Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಸ್ಟ್ರೇಲಿಯಾಕ್ಕೆ ಭಾರತ ವನಿತಾ ತಂಡದ ಪ್ರವಾಸ ಮುಂದೂಡಿಕೆ

Indian womens tour of Australia postponed to next season

ಮೆಲ್ಬರ್ನ್: ಕೊರೊನಾವೈರಸ್ ಭೀತಿ ಶುರುವಾದಾಗಿನಿಂದ ಭಾರತೀಯ ಮಹಿಳಾ ತಂಡಕ್ಕೆ ಸ್ಪರ್ಧಾತ್ಮಕ ಪಂದ್ಯಗಳು ನಡೆದಿಲ್ಲ. ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳುವ ಮೂಲಕ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ವನಿತಾ ತಂಡ ಯೋಚಿಸುತ್ತಿತ್ತು. ಆದರೆ ಪ್ರವಾಸ ಸರಣಿ ಮುಂದೂಡಲ್ಪಟ್ಟಿದೆ.

ಕೊರೊನಾ ವೈರಸ್ ಭೀತಿಯಿಂದಾಗಿ 2021ರ ಭಾರತ ಮಹಿಳಾ ತಂಡದ ಆಸ್ಟ್ರೇಲಿಯಾ ಪ್ರವಾಸ 2021ರ ಸೀಸನ್‌ಗೆ (ದಿನಾಂಕ ಖಾತರಿಯಾಗಿಲ್ಲ) ಮುಂದೂಡಲ್ಪಟ್ಟಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಗುರುವಾರ (ಡಿಸೆಂಬರ್ 31) ಈ ಸಂಗತಿಯನ್ನು ಖಾತರಿಪಡಿಸಿದೆ. ಮುಂದಿನ ಸಾರಿ ಈ ಪ್ರವಾಸ ಸರಣಿ ನಡೆಸುವಾಗ 3 ಹೆಚ್ಚುವರಿ ಟಿ20ಐ ಪಂದ್ಯಗಳನ್ನು ನಡೆಸುವುದಾಗಿ ಕ್ರಿಕೆಟ್ ಆಸ್ಟ್ರೇಲಿಯಾ ಹೇಳಿದೆ.

ಭಾರತೀಯ ಮಹಿಳಾ ತಂಡ ಕಡೇಯ ಸಾರಿ ಸ್ಪರ್ಧಾತ್ಮಕ ಟೂರ್ನಿಯಲ್ಲಿ ಪಾಲ್ಗೊಂಡಿದ್ದು 2020ರ ಮಾರ್ಚ್‌ನಲ್ಲಿ ಮಹಿಳಾ ಟಿ20ಐ ವಿಶ್ವಕಪ್‌ನಲ್ಲಿ ಫೈನಲ್ ಪಂದ್ಯದಲ್ಲಿ. ಅದಾಗಿ ಕೊರೊನಾ ವೈರಸ್ ಶುರುವಾಗಿದ್ದರಿಂದ ಮಹಿಳಾ ತಂಡಕ್ಕೆ ಸುದೀರ್ಘ ವಿಶ್ರಾಂತಿ ದೊರೆತಿದೆ.

ಭಾರತ-ಆಸ್ಟ್ರೇಲಿಯಾ ಮಹಿಳಾ ತಂಡಗಳು 2021ರ ಜನವರಿಯಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದ್ದವು. ಅರಂಭಿಕ ಪಂದ್ಯ ಜನವರಿ 22ರಂದು ಕ್ಯಾನ್ಬೆರಾದಲ್ಲಿ, ದ್ವಿತೀಯ ಪಂದ್ಯ ಜನವರಿ 25ರಂದು ಮೆಲ್ಬರ್ನ್‌ನಲ್ಲಿ ಮತ್ತು ತೃತೀಯ ಪಂದ್ಯ ಜನವರಿ 28ರಂದು ಹೋಬರ್ಟ್‌ನಲ್ಲಿ ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಈ ಸರಣಿ ಮುಂದೂಡಲ್ಪಟ್ಟಿದೆ.

Story first published: Thursday, December 31, 2020, 16:43 [IST]
Other articles published on Dec 31, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+