Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ದಕ್ಷಿಣ ಆಫ್ರಿಕಾ ವನಿತಾ ತಂಡ ವೈಟ್‌ವಾಷ್‌ಗೊಳಿಸಿದ ಭಾರತದ ವನಿತೆಯರು

Indian women’s cricket team complete 3-0 whitewash against South Africa

ವಡೋದರಾ, ಅಕ್ಟೋಬರ್ 18: ಸ್ಪಿನ್ನರ್ ಸಹಾಯದಿಂದ ಭಾರತದ ವನಿತಾ ತಂಡ ಪ್ರವಾಸಿ ದಕ್ಷಿಣ ಆಫ್ರಿಕಾ ವನಿತಾ ತಂಡದ ವಿರುದ್ಧ 3ನೇ ಏಕದಿನ ಪಂದ್ಯದಲ್ಲಿ ರೋಚಕ 6 ರನ್ ಗೆಲುವನ್ನಾಚರಿಸಿದೆ. ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಆಫ್ರಿಕಾ ತಂಡ 3-೦ ಸೋಲಿನೊಂದಿಗೆ ವೈಟ್‌ವಾಷ್ ಮುಖಭಂಗ ಅನುಭವಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತದ ಮಹಿಳಾ ತಂಡ, ಪೂನಂ ರಾವತ್ 15, ನಾಯಕಿ ಮಿಥಾಲಿ ರಾಜ್ 11, ಹರ್ಮನ್‌ಪ್ರೀತ್ ಕೌರ್ 38, ಶಿಖಾ ಪಾಂಡೆ 35, ಮಾನ್ಸಿ ಜೋಷಿ 12 ರನ್‌ನೊಂದಿಗೆ 45.5 ಓವರ್‌ ಮುಕ್ತಾಯಕ್ಕೆ ಎಲ್ಲಾ ವಿಕೆಟ್ ಕಳೆದು 146 ರನ್ ಮಾಡಿತು.

ಭಾರತದ ಇನ್ನಿಂಗ್ಸ್‌ನಲ್ಲಿ ಎದುರಾಳಿ ತಂಡ ಶಬ್ನಿಮ್ ಇಸ್ಮಾಯಿಲ್ 2, ಮಾರಿಜನ್ನೆ ಕಾಪ್ 3, ಅಯಾಬೊಂಗಾ ಖಕಾ 2, ಅಯಾಬೊಂಗಾ ಖಕಾ, ನೊಂಡುಮಿಸೊ ಶಾಂಗೇಸ್ ಮತ್ತು ಸುನೆ ಲೂಸ್ ತಲಾ 1 ವಿಕೆಟ್ ಪಡೆದರು. ಆಫ್ರಿಕಾ ಇನ್ನಿಂಗ್ಸ್‌ನಲ್ಲಿ ಎಕ್ತಾ ಬಿಶ್ತ್ 3, ದೀಪ್ತಿ ಶರ್ಮಾ 2, ರಾಜೇಶ್ವರಿ ಗಾಯಕ್ವಾಡ್ 2 ವಿಕೆಟ್‌ನೊಂದಿಗೆ ಪಾರಮ್ಯ ಮೆರೆದರು.

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಲಾರಾ ವೊಲ್ವಾರ್ಡ್ 23, ಲಿಜೆಲ್ ಲೀ 13, ಮಿಗ್ನಾನ್ ಡು ಪ್ರೀಜ್ 10, ಸುನೆ ಲೂಸ್ 24, ಮಾರಿಜನ್ನೆ ಕಾಪ್ 29, ಶಬ್ನಿಮ್ ಇಸ್ಮಾಯಿಲ್ 11, ನೊಂಡುಮಿಸೊ ಶಾಂಗೇಸ್ 10 ರನ್‌ನೊಂದಿಗೆ 48 ಓವರ್‌ಗೆ ಎಲ್ಲಾ ವಿಕೆಟ್‌ ಕಳೆದು 140 ರನ್ ಮಾಡಿತು. ಎಕ್ತಾ ಬಿಶ್ತ್ ಪಂದ್ಯಶ್ರೇಷ್ಠೆ ಎನಿಸಿದರು.

Story first published: Friday, October 18, 2019, 17:28 [IST]
Other articles published on Oct 18, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+