For Quick Alerts
ALLOW NOTIFICATIONS  
For Daily Alerts
 

Champions Trophy 2025: ವಿಕೆಟ್‌ ಕೀಪರ್‌ ಸ್ಥಾನಕ್ಕೆ ಮೂವರ ಫೈಟ್‌

ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್‌ ಟ್ರೋಫಿಗೆ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ಈ ವೇಳೆ ಆಯ್ಕೆ ಸಮಿತಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲಿದೆ. ಪ್ರಸಕ್ತ ದೇಶೀಯ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿರುವ ಆಟಗಾರರಿಗೂ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿಯನ್ನು ಗೆಲ್ಲಲೇ ಬೇಕು ಎಂಬ ಮನಸ್ಥಿತಿಯಲ್ಲಿರುವ ಟೀಮ್ ಇಂಡಿಯಾ, ಬಲಿಷ್ಠ ತಂಡವನ್ನು ಕಟ್ಟುವ ಕನಸು ಕಾಣುತ್ತಿದೆ. ಈ ಬಾರಿಯೂ ಐಸಿಸಿ ಮೆಗಾ ಟೂರ್ನಿಯಲ್ಲಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಬಹುದು.

ಬಾರ್ಡರ್‌ ಗವಾಸ್ಕರ್‌ ಸರಣಿಯ ಸೋಲಿನ ಕಹಿ ನೆನಪನ್ನು ಮರೆಸಲು ಟೀಮ್ ಇಂಡಿಯಾಗೆ ಈಗ ಬೆಸ್ಟ್‌ ಚಾನ್ಸ್‌ ಸಿಕ್ಕಿದೆ. ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿತ್ತು. ಪರಿಣಾಮ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-3 ರಿಂದ ಹಿನ್ನಡೆ ಅನುಭವಿಸಿತ್ತು. ಈ ಸೋಲಿನ ಬಳಿಕ ಟೀಮ್ ಇಂಡಿಯಾ ಸ್ಟಾರ್ ಆಟಗಾರರ ಆಟಕ್ಕೆ ಟೀಕೆಗಳು ಕೇಳಿ ಬಂದವು. ಈಗ ಈ ಎಲ್ಲ ಟೀಕೆಗಳಿಗೆ ಮೈದಾನದಲ್ಲಿ ಉತ್ತರ ನೀಡುವ ಕಾಲ ಕೂಡಿ ಬಂದಿದೆ.

India s Champions Trophy 2025 Squad Selection Wicketkeeper Dilemma Among Pant Rahul and Samson

ಫೆಬ್ರವರಿ 19 ರಂದು ನಡೆಯಲಿರುವ ಟೂರ್ನಿಗೆ ಭಾರತ ತಂಡವನ್ನು ಪ್ರಕಟಿಸಬೇಕಿದೆ. ಇದೇ 12 ರೊಳಗೆ ತಂಡವನ್ನು ಪ್ರಕಟಿಸುವ ಅನಿವಾರ್ಯತೆ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮುಂದಿದೆ. ತಂಡವನ್ನು ಪ್ರಕಟಿಸುವ ಟೆನ್ಷನ್‌ ಒಂದು ಕಡೆ ಆದರೆ, ಆಟಗಾರರನ್ನು ಪಿಕ್ ಮಾಡುವುದು ಇನ್ನೊಂದು ಸಮಸ್ಯೆ. ಪ್ರಸ್ತುತ ಎಲ್ಲ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಆಯ್ಕೆಯ ಚಿಂತೆಯನ್ನು ದ್ವಿಗುಣ ಗೊಳಿಸಿದ ಸ್ಲಾಟ್ ಎಂದರೆ ವಿಕೆಟ್‌ ಕೀಪರ್‌. ಸದ್ಯ ತಂಡದಲ್ಲಿರುವ ವಿಕೆಟ್‌ ಕೀಪರ್‌ಗಳು ಅಮೋಘ ಫಾರ್ಮ್‌ನಲ್ಲಿದ್ದಾರೆ. ಒಂದೇ ಸ್ಥಾನಕ್ಕಾಗಿ ಮೂವರು ಆಟಗಾರರ ನಡುವೆ ಫೈಟ್ ನಡೆಯುತ್ತಿದೆ.

ಸಂಜು ಸ್ಯಾಮ್ಸನ್‌

ಕಳೆದ ವರ್ಷ ಟಿ20 ಕ್ರಿಕೆಟ್‌ನಲ್ಲಿ ಮನಮೋಹಕ ಪ್ರದರ್ಶನ ನೀಡಿ ಆಯ್ಕೆದಾರರ ಗಮನ ಸೆಳೆದಿರು ಸಂಜು ಏಕದಿನ ಕ್ರಿಕೆಟ್‌ಗೆ ಕಂ ಬ್ಯಾಕ್‌ ಮಾಡುವ ಕನಸಿನಲ್ಲಿದ್ದಾರೆ. ಇವರು ಸಹ ಭರ್ಜರಿ ಫಾರ್ಮ್‌ನಲ್ಲಿದ್ದು, ಇವರನ್ನು ಕೈ ಬಿಟ್ಟರೆ ಅಭಿಮಾನಿಗಳಿಂದ ಆಯ್ಕೆ ಸಮಿತಿ ಟೀಕೆಗೆ ಗುರಿಯಾಗುತ್ತದೆ.

ರಿಷಭ್ ಪಂತ್‌

ಗಾಯದ ಬಳಿಕ ಮರಳಿ ತಂಡಕ್ಕೆ ಬಂದಿರುವ ರಿಷಭ್‌ ಪಂತ್‌ ಸೊಗಸಾಗಿ ಆಟವನ್ನು ಆಡುತ್ತಿದ್ದಾರೆ. ಇತ್ತೀಚಿಗೆ ಬಾರ್ಡರ್‌ ಗವಾಸ್ಕರ್ ಸರಣಿಯ ಕೊನೆಯ ಪಂದ್ಯದಲ್ಲಿ ವೇಗವಾಗಿ ಅರ್ಧಶತಕ ಬಾರಿಸುವ ಮೂಲಕ ಲಯ ಕಂಡುಕೊಂಡಿದ್ದಾಗಿ ಸಾರಿ ಹೇಳಿದ್ದಾರೆ. ಹೀಗಾಗಿ ಇವರ ಆಯ್ಕೆ ಸಹ ನಿಶ್ಚಿತ ಎಂದು ಹೇಳಲಾಗುತ್ತಿದೆ.

India s Champions Trophy 2025 Squad Selection Wicketkeeper Dilemma Among Pant Rahul and Samson

ಕೆಎಲ್ ರಾಹುಲ್‌

ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ವಿಕೆಟ್‌ ಕೀಪರ್ ಆಗಿ ಕಾಣಿಸಿಕೊಂಡಿದ್ದ ಕೆಎಲ್ ರಾಹುಲ್ ಅವರನ್ನು ಚಾಂಪಿಯನ್ಸ್‌ ಟ್ರೋಫಿಗೆ ಆಯ್ಕೆ ಮಾಡುತ್ತಾರಾ ಎಂಬ ಪ್ರಶ್ನೆಗಳು ಇದ್ದವು. ಆದರೆ ಬಾರ್ಡರ್ ಗವಾಸ್ಕರ್‌ ಸರಣಿಯಲ್ಲಿ ಇವರು ಆಡಿದ ಧಾಟಿಯನ್ನು ನೊಡಿದರೆ, ಇವರನ್ನು ತಂಡದಿಂದ ಹೊರಗಿಡುವ ಸಾಧ್ಯತೆ ಇಲ್ಲವೇ ಇಲ್ಲ.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅನುಭವದ ಬಗ್ಗೆ ಮಾತನಾಡುವುದಾದರೆ, ರಿಷಭ್ ಪಂತ್‌ ಅವರಿಗಿಂತ ಕೆಎಲ್ ರಾಹುಲ್ ಉತ್ತಮರು. ಇವರು ಭಾರತದ ಪರ 77 ಏಕದಿನ ಪಂದ್ಯಗಳನ್ನು ಆಡಿದ್ದು, 2851 ರನ್ ಗಳಿಸಿದ್ದಾರೆ. ಇದರಲ್ಲಿ 7 ಶತಕ ಮತ್ತು 18 ಅರ್ಧ ಶತಕಗಳನ್ನು ಸೇರವೆ. ಇನ್ನು ರಿಷಬ್ ಪಂತ್ ಇದುವರೆಗೆ ಟೀಂ ಇಂಡಿಯಾ ಪರ 31 ಏಕದಿನ ಪಂದ್ಯಗಳನ್ನು ಆಡಿದ್ದು, 871 ರನ್‌ಗಳು ಕಲೆ ಹಾಕಿದ್ದಾರೆ. ಇದರಲ್ಲಿ 1 ಶತಕ ಮತ್ತು 5 ಅರ್ಧ ಶತಕ ಸೇರಿವೆ.

Story first published: Thursday, January 9, 2025, 9:00 [IST]
Other articles published on Jan 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+