ODI World Cup 2023: ಭಾರತದಲ್ಲೂ 'ಪಿರ್ಕಿ ಕಮಾಲ್' ಮಾಡಲು ಸಜ್ಜಾದ ರಿಸ್ಟ್ ಸ್ಪಿನ್ನರ್
ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಕುಲ್‌ದೀಪ್ ಯಾದವ್ ಅವರ ಸ್ಪಿನ್ ಮೋಡಿ ಏಷ್ಯಾ ಕಪ್ ಏಕದಿನ ಸರಣಿಯಲ್ಲಿ ರಾರಾಜಿಸಿದೆ. ರಿಸ್ಟ್ ಸ್ಪಿನ್ ಬೌಲರ್ ಮೋಡಿಯ ದಾಳಿಯನ್ನು ಅರಿಯುವಲ್ಲಿ ವಿಫಲವಾದ ಶ್ರೀಲಂಕಾ ಹಾಗೂ ಪಾಕಿಸ್ತಾನ ಹೀನಾಯ ಸೋಲು ಕಂಡಿವೆ. ಈ ಮೂಲಕ ಕುಲ್‌ದೀಪ್ ಯಾದವ್ ತಮ್ಮನ್ನು ಆಯ್ಕೆ ಮಾಡಿಕೊಂಡಿದ್ದನ್ನು ಸಮರ್ಥಿಸಿಕೊಂಡಿದ್ದಾರೆ.
ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆದಿರುವ ಕುಲ್‌ದೀಪ್ ಯಾದವ್ ತಂಡದಲ್ಲಿ ತಮ್ಮನ್ನು ಆಯ್ಕೆ ಮಾಡಿದ್ದು ಏಕೆ ಎಂಬುದನ್ನು ಸಾಬೀತು ಪಡಿಸಿದ್ದಾರೆ. ಶ್ರೀಲಂಕಾದ ಆರ್. ಪ್ರೇಮದಾಸ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಚೈನ್ ಮೆನ್ ಬೌಲರ್ ಬಿಗುವಿನ ದಾಳಿಗೆ ನಿಜಕ್ಕೂ ಪಾಕ್ ಮತ್ತು ಶ್ರೀಲಂಕಾ ಮಕಾಡೆ ಮಲಗಿದೆ.

ಕುಲ್‌ದೀಪ್ ಯಾದವ್ ಎಸೆತಗಳನ್ನು ಅರಿಯುವಲ್ಲಿ ವಿಫಲರಾದ ಪಾಕ್ ಬ್ಯಾಟ್ಸ್ ಮ್ಯಾನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದ್ದಾರೆ. ಅಲ್ಲದೆ ಕುಲ್‌ದೀಪ್ ಯಾದವ್ ಅವರು ಪಾಕಿಸ್ತಾನ ವಿರುದ್ಧ 5 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಐದು ವಿಕೆಟ್ ಗೊಂಚಲು ಪಡೆದ ಭಾರತದ ಮೊದಲ ಸ್ಪಿನ್ ಬೌಲರ್ ಎಂಬ ಖ್ಯಾತಿ ತಮ್ಮದಾಗಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಸಹ ಈ ಸಾಧನೆ ಮಾಡಿದ್ದರು. ಇನ್ನು ಶ್ರೀಲಂಕಾ ವಿರುದ್ಧವೂ ಕುಲ್‌ದೀಪ್ ಯಾದವ್ ಸ್ಪಿನ್ ಮೋಡಿ ಮುಂದುವರೆದಿದೆ. ಆತಿಥೇಯ ಲಂಕಾ ವಿರುದ್ಧವೂ ನಾಲ್ಕು ವಿಕೆಟ್ ಕಬಳಿಸಿರುವ ಕುಲ್‌ದೀಪ್ ಅಬ್ಬರಿಸಿದ್ದಾರೆ.
ಕುಲ್‌ದೀಪ್ ಯಾದವ್ ಅಮೋಘ ದಾಳಿ
ಏಷ್ಯಾ ಕಪ್‌ನ ಸೂಪರ್ 4 ಪಂದ್ಯದಲ್ಲಿ ಕುಲ್‌ದೀಪ್ ಯಾದವ್ ಅಮೋಘ ದಾಳಿ ಸಂಘಟಿಸಿದ್ದಾರೆ. ಪಾಕಿಸ್ತಾನ ತಂಡದ ಬ್ಯಾಟಿಂಗ್ ಗೆ ಆಧಾರವಾಗಿದ್ದ ಫಖರ್ ಜಮನ್, ಆಘಾ ಅಸ್ಲಂ, ಶಬಾದ್ ಖಾನ್, ಇಫ್ತಿಖಾರ್ ಅಹ್ಮದ್, ಫಾಹೀಮ್ ಅಶ್ರಫ್ ರಿಗೆ ಪೆವಿಲಿಯನ್ ಹಾದಿ ತೋರಿಸಿದ ಕುಲ್‌ದೀಪ್ ಅಬ್ಬರಿಸಿದ್ದಾರೆ. ಎಂಟು ಓವರ್ ಬೌಲ್ ಮಾಡಿದ ಕುಲ್‌ದೀಪ್ ಯಾದವ್ 25 ರನ್ ನೀಡಿ ಬಹುಮುಖ್ಯ 5 ವಿಕೆಟ್ ಕಬಳಿಸಿದ್ದಾರೆ.
ಶ್ರೀಲಂಕಾದಲ್ಲಿ ಕುಲ್‌ದೀಪ್ ಯಾದವ್
ಶ್ರೀಲಂಕಾದಲ್ಲಿ ಕುಲ್‌ದೀಪ್ ಯಾದವ್ ನೀಡಿದ ಪ್ರದರ್ಶನ ನಿಜಕ್ಕೂ ಅಭಿಮಾನಿಗಳಿಗೆ ಮುದ ನೀಡಿದೆ. ಈ ಮೂಲಕ ಭಾರತದಲ್ಲೂ ಪಿರ್ಕಿ ಕಮಾಲ್ ಮಾಡಲು ತಾವು ತಯಾರಿರುವುದಾಗಿ ತಿಳಿಸಿದ್ದಾರೆ. ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ನಲ್ಲಿ ಸ್ಪಿನ್ ಬೌಲರ್‌ಗಳು ಮಹತ್ವದ ಪಾತ್ರವನ್ನು ವಹಿಸಲಿದ್ದಾರೆ.
ಇದನ್ನು ಗಮನದಲ್ಲಿಟ್ಟುಕೊಂಡು ಕುಲ್‌ದೀಪ್ ಅವರಿಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ನೀಡಲಾಗಿತ್ತು. ಅಲ್ಲದೆ ತಮ್ಮಲ್ಲಿ ಇನ್ನು ಬೌಲಿಂಗ್ ಕ್ಷಮತೆ ಸಾಕಷ್ಟಿದೆ ಎಂದು ಕುಲ್ದೀಪ್ ಸಾರಿ ಸಾರಿ ಹೇಳಿದ್ದಾರೆ. ಕುಲ್‌ದೀಪ್ ಯಾದವ್ ಭಾರತದಲ್ಲಿ ಆಡಿದ 36 ಏಕದಿನ ಪಂದ್ಯಗಳಲ್ಲಿ 59 ವಿಕೆಟ್ ಕಬಳಿಸಿದ್ದಾರೆ.
ಬರೀ ಸ್ಪಿನ್ನಿಂಗ್ ಟ್ರ್ಯಾಕ್ ಅಷ್ಟೇ ಅಲ್ಲ ಫ್ಲ್ಯಾಟ್ ಪಿಚ್‌ಗಳಲ್ಲೂ ಚೆಂಡನ್ನು ತಿರುಗಿಸುವ ಕಲೆ ತಮ್ಮಲ್ಲಿ ಇದೆ ಎಂಬುದನ್ನು ಸಾಬೀತು ಮಾಡಿರುವ ಕುಲ್‌ದೀಪ್, ನಿಜಕ್ಕೂ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗಬಲ್ಲರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications