ತ್ರಿಕೋನ ಸರಣಿ: ಆಸ್ಟ್ರೇಲಿಯಾಗೆ ಸೋತ ಟೀಮ್ ಇಂಡಿಯಾ ವನಿತೆಯರು

ಟೀಮ್ ಇಂಡಿಯಾ ವನಿತೆಯರು ತ್ರಿಕೋನ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಸೋಲುಕಂಡಿದ್ದಾರೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ವಿಕೆಟ್‌ಗಳ ಸೋಲನ್ನು ಅನುಭವಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತೀಯ ವನಿತೆಯರು 20 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 103 ರನ್ ಗಳಿಸಲಷ್ಟೇ ಶಕ್ತರಾದರು. ಈ ಮೊತ್ತವನ್ನು ಆಸಿಸ್ ಮಹಿಳೆಯರು ಬೆನ್ನತ್ತಲು ಆಗಮಿಸಿದ್ದರು. ಈ ವೇಳೆ ಟೀಮ್ ಇಂಡಿಯಾ ಬೌಲಿಂಗ್ ಪಡೆಯೂ ಅದ್ಭುತವಾಗಿ ನಿಯಂತ್ರಣ ಮಾಡಿತು.
ಭಾರತದ ಬೌಲಿಂಗ್ ಪಡೆಯ ಎದುರು ಆಸ್ಟ್ರೇಲಿಯನ್ ವನಿತೆಯರು ತಿಣುಕಾಡಲು ಆರಂಭಿಸಿದರು. 49 ರನ್‌ಗಳಿಸುವಷ್ಟರಲ್ಲಿ ಮೂರು ವಿಕೆಟ್ ಪಡೆಯುವಲ್ಲಿಯೂ ಯಶಸ್ವಿಯಾಗಿದ್ದರು ಆದರೆ ರನ್ ತುಂಬಾ ಕಡಿಮೆಯಾಗಿದ್ದರಿಂದ ಮೊತ್ತವನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಟೀಮ್ ಇಂಡಿಯಾದ ಪರವಾಗಿ ಸ್ಮೃತಿ ಮಂದಾನ 35 ರನ್ ಗಳಿಸಿದರೆ ಹರ್ಮನ್ ಪ್ರೀತ್ 28 ರನ್ ಗಳಿಸಿದರು. ಅಂತಿಮವಾಗಿ ಭಾರತದ ಕೊನೆಯ ಆರು ವಿಕೆಟ್‌ಗಳು 21 ರನ್‌ಗಳ ಅಂತರದಲ್ಲಿ ಕಳೆದುಕೊಂಡಿತು. 14ನೇ ಓವರ್‌ನಲ್ಲಿ ಆಸ್ಟ್ರೇಲಿಯಾದ ವೇಗಿ ಪೆರಿ ಮೂರು ವಿಕೆಟ್‌ಗಳನ್ನು ಕಿತ್ತು ಆಘಾತವನ್ನು ನೀಡಿದರು.
ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ತ್ರಿಕೋನ ಸರಣಿಯಲ್ಲಿ ಭಾರತ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಪಾಲ್ಗೊಂಡಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಭಾರತೀಯ ವನಿತೆಯರು ಗೆಲುವನ್ನು ಕಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications