For Quick Alerts
ALLOW NOTIFICATIONS  
For Daily Alerts
 

ICC Player of the Month Award: ಭಾರತೀಯ ಯುವ ಆಟಗಾರನ ಮುಡಿಗೇರಿದ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

Indian young cricketer Shubman Gill awarded as ICC Mens Player of the Month for January

ಇಂಟರ್‌ನ್ಯಾಶನಲ್ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಜನವರಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಈ ವರ್ಷದ ಪ್ರಥಮ ತಿಂಗಳ ಆಟಗಾರ ಪ್ರಶಸ್ತಿಯನ್ನು ಭಾರತದ ಯುವ ಆರಂಭಿಕ ಆಟಗಾರ ಶುಬ್ಮನ್ ಗಿಲ್ ತಮ್ಮದಾಗಿಸಿಕೊಂಡಿದ್ದಾರೆ. ಕಳೆದ ಹಲವು ತಿಂಗಳಿನಿಂದ ಅದ್ಭುತ ಪ್ರದರ್ಶನ ನೀಡುತ್ತಿರುವ ಶುಬ್ಮನ್ ಗಿಲ್ ಜನವರಿ ತಿಂಗಳಿನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ನಡೆಸಿದ್ದು ಹಲವು ದಾಖಲೆಗಳನ್ನು ಬರೆದಿದ್ದಾರೆ.

ಜನವರಿ ತಿಂಗಳಿನಲ್ಲಿ ಟೀಮ್ ಇಂಡಿಯಾ ಪರವಾಗಿ ಕೆಲ ಅಮೋಘ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ ಶುಬ್ಮನ್ ಗಿಲ್. ಅದರಲ್ಲೂ ಏಕದಿನ ಮಾದರಿಯಲ್ಲಿ ಶ್ರೀಲಂಕಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಅಕ್ಷರಶಃ ಅಬ್ಬರಿಸಿದ್ದಾರೆ. ಟಿ20 ಮಾದರಿಯಲ್ಲಿಯೂ ಒಂದು ಶತಕವನ್ನು ಸಿಡಿಸಿದ್ದು ಎಲ್ಲಾ ಮಾದರಿಯಲ್ಲಿಯೂ ಶತಕ ಸಿಡಿಸಿದ ಆಟಗಾರರ ಪಟ್ಟಿಗೆ ಗಿಲ್ ಸೇರಿಕೊಂಡಿದ್ದಾರೆ.

ಶುಬ್ಮನ್ ಗಿಲ್ ಜನವರಿ ತಿಂಗಳಿನಲ್ಲಿ ಮೂರು ಬಾರಿ ನೂರಕ್ಕಿಂತ ಅಧಿಕ ರನ್‌ಗಳಿಸಿದ್ದಾರೆ. ಈ ಮೂಲಕ ಒಂದೇ ತಿಂಗಳಿನಲ್ಲಿ 567 ರನ್‌ಗಳೊಂದಿಗೆ 23 ವರ್ಷ ವಯಸ್ಸಿನ ಬ್ಯಾಟರ್ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಈ ಪ್ರದರ್ಶನದಿಂದಾಗಿ ಟೀಮ್ ಇಂಡಿಯಾದ ಆಟಗಾರ ಭವಿಷ್ಯದ ತಾರೆ ಎನಿಸಿಕೊಂಡಿದ್ದಾರೆ.

ಶುಬ್ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಹೈದರಾಬಾದ್‌ನಲ್ಲಿ ನಡೆದ ಏಕದಿನ ಸರಣಿಯ ಪಂದ್ಯದಲ್ಲಿ ಅದ್ಭುತ ದ್ವಿಶತಕದ ಸಿಡಿಸಿ ಅಬ್ಬರಿಸಿದ್ದರು. ಈ ಪಂದ್ಯದಲ್ಲಿ 149 ಎಸೆತಗಳಲ್ಲಿ ಅಜೇಯ 208 ರನ್ ಬಾರಿಸಿದ್ದರು. ಇತರ ಎಲ್ಲಾ ಬ್ಯಾಟರ್‌ಗಳು ಕೂಡ ಈ ಮೈದಾನದಲ್ಲಿ ಪರದಾಡುತ್ತಿದ್ದರೆ ಗಿಲ್ ದಾಖಲೆಯ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಏಕದಿನ ಮಾದರಿಯಲ್ಲಿ ದ್ವಿಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ. ಇನ್ನು ಗಿಲ್ ಟಿ20 ಮಾದರಿಯಲ್ಲೂ ಶತಕದ ಸಾಧನೆ ಮಾಡಿದ್ದಾರೆ.

ಇನ್ನು ಜನವರಿ ತಿಂಗಳಿನ ಈ ಪ್ರಶಸ್ತಿಗೆ ಶುಬ್ಮನ್ ಗಿಲ್‌ಗೆ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೋನ್ ಕಾನ್ವೆ ಹಾಗೂ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಸ್ಪರ್ಧೆಯೊಡ್ಡಿದ್ದರು. ಈ ಇಬ್ಬರನ್ನು ಕೂಡ ಗಿಲ್ ಹಿಂದಿಕ್ಕಿ ಅರ್ಹವಾಗಿಯೇ ಈ ಪ್ರಶಸ್ತಿಗೆ ಭಾಜನವಾಗಿದ್ದಾರೆ. ಈ ಮೂಲಕ ಅಕ್ಟೋಬರ್ 2022 ರಲ್ಲಿ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಗೆದ್ದ ಬಳಿಕ ಈ ಸಾಧನೆ ಮಾಡಿದ ಮತ್ತೋರ್ವ ಭಾರತೀಯ ಎನಿಸಿಕೊಂಡಿದ್ದಾರೆ.

ಇನ್ನು ಶುಬ್ಮನ್ ಗಿಲ್ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ನೀಡುತ್ತಿರುವ ಅಮೋಘ ಪ್ರದರ್ಶನದಿಂದಾಗಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೂ ಆಯ್ಕೆಯಾಗಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಗಿಲ್‌ಗೆ ಅವಕಾಶ ದೊರೆಯಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದರೂ ಗಿಲ್ ಬದಲಿಗೆ ಸೂರ್ಯಕುಮಾರ್ ಯಾದವ್ ಅವಕಾಶ ಗಿಟ್ಟಿಸಿಕೊಂಡಿದ್ದರು. ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಿಗೆ ಗಿಲ್‌ಗೆ ಅವಕಾಶ ನೀಡಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿದೆ. ಹೀಗಾಗಿ ಟೀಮ್ ಇಂಡಿಯಾ ಟೆಸ್ಟ್ ತಂಡದ ಆಡುವ ಬಳಗದಲ್ಲಿ ಮತ್ತೆ ಸ್ಥಾನ ಗಿಟ್ಟಿಸಿಕೊಳ್ಳಲು ತೀವ್ರ ಪೈಪೋಟಿ ನಡೆಸುತ್ತಿದ್ದಾರೆ.

Story first published: Monday, February 13, 2023, 20:08 [IST]
Other articles published on Feb 13, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+