾರತ ಮತ್ತೆ ಚೇತರಿಸಿಕೊಳ್ಳಲೇ ಇಲ್ಲ. ವನಿತಾ ಮತ್ತು ಕೌರ್ ನಡುವಿನ 47 ರನ್ ಜತೆಯಾಟ ಭಾರತಕ್ಕೆ ಕೊಂಚ ಚೇತರಿಕೆ ನೀಡಿತು. ಕಿವೀಸ್ ಆರಂಭವೂ ಉತ್ತಮವಾಗಿರಲಿಲ್ಲ. 19 ರನ್ ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಪ್ರೀಸ್ಟ್ ಆಧಾರವಾದರು.
ಎರಡು ತಂಡಗಳ ನಡುವೆ ಅಂತಿಮ ಟಿ-20 ಪಂದ್ಯ ಜುಲೈ ರಂದು ನಡೆಯಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ ಸತತ ಎರಡು ಜಯ ದಾಳಿಸಿದೆ. ಮುಂದಿನ ಪಂದ್ಯ ಸಹ ಬೆಂಗಳೂರಿನಲ್ಲಿತೇ ನಡೆಯಲಿದೆ. ಏಕದಿನ ಸರಣಿಯಲ್ಲಿ ಭಾರತ ಜಯ ದಾಖಲಿಸಿತ್ತು.
Story first published: Wednesday, January 3, 2018, 10:03 [IST]
Other articles published on Jan 3, 2018
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications