ಇಂಗ್ಲೆಂಡ್ ಪ್ರವಾಸಕ್ಕೆ ಭಾರತೀಯ ವನಿತಾ ತಂಡಗಳು ಪ್ರಕಟ

ನವದೆಹಲಿ: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಶುಕ್ರವಾರ (ಮೇ 14) ಇಂಗ್ಲೆಂಡ್ ಪ್ರವಾಸ ಸರಣಿಗಾಗಿ ಭಾರತೀಯ ಮಹಿಳಾ ತಂಡ ಹೆಸರಿಸಿದೆ. ಈ ಪ್ರವಾಸ ಸರಣಿಯು 1 ಟೆಸ್ಟ್ ಪಂದ್ಯ, 3 ಏಕದಿನ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿರಲಿದೆ. ಏಕದಿನ ಮತ್ತು ಟೆಸ್ಟ್‌ನಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್ ತಂಡ ಮುನ್ನಡೆಸಲಿದ್ದಾರೆ. ಹರ್ಮನ್‌ಪ್ರೀತ್ ಕೌರ್ ಉಪನಾಯಕಿಯಾಗಿರಲಿದ್ದಾರೆ.
ಒಂದು ಟೆಸ್ಟ್ ಪಂದ್ಯ ಜೂನ್ 16ರಿಂದ ಬ್ರಿಸ್ಟಲ್‌ನಲ್ಲಿ ಆರಂಭಗೊಳ್ಳಲಿದೆ. 3 ಪಂದ್ಯಗಳ ಏಕದಿನ ಸರಣಿ ಜೂನ್ 27ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಆರಂಭಿಕ ಪಂದ್ಯದ ವೇಳಾಪಟ್ಟಿ ಮರು ಘೋಷಿಸಲ್ಪಡಲಿದೆ. ಅದರೆ ಇನ್ನುಳಿದ ಪಂದ್ಯಗಳು ಜೂನ್ 30 ಮತ್ತು ಜುಲೈ 3ರಂದು ಕ್ರಮವಾಗಿ ಟೌಂಟನ್ ಮತ್ತು ವೋರ್ಸೆಸ್ಟರ್ ನಲ್ಲಿ ನಡೆಯಲಿವೆ.

ಶೆಫಾಲಿ ಮತ್ತು ಶಿಖಾಗೆ ಮಣೆ
3 ಪಂದ್ಯಗಳ ಟಿ20ಐ ಸರಣಿಗೆ ಹರ್ಮನ್ ಪ್ರೀತ್ ಕೌರ್ ನಾಯಕಿಯಾಗಿದ್ದು, ಸ್ಮೃತಿ ಮಂಧಾನ ಉಪನಾಯಕಿಯಾಗಿರಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯಲ್ಲಿ ಕಡೆಗಣಿಸಲ್ಪಟ್ಟಿದ್ದ ಸ್ಫೋಟಕ ಬ್ಯಾಟ್ಸ್‌ಮನ್ ಶೆಫಾಲಿ ವರ್ಮಾ ಮತ್ತು ವೇಗಿ ಶಿಖಾ ಪಾಂಡೆ ಈ ಬಾರಿ ಮೂರೂ ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಏಕದಿನ, ಟೆಸ್ಟ್‌ಗೆ ಮಹಿಳಾ ತಂಡ
ಮಿಥಾಲಿ ರಾಜ್ (ಕ್ಯಾಪ್ಟನ್), ಸ್ಮೃತಿ ಮಂಧಾನ, ಹರ್ಮನ್‌ಪ್ರೀತ್ ಕೌರ್ (ಉಪನಾಯಕಿ), ಪೂನಮ್ ರಾವತ್, ಪ್ರಿಯಾ ಪೂನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶೆಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್) , ಜೂಲಾನ್ ಗೋಸ್ವಾಮಿ, ಶಿಖಾ ಪಾಂಡೆ, ಪೂಜಾ ವಸ್ತ್ರಕಾರ್, ಅರುಂಧತಿ ರೆಡ್ಡಿ, ಪೂನಮ್ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್.

ಟಿ20ಐಗೆ ವನಿತಾ ತಂಡ
ಹರ್ಮನ್‌ಪ್ರೀತ್ ಕೌರ್ (ಕ್ಯಾಪ್ಟನ್), ಸ್ಮೃತಿ ಮಂಧಾನಾ (ಉಪನಾಯಕಿ), ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ರಿಚಾ ಘೋಷ್, ಹರ್ಲೀನ್ ಡಿಯೋಲ್, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ರಾಯ್ (ವಿಕೆಟ್ ಕೀಪರ್), ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್, ಸಿಮರನ್ ದಿಲ್ ಬಹದ್ದೂರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications