Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ ಎ vs ಆಸ್ಟ್ರೇಲಿಯಾ ಎ ಹೈಲೈಟ್ಸ್: ಡ್ರಾದಲ್ಲಿ ಅಂತ್ಯ ಕಂಡ ಅಭ್ಯಾಸ ಪಂದ್ಯ

Indians vs Australia A highlights, day 3 warm-up match, ends in a draw

ಭಾರತ ಎ ಹಾಗೂ ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಎರಡನೇ ಅಭ್ಯಾಸ ಪಂದ್ಯವೂ ಡ್ರಾದಲ್ಲಿ ಅಂತ್ಯಕಂಡಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಬ್ಯಾಟಿಂಗ್ ನಡೆಸಿದ ಭಾರತೀಯ ಎ ತಂಡ ಆಸ್ಟ್ರೇಲಿಯಾ ತಂಡವನ್ನು ಬಲಬೇಗನೆ ಕಟ್ಟಿ ಹಾಕಲು ಯಶಸ್ವಿಯಾಗಿತ್ತು. ಭಾರತ ಎ ಮೊದಲ ಇನ್ನಿಂಗ್ಸ್‌ನಲ್ಲಿ 194ಕ್ಕೆ ಆಲೌಟ್ ಆದರೆ ಆಸ್ಟ್ರೇಲಿಯಾ 108 ರನ್‌ಗಳಿಗೆ ಆಲೌಟ್ ಆಗಿತ್ತು.

ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಜಸ್ಪ್ರೀತ್ ಬೂಮ್ರಾ 55 ರನ್ ಸಿಡಿಸಿ ಮಿಂಚಿದರು. ಇನ್ನು ಬೌಲಿಂಗ್‌ನಲ್ಲಿ ಆಸ್ಟ್ರೇಲಿಯಾ ಪಡೆಯ ವಿರುದ್ಧ ಮೊಹಮ್ಮದ್ ಶಮಿ ನವ್‌ದೀಪ್ ಸೈನಿ ತಲಾ 3 ವಿಕೆಟ್ ಪಡೆದರೆ ಬೂಮ್ರಾ 2 ವಿಕೆಟ್ ಪಡೆದು ಮಿಂಚಿದ್ದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಪೃಥ್ಬಿ ಶಾ ಹೊರತು ಪಡಿಸಿಸ ಉಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಕೂಡ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದರು. ಮಯಾಂಕ್ ಅಗರ್ವಾಲ್ ಹಾಗೂ ಶುಭ್ಮನ್ ಗಿಲ್ ತಲಾ ಅರ್ಧ ಶತಕವನ್ನು ಬಾರಿಸುವಲ್ಲಿ ಯಶಸ್ವಿಯಾದರೆ ಹನುಮ ವಿಹಾರಿ ಹಾಗೂ ರಿಷಭ್ ಪಂತ್ ಶತಕವನ್ನು ಬಾರಿಸಿ ಮಿಂಚಿದರು. ನಾಯಕ ರಹಾನೆ 38 ರನ್ ಗಳ ಕೊಡುಗೆ ನೀಡಿದರು. 386 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಭಾರತ ಎ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.

ಈ ಮೂಲಕ ಆಸ್ಟ್ರೇಲಿಯಾ ಎ ತಂಡಕ್ಕೆ 472 ರನ್‌ಗಳ ಗುರಿಯನ್ನು ಭಾರತ ನಿಗದಿ ಮಾಡಿತ್ತು. ಇದನ್ನು ಬೆನ್ನಟ್ಟಿದ ಆಸ್ಟ್ರೇಲಿಯಾ ಎ ತಂಡ ಆರಂಭದಲ್ಲೇ ಎಡವಿತು. 25 ರನ್‌ಗಳಿಗೆ ಭಾರತ ಎ 3 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಯಿತು. ಆದರೆ ಬಳಿಕ ಬ್ಯಾಟಿಂಗ್‌ಗೆ ಇಳಿದ ಬೆನ್ ಮೆಕ್‌ಡೆರ್‌ಮೊಟ್, ಅಲೆಕ್ಸ್ ಕ್ಯಾರಿ ಹಾಗೂ ಜ್ಯಾಕ್ ವೈಲ್ಡರ್‌ಮಠ್ ಪಂದ್ಯವನ್ನು ಭಾರತ ಎ ಹಿಡಿತದಿಂದ ತಪ್ಪಿಸಿಕೊಳ್ಳುವಂತೆ ಮಾಡಿದರು.

ಬೆನ್ ಮೆಕ್‌ಡೆರ್‌ಮೊಟ್ ಮತ್ತು ಜ್ಯಾಕ್ ವೈಲ್ಡರ್‌ಮಠ್ ಇಬ್ಬರೂ ಅಜೇಯ ಶತಕವನ್ನು ಬಾರಿಸಿ ಮಿಂಚಿದರು. ಅಲೆಕ್ಸ್ ಕ್ಯಾರಿ ಅರ್ಧ ಶತಕವನ್ನು ಬಾರಿಸಿದರು. ಆಸ್ಟ್ರೇಲಿಯಾ 307 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡು ಡ್ರಾ ಮಾಡಿಕೊಳ್ಳಲು ಯಶಸ್ವಿಯಾಯಿತು.

Story first published: Monday, December 14, 2020, 11:08 [IST]
Other articles published on Dec 14, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+