For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಅಬ್ಬರಿಸಿದ್ರೂ ಇಲ್ಲ ಏಷ್ಯಾ ಕಪ್‌ ತಂಡದಲ್ಲಿ ಸ್ಥಾನ; ಇಲ್ಲಿದೆ ಐವರು ಆಟಗಾರರ ಡಿಟೇಲ್ಸ್‌

ಏಷ್ಯಾ ಕಪ್‌ ಟಿ20 ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಹಲವು ಯುವ ಆಟಗಾರರು ಅವಕಾಶವನ್ನು ಪಡೆಯುವಲ್ಲಿ ವಿಫಲರಾಗಿದ್ದಾರೆ. ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ ಸ್ಟಾರ್ ಆಟಗಾರರಿಗೆ ಆಯ್ಕೆ ಸಮಿತಿ ತಂಡದಲ್ಲಿ ಸ್ಥಾನ ನೀಡಿಲ್ಲ. ಹೀಗಾಗಿ ಯುವ ಆಟಗಾರರಿಗೆ ನಿಶ್ಚಿತವಾಗಿ ಬೇಸರವಾಗಿ ಬೇಸರವಾಗಿದೆ. ಹಾಗಿದ್ದಾರೆ ಯಾವೆಲ್ಲಾ ಆಟಗಾರರಿಗೆ ನಿರಾಸೆ ಆಗಿದೆ ಎಂಬ ಬಗ್ಗೆ ವರದಿ ಇಲ್ಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ ಮುಗಿದ ಬಳಿಕ ನಡೆಯುತ್ತಿರುವ ಮೊದಲ ಅಂತಾರಾಷ್ಟ್ರೀಯ ಟಿ20 ಟೂರ್ನಿ ಇದಾಗಿದೆ. ಹೀಗಾಗಿ ಐಪಿಎಲ್‌ನಲ್ಲಿ ಮಿಂಚು ಹರಿಸಿದ ಆಟಗಾರರಿಗೆ ಅವಕಾಶ ನೀಡುವ ಸಾಧ್ಯತೆ ಇದೆ ಎಂದು ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ನಿರಾಸೆಯ ಕಾರ್ಮೊಡ ಆಟಗಾರರಿಗೆ ಬಡೆದಿದೆ. ಹಾಗಿದ್ದರೆ ಐಪಿಎಲ್‌ನಲ್ಲಿ ಮಿಂಚಿದರೂ, ಏಷ್ಯಾ ಕಪ್‌ ಟಿ20 ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದ ಆಟಗಾರರ ಬಗ್ಗೆ ಮಾಹಿತಿ ಇಲ್ಲಿದೆ.

India s Asia Cup Squad Shocks Fans Leaves Out Key IPL Performers

ಸಾಯಿ ಸುದರ್ಶನ್‌

ಗುಜರಾತ್ ಟೈಟನ್ಸ್‌ ಪರ ಐಪಿಎಲ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಎಲ್ಲರ ಗಮನ ಸೆಳೆದಿದ್ದ ಆರಂಭಿಕ ಸಾಯಿ ಸುದರ್ಶನ್‌ ಅವರಿಗೆ ಏಷ್ಯಾ ಕಪ್‌ನಲ್ಲಿ ಅವರಿಗೆ ಅವಕಾಶ ಸಿಕ್ಕಿಲ್ಲ. ಇವರು ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದ ಪ್ಲೇಯರ್. ಇವರು ಆಡಿ 15 ಪಂದ್ಯಗಳಲ್ಲಿ 54.21 ರ ಸರಾಸರಿಯಲ್ಲಿ 759 ರನ್ ಗಳಿಸಿದ್ದಾರೆ. ಆದರೂ ಇವರಿಗೆ ಸ್ಥಾನ ಲಭಿಸಿಲ್ಲ.

ಪ್ರಸಿದ್ಧಿ ಕೃಷ್ಣ

18ನೇ ಆವೃತ್ತಿಯ ಐಪಿಎಲ್‌ನಲ್ಲಿ ಅಪ್‌ಡೇ‌ಟ್ ವರ್ಷನಲ್ಲಿ ಕಾಣಿಸಿಕೊಂಡಿದ್ದ ವೇಗದ ಬೌಲರ್ ಪ್ರಸಿದ್ಧ್ ಕೃಷ್ಣಾ ಅವರಿಗೂ ಏಷ್ಯಾ ಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ. ಇವರು ಹಿಂದಿನ ಐಪಿಎಲ್‌ನಲ್ಲಿ ಪರ್ಪಲ್‌ ಕ್ಯಾಪ್‌ ಪಡೆದಿದ್ದರು. ಇವರು ಐಪಿಎಲ್‌ನಲ್ಲಿ 20ರ ಸರಾಸರಿಲ್ಲಿ 25 ವಿಕೆಟ್‌ ಕಬಳಿಸಿದ್ದರು. ಇವರ ಪ್ರದರ್ಶನಕ್ಕೂ ತಕ್ಕ ಪ್ರತಿ ಫಲ ಸಿಕ್ಕಿಲ್ಲ.

ಕೆಎಲ್ ರಾಹುಲ್

ಕೆಎಲ್ ರಾಹುಲ್‌, ಇಂಗ್ಲೆಂಡ್ ಪ್ರವಾಸದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ್ದರು. ಅಲ್ಲದೆ ಇವರಿಗೆ ಏಷ್ಯಾ ಕಪ್‌ ಟ20 ತಂಡದಲ್ಲಿ ಸ್ಥಾನ ಲಭಿಸುವುದು ಫಿಕ್ಸ್ ಎಂದೇ ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಈ ಆಸೆ ಮಣ್ಣು ಪಾಲಾಗಿದೆ. ರಾಹುಲ್‌ ಐಪಿಎಲ್‌ನಲ್ಲೂ ಡೆಲ್ಲಿ ಕ್ಯಾಪಿಟಲ್ಸ್‌ ಪರ ಅಬ್ಬರಿಸಿದ್ದರು. ಇವರು 18ನೇ ಆವೃತ್ತಿಯ ಐಪಿಎಲ್‌ನಲ್ಲಿ 54 ಸರಾಸರಿಯಲ್ಲಿ 539 ರನ್ ಗಳಿಸಿದ್ದರು. ಇವರಿಗೂ ನಿರಾಸೆ ಕಾದಿದೆ.

ಯಶಸ್ವಿ ಜೈಸ್ವಾಲ್‌

ಯಶಸ್ವಿ ಜೈಸ್ವಾಲ್‌ ಅವರಿಗೆ ತಂಡದಲ್ಲಿ ಸ್ಥಾನ ಲಭಿಸುವುದು ಫಿಕ್ಸ್ ಎಂದೇ ಭಾವಿಸಲಾಗಿತ್ತು. ಇವರನ್ನು ಬ್ಯಾಕ್‌ ಅಪ್‌ ಓಪನರ್ ಆಗಿ ತಂಡದಲ್ಲಿ ಇರಿಸಿಕೊಳ್ಳಬಹುದು ಎಂಬ ಲೆಕ್ಕಾಚಾರಗಳು ಆರಂಭವಾಗಿದ್ದವು. ಆದರೆ ಈ ಆಸೆ ಸಹ ಮಣ್ಣು ಪಾಲಾಗಿದೆ. ಜೈಸ್ವಾಲ್ ಐಪಿಎಲ್‌ನಲ್ಲಿ ಆಡಿದ 17 ಪಂದ್ಯಗಳಲ್ಲಿ 43 ರ ಸರಾಸರಿಯಲ್ಲಿ 559 ರನ್ ಗಳಿಸಿದ್ದಾರೆ.

ಶ್ರೇಯಸ್ ಅಯ್ಯರ್

ಪಂಜಾಬ್‌ ಕಿಂಗ್ಸ್ ತಂಡದ ನೂತನ ನಾಯಕ ಶ್ರೇಯಸ ಅಯ್ಯರ್ ಅವರಿಗೆ ತಂಡದಲ್ಲಿ ಸ್ಥಾನ ಲಭಿಸುವುದು ಪಕ್ಕಾ ಎಂದೇ ಎಲ್ಲರೂ ಬಿಂಬಿಸಿದ್ದರು. ಆದರೆ ಇವರ ಪ್ರತಿಭೆಗೆ ಮಣೆ ಹಾಕಿಲ್ಲ. ಇವರು ಕಳೆದ ಐಪಿಎಲ್‌ನ್ಲಿ ತಂಡವನ್ನು ಮುನ್ನಡೆಸಿದ್ದು ಅಲ್ಲದೆ 600ಕ್ಕೂ ಹೆಚ್ಚು ರನ್‌ ಸಿಡಿಸಿ ಮಿಂಚಿದ್ದರು. ಇವರನ್ನು ತಂಡಕ್ಕೆ ಸೇರಿಸಿಕೊಂಡಿದ್ದರೆ ತಂಡದ ಮಧ್ಯಮ ಕ್ರಮಾಂಕ ಬಲಿಷ್ಠ ಆಗುತ್ತಿತ್ತು.

Story first published: Wednesday, August 20, 2025, 12:32 [IST]
Other articles published on Aug 20, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+