Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮಹಾಕಾಳೇಶ್ವರ್ ದರ್ಶನ ಪಡೆದ ಟೀಮ್ ಇಂಡಿಯಾ ಆಟಗಾರ್ತಿಯರು

ಏಕದಿನ ವಿಶ್ವ ಕಪ್ ಗೆದ್ದ ಭಾರತ ತಂಡದ ಆಗಾರ್ತಿಯರು ಗುರುವಾರ ಬೆಳಗಿನ ಜಾವ ಮಹಾಕಾಳೇಶ್ವರ್ ಸನ್ನಿದಿಯಲ್ಲಿ ನಡೆಯುವ ಭಸ್ಮಾರತಿಯಲ್ಲಿ ಭಾಗವಹಿಸಿದರು. ಹೊಸ ವರ್ಷದ ಮೊದಲ ದಿನ ಭಗವಂತ ಆರ್ಶಿವಾದ ಪಡೆದರು. ಭಾರತ ಇತ್ತೀಚಿಗೆ ಶ್ರೀಲಂಕಾ ವಿರುದ್ಧ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಕ್ಲೀನ್ ಸ್ವೀಪಗ ಸಾಧನೆ ಮಾಡಿತ್ತು.

ಹೊಸ ವರ್ಷದ ಮೊದಲ ದಿನ ಟೀಮ್ ಇಂಡಿಯಾ ಆಗಾರ್ತಿಯರು ಉಜ್ಜಯಿನಿ ಯಲ್ಲಿ ಮಹಾಕಾಳೇಶ್ವರ್ ಸನ್ನಿಧಿಗೆ ಭೇಟಿ ನೀಡಿದರು. ಸ್ಮೃತಿ ಮಂಧಾನ, ಶಫಾಲಿ ವರ್ಮಾ, ರೇಣುಕಾ ಸಿಂಗ್ ಠಾಕೂರ್, ಸ್ನೇಹ್ ರಾಣಾ, ರಾಧಾ ಯಾದವ್ ಮತ್ತು ಅರುಂಧತಿ ರೆಡ್ಡಿ ಸೇರಿದಂತೆ ಇತರರು ದೇವಾಲಯದ ಆವರಣದಲ್ಲಿ ಕುಳಿತು ದೇವರ ನಾಮ ಸ್ಮರಿಸುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಹೊಸ ಸವಾಲಿಗೂ ಮುನ್ನ ಟೀಮ್ ಇಂಡಿಯಾ ಆಟಗಾರ್ತಿಯರು ದೇವರ ಆರ್ಶಿವಾದವನ್ನು ಪಡೆದರು.

Indian Women s Cricket Stars Visit Mahakaleshwar After World Cup Win amp amp Sri Lanka Series Sweep

ಭಾರತ ಈ ದೇವಸ್ಥಾನಕ್ಕೆ ಈ ಮೊದಲು ಭೇಟಿ ನೀಡಿತ್ತು. ವಿಶ್ವಕಪ್‌ ಸಮಯದಲ್ಲಿ ಇಂಗ್ಲೆಂಡ್‌ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ಹರ್ಮನ್ ಪ್ರೀತ್‌ ಪಡೆ ಮಹಾಕಾಳೇಶ್ವರ್ ಸನ್ನಿಧಿಗೆ ಭೇಟಿ ನೀಡಿ ಆಶೀರ್ವಾದವನ್ನು ಪಡೆದಿತ್ತು. ಭಾರತ ತಂಡ ಈ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿ ಅಬ್ಬರಿಸಿತ್ತು. ಭಾರತ ತಂಡ ತವರಿನಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಪ್ರದರ್ಶನ ನೀಡಿದೆ. ಈ ವೇಳೆ ಸಂಘಟಿತ ಆಟದ ಪ್ರದರ್ಶನ ನೀಡಿದ ಭಾರತ ಮಹಿಳಾ ತಂಡ, ಆಡಿದ ಐದೂ ಪಂದ್ಯಗಳನ್ನು ಗೆದ್ದು ಬೀಗಿತ್ತು. ಅಲ್ಲದೆ ಭಾರತ ತಂಡ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಚೊಚ್ಚಲ ಬಾರಿಗೆ ಟ್ರೋಫಿಗೆ ಮುತ್ತಿಟಿತ್ತು.‌

ಸಾಲು ಸಾಲು ಸವಾಲು

ಭಾರತ ತಂಡ ಈ ವರ್ಷ ನಡೆಯಲಿರುವ ಟಿ20 ವಿಶ್ವಕಪ್‌ ಮೇಲೆ ಚಿತ್ತ ನೆಟ್ಟಿದೆ. ಈ ವೇಳೆ ಸ್ಥಿರ ಪ್ರದರ್ಶನ ನೀಡಿ ಮತ್ತೊಂದು ಟ್ರೋಫಿ ಗೆಲ್ಲಲು ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡಿದೆ. ಭಾರತ ತಂಡ ಈ ವಿಶ್ವಕಪ್‌ಗೆ ಪೂರ್ವಭಾವಿಯಾಗಿ ಹಲವು ಟಿ20 ಸರಣಿಗಳನ್ನು ಆಡಲಿದೆ. ಅದರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಸರಣಿ ಫೆಬ್ರವರಿಯಲ್ಲಿ ನಡೆಯಲಿದೆ. ಇದಾದ ಬಳಿಕ ಇಂಗ್ಲೆಂಡ್‌ ವಿರುದ್ಧವೂ ಚುಟುಕು ಪಂದ್ಯಗಳ ಸರಣಿಯನ್ನು ಆಡಲಿದೆ.

Story first published: Thursday, January 1, 2026, 16:36 [IST]
Other articles published on Jan 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+