ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಲೀಗ್ ಹಂತದಲ್ಲಿ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರ ಮೇಲೆ ಒತ್ತಡ ಹೆಚ್ಚಿತ್ತು. ಇವರು ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಬಿಗ್ ಇನಿಂಗ್ಸ್ ಕಟ್ಟುವ ಕನಸು ಕಂಡು ಕ್ರೀಸ್‌ಗೆ ಇಳಿದರು. ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸುವಾಗ ಎಲ್ಲರ ಕಣ್ಣುಗಳು ಇವರ ಮೇಲೆ ನೆಟ್ಟಿದ್ದವು.
ಅಭಿಷೇಕ್ ಶರ್ಮಾ ಈ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟಿ ಭಾರತದ ಗೆಲುವಿನಲ್ಲಿ ಮಿಂಚುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಇವರು ತಮ್ಮ ನೈಜ ಆಟಕ್ಕೆ ಕೊಂಚ ವಿರುದ್ಧವಾಗಿ ಇನಿಂಗ್ಸ್ ಆರಂಭಿಸಿದರು. ಅಭಿಷೇಕ್ ಆರಂಭದಲ್ಲಿ ಬಿಗ್ ಹಿಟ್‌ಗಳನ್ನು ಬಾರಿಸದೇ ಆಡಿದರು. ಆದರೂ ಸಹ ಕೆಟ್ಟ ಎಸೆತಗಳು ಕಂಡಾಗ ಅಭಿಷೇಕ್ ಅವರ ಕಣ್ಣುಗಳು ಅರಳುತ್ತಿದ್ದವು. ಪರಿಣಾಮ ಸೂಪರ್ 8 ಹಂತದ ಪಂದ್ಯದಲ್ಲಿ ಅಭಿಷೇಕ್ 12 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ನೆರವಿನಿಂದ 15 ರನ್ ಸಿಡಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಬೌಂಡರಿ ಬಾರಿಸಿ ಖಾತೆಯನ್ನು ಓಪನ್ ಮಾಡಿದರು. ಆದರೆ ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಳ್ಳುವಲ್ಲಿ ವಿಫಲರಾದರು. ಇವರಿಗೆ ಹೇಗೆ ಬೌಲ್ ಮಾಡಬೇಕು ಎಂಬುದನ್ನು ಎದುರಾಳಿ ಬೌಲರ್‌ಗಳು ಪಕ್ಕಾ ಪ್ಲ್ಯಾನ್ ಮಾಡಿಕೊಂಡು ಬಂದಿದ್ದರು. ಅಭಿಷೇಕ್ ಶರ್ಮಾ ಬ್ಯಾಟಿಂಗ್ ಮಾಡಲು ಬರುತ್ತಿದ್ದಂತೆ ಬೌಲರ್‌ಗಳು ವೇಗದ ಬೌಲಿಂಗ್ ಮಾಡುವುದನ್ನು ಬಿಟ್ಟರು. ಅಲ್ಲದೆ ವೇಗದ ಬೌಲಿಂಗ್‌ನಲ್ಲಿ ವೇರಿಯೇಷನ್ ತಂದರು.
ಅಭಿಷೇಕ್ ಶರ್ಮಾ ಪವರ್ ಫುಲ್ ಬ್ಯಾಟರ್ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವರು ಬೌಲರ್ ವೇಗವನ್ನು ಬಳಸಿಕೊಂಡು ಶಾಟ್ ಬಾರಿಸುತ್ತಾರೆ, ಎಂಬುದನ್ನೇ ಅರಿತ ವೇಗದ ಬೌಲರ್‌ಗಳು ಸ್ಲೋವರ್ ಒನ್ ಎಸೆತಗಳ ಮೂಲಕ ಬಹುವಾಗಿ ಕಾಟ ನೀಡಿದರು. ಅಭಿಷೇಕ್ ಶರ್ಮಾ ಮಾರ್ಕೊ ಜಾನ್ಸನ್ ಅವರ ಎಸೆತವನ್ನು ಬಿಗ್ ಹಿಟ್ ಬಾರಿಸಲು ಹೋಗಿ ಕಾರ್ಬಿನ್ ಬಾಷ್ ಹಿಡಿದ ಅಮೋಘ ಕ್ಯಾಚ್‌ಗೆ ಬಲಿಯಾದರು.
ಟಿ20 ವಿಶ್ವಕಪ್‌ನಲ್ಲಿ ಎಲ್ಲರ ಕಣ್ಣುಗಳು ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಮೇಲೆ ನೆಟ್ಟಿದ್ದವರು. ಆದರೆ ಇವರು ಲೀಗ್ ಹಂತದಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡಲಿಲ್ಲ. ಯುಎಸ್‌ಎ, ಪಾಕಿಸ್ತಾನ, ನೆದರ್‌ಲ್ಯಾಂಡ್ ವಿರುದ್ಧ ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದರು. ಇವರು ಮೂರು ಪಂದ್ಯಗಳಲ್ಲಿ ಸೊನ್ನೆ ಸುತ್ತಿ ನಿರಾಸೆ ಅನುಭವಿಸಿದ್ದರು. ಅಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಬಿಗ್ ಇನಿಂಗ್ಸ್ ಕಟ್ಟಲಿಲ್ಲ. ಹೀಗಾಗಿ ಇವರ ಸ್ಥಾನದ ಮೇಲೆ ಈಗ ಅಪಾಯದ ತೂಗುಗತ್ತಿ ನೇತಾಡುತ್ತಿದೆ.
ಕಳೆದ ವರ್ಷದಲ್ಲಿ ಅಭಿಷೇಕ್ ಶರ್ಮಾ ದೊಡ್ಡ ದೊಡ್ಡ ಹೊಡೆತಗಳನ್ನು ಬಾರಿಸಿ ತಂಡಕ್ಕೆ ಅಧಾರವಾಗಿದ್ದರು. ಆದರೆ ಇವರು ಟಿ20 ವಿಶ್ವಕಪ್‌ನಲ್ಲಿ ತಮ್ಮ ಘನತೆಗೆ ತಕ್ಕ ಆಟವನ್ನು ಆಡುವಲ್ಲಿ ವಿಫಲರಾಗಿ ನಿರಾಸೆಯನ್ನು ಅನುಭವಿಸಿದ್ದಾರೆ.