For Quick Alerts
ALLOW NOTIFICATIONS  
For Daily Alerts
 

ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲಿದ್ದಾರೆ ಭಾರತದ ಯುವ ವೇಗಿ ಅರ್ಶ್‌ದೀಪ್ ಸಿಂಗ್

Indian Young pacer Arshdeep Singh set to play for Kent in upcoming County Championship

ಟೀಮ್ ಇಂಡಿಯಾದ ಯುವ ವೇಗಿ ಅರ್ಶ್‌ದೀಪ್ ಸಿಂಗ್ ಮುಂದಿನ ಕೌಂಟಿ ಆವೃತ್ತಿಯಲ್ಲಿ ಕಣಕ್ಕಿಳಿಯಲಿದ್ದು ಕೆಂಟ್ ಜೊತೆಗೆ ಸಹಿ ಹಾಕಿದ್ದಾರೆ. ಈ ಬಗ್ಗೆ ಕೆಂಟ್ ಕೌಂಟಿ ಕ್ಲಬ್ ಅಧಿಕರತವಾಗಿ ಮಾಹಿತಿ ನೀಡಿದೆ. ವಿದೇಶೀ ಆಟಗಾರರ ಕೋಟಾದಲ್ಲಿ ಅರ್ಶ್‌ದೀಪ್ ಸಿಂಗ್ ಕೆಂಟ್ ಪರವಾಗಿ 5 ಪಂದ್ಯಗಳನ್ನು ಆಡಲಿದ್ದಾರೆ.

ಯುವ ಭಾರತೀಯ ಸೀಮರ್ ಮುಂಬರುವ ಋತುವಿಗಾಗಿ ಕೆಂಟ್ ಸಹಿ ಮಾಡಿದ ಮೂರನೇ ವಿದೇಶಿ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಜಾರ್ಜ್ ಲಿಂಡೆ ಕೂಡ ಸಹಿ ಮಾಡಿದ್ದು ಎರಡು ವರ್ಷಗಳ ಒಪ್ಪಂದದಂತೆ ಕೆಂಟ್ ಪರವಾಗಿ ಎಲ್ಲಾ ಮಾದರಿಯಲ್ಲೂ ಕಣಕ್ಕಿಳಿಯಲಿದ್ದಾರೆ. ಇನ್ನು ಕೇನ್ ರಿಚರ್ಡ್‌ಸನ್ ಕೂಡ ಟಿ20 ಬ್ಲಾಸ್ಟ್‌ನಲ್ಲಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ.

ಅರ್ಶ್‌ದೀಪ್ ಸಿಂಗ್ 2022ರಲ್ಲಿ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಸತತವಾಗಿ ಉತ್ತಮ ಪ್ರದರ್ಶನ ನೀಡುತ್ತಾ ಗಮನಸೆಳೆದರು. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಭರವಸೆಯ ಪ್ರದರ್ಶನ ನೀಡುವ ಮೂಲಕ ತಂಡದ ಆಟಗಾರನಾಗಿ ಮಿಂಚಿದರು. ಮಧ್ಯಪ್ರದೇಶ ಮೂಲದ ಯುವ ವೇಗಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 2020 ಮತ್ತು 2021 ಅದ್ಭುತ ಪ್ರದರ್ಶನ ನೀಡುವ ಮೂಲಕ ರಾಷ್ಟ್ರೀಯ ತಂಡದ ಕದ ತಟ್ಟಲು ಆರಂಭಿಸಿದ್ದರು. ಕಳೆದ ವರ್ಷ ತಂಡದಲ್ಲಿ ಸ್ಥಾನವನ್ನು ಗಳಿಸುವಲ್ಲಿ ಕಡೆಗೂ ಯಶಸ್ವಿಯಾದರು.

2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ಪರವಾಗಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು ಅರ್ಚ್‌ದೀಪ್ ಸಿಂಗ್. ವಿಶ್ವಕಪ್‌ನಲ್ಲಿ ಒಟ್ಟು 10 ವಿಕೆಟ್ ಕಿತ್ತು ಮಿಂಚಿದ್ದರು. ಭಾರತದ ಈ ಯುವ ವೇಗದ ಬೌಲರ್26 T20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದು 17.78 ರ ಸರಾಸರಿಯಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದು 8.39ರ ಎಕಾನಮಿ ಹೊಂದಿದ್ದಾರೆ.

ಅವರು ಏಳು ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದು 25 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಇನ್ನು ಕೌಂಟಿ ಟೂರ್ನಿಯಲ್ಲಿ ಕೆಂಟ್ ತಂಡವನ್ನು ಪ್ರತಿನಿಧಿಸುವ ನಾಲ್ಕನೇ ಭಾರತೀಯ ಆಟಗಾರ ಎನಿಸಿಕೊಳ್ಳಲಿದ್ದಾರೆ ಅರ್ಷ್‌ದೀಪ್ ಸಿಂಗ್.

ಇನ್ನು ಈ ಬಗ್ಗೆ ಅರ್ಶ್‌ದೀಪ್ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಇಂಗ್ಲೆಂಡ್‌ನಲ್ಲಿ ರೆಡ್-ಬಾಲ್ ಕ್ರಿಕೆಟ್ ಆಡಲು ಹಾಗೂ ಪ್ರಥಮ ದರ್ಜೆ ಪಂದ್ಯದಲ್ಲಿ ನನ್ನ ಕೌಶಲ್ಯವನ್ನು ಸುಧಾರಿಸಲು ನಾನು ಉತ್ಸುಕನಾಗಿದ್ದೇನೆ. ಕೆಂಟ್ ತಂಡದ ಸಹ ಆಟಗಾರರ ಜೊತೆಗೆ ಹಾಗೂ ಅಭಿಮಾನಿಗಳ ಮುಂದೆ ಮುಂದೆ ಪ್ರದರ್ಶನ ನೀಡಲು ಎದುರು ನೋಡುತ್ತಿದ್ದೇನೆ, ರಾಹುಲ್ ದ್ರಾವಿಡ್ ಈ ಬಗ್ಗೆ ಸಲಹೆ ನೀಡಿದ್ದು ಅದ್ಭುತ ಇತಿಹಾಸವನ್ನು ಹೊಂದಿರುವ ಕ್ಲಬ್ ಇದಾಗಿದೆ" ಎಂದಿದ್ದಾರೆ ಅರ್ಷ್‌ದೀಪ್ ಸಿಂಗ್.

Story first published: Saturday, March 18, 2023, 5:40 [IST]
Other articles published on Mar 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+