Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs BAN: ದಕ್ಷಿಣ ಆಫ್ರಿಕಾ ದಾಖಲೆ ಅಳಿಸಿ ಹಾಕುತ್ತಾ ಭಾರತ?

ಟೀಮ್ ಇಂಡಿಯಾ ಹಾಗೂ ಬಾಂಗ್ಲಾದೇಶಗಳ ನಡುವಣ ಮೊದಲ ಟೆಸ್ಟ್‌ ಸೆಪ್ಟೆಂಬರ್‌ 19 ರಿಂದ ಆರಂಭವಾಗಲಿದೆ. ಈ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಜಯಗಳಿಸಿ ಟೀಮ್ ಇಂಡಿಯಾ ದಾಖಲೆಯ ಪುಟಕ್ಕೆ ಸೇರುವ ಕನಸು ಕಾಣುತ್ತಿದೆ. ಅಲ್ಲದೆ ಈ ಸರಣಿಯಲ್ಲಿ ರೋಹಿತ್ ಶರ್ಮಾ ಪಡೆ ದಕ್ಷಿಣ ಆಫ್ರಿಕಾ ದಾಖಲೆಯನ್ನು ಅಳಿಸಿ ಹಾಕುವ ಹುಮ್ಮಸ್ಸಿನಲ್ಲಿದೆ.

ಮೊದಲ ಟೆಸ್ಟ್‌ ಮೇಲೆ ಅಭಿಮಾನಿಗಳು ಕಣ್ಣು ನೆಟ್ಟಿದ್ದಾರೆ. ಈ ಪಂದ್ಯದಲ್ಲಿ ಸ್ಟಾರ್ ಆಟಗಾರರ ಆಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಸ್ಟಾರ್ ಆಟಗಾರರು ರನ್‌ ಕಲೆ ಹಾಕಿ ದಾಖಲೆ ನಿರ್ಮಿಸುವ ಕನಸಿನಲ್ಲಿದ್ದರೆ, ಬೌಲರ್‌ಗಳು ವಿಕೆಟ್‌ ಬೇಟೆ ನಡೆಸಿ ಆರ್ಭಟಿಸಲು ತಯಾರಿ ನಡೆಸಿದ್ದಾರೆ. ಈ ವೇಳೆ ತಂಡ ಸಹ ದಾಖಲೆಯ ಪುಟ ಸೇರಲು ಪ್ಲ್ಯಾನ್ ಮಾಡಿಕೊಂಡಿದೆ. ಚೆನ್ನೈ ಟೆಸ್ಟ್‌ ಗೆಲ್ಲುವ ಮೂಲಕ ಭಾರತ ಗೆಲುವಿನ ಸಂಖ್ಯೆಯನ್ನು ವೃದ್ಧಿಸಿಕೊಳ್ಳುವ ರಣ ತಂತ್ರ ರೂಪಿಸಿಕೊಂಡಿದೆ.

India s Chance to Surpass South Africa in Historic Test Series

ಹೆಚ್ಚು ಪಂದ್ಯ ಗೆದ್ದ ತಂಡ ಯಾವುದು?

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಟೆಸ್ಟ್‌ ಪಂದ್ಯಗಳನ್ನು ಗೆದ್ದ ಕೀರ್ತಿ ಆಸ್ಟ್ರೇಲಿಯಾ ತಂಡಕ್ಕೆ ಸಲ್ಲುತ್ತದೆ. ಆಸೀಸ್‌ ಆಡಿದ 866 ಪಂದ್ಯಗಳಲ್ಲಿ 414 ಗೆಲುವು ದಾಖಲಿಸಿ, ಅತಿ ಹೆಚ್ಚು ಟೆಸ್ಟ್ ಪಂದ್ಯಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್‌ ಎರಡನೇ ಸ್ಥಾನದಲ್ಲಿದೆ. ಆಂಗ್ಲರ ತಂಡ 1077 ಟೆಸ್ಟ್‌ ಪಂದ್ಯಗಳಲ್ಲಿ 397 ಗೆಲುವು ದಾಖಲಿಸಿದೆ.

ಮೂರನೇ ಸ್ಥಾನದಲ್ಲಿ ವಿಂಡೀಸ್

ವೆಸ್ಟ್ ಇಂಡೀಸ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ವಿಂಡೀಸ್‌ 580 ಪಂದ್ಯಗಳಲ್ಲಿ 183 ಗೆಲುವು ದಾಖಲಿಸಿದೆ. ಇನ್ನು ದಕ್ಷಿಣ ಆಫ್ರಿಕಾ ತಂಡ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಸೋಲಿಗಿಂತ ಹೆಚ್ಚು ಗೆಲುವು ದಾಖಲಿಸಿದ ತಂಡಗಳ ಸಾಲಿನಲ್ಲಿ ನಿಲ್ಲುತ್ತದೆ.

ಸೋಲು, ಗೆಲುವಿನ ಲೆಕ್ಕಾಚಾರದಲ್ಲಿ ಸಮನಾಗಿದೆ ಭಾರತ

ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಸಾಧನೆ ಸಮನಾಗಿದೆ. ಭಾರತ ಈ ವರೆಗೆ 579 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು 178 ಜಯ, 178 ಸೋಲು ಕಂಡಿದೆ. ಚೆನ್ನೈ ಟೆಸ್ಟ್‌ ಗೆಲ್ಲುವ ಮೂಲಕ ಭಾರತ, ದಕ್ಷಿಣ ಆಫ್ರಿಕಾ ಸಮಕ್ಕೆ ಬಂದು ನಿಲ್ಲಲಿದೆ. ದಕ್ಷಿಣ ಆಫ್ರಿಕಾ ಟೆಸ್ಟ್‌ನಲ್ಲಿ 179 ಗೆಲುವು ದಾಖಲಿಸಿದೆ.

ಕಾನ್ಪುರ್‌ ಟೆಸ್ಟ್‌ ಪಂದ್ಯವನ್ನು ಭಾರತ ಗೆದ್ದು ಕೊಂಡಲ್ಲಿ ಗೆಲುವಿನ ಸಂಖ್ಯೆಯನ್ನು 180ಕ್ಕೆ ಕೊಂಡಯ್ಯಬಹುದು. ಈ ಸಾಧನೆ ಮಾಡಲು ಭಾರತ, ಬಾಂಗ್ಲಾ ವಿರುದ್ಧ ವೈಟ್‌ ವಾಶ್‌ ಸಾಧನೆ ಮಾಡುವುದು ಅನಿವಾರ್ಯವಾಗಿದೆ. ಭಾರತ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ, ಸೋತ ಪಂದ್ಯಗಳಿಗಿಂತ ಗೆದ್ದ ಪಂದ್ಯಗಳು ಸಂಖ್ಯೆ ಹೆಚ್ಚಾಗಲಿದ್ದು, ಇದು ದೊಡ್ಡ ಸಾಧನೆ.

ಈ ಎರಡೂ ಟೆಸ್ಟ್‌ ಪಂದ್ಯವನ್ನು ಗೆದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅಗ್ರ ಸ್ಥಾನವನ್ನು ಭಧ್ರ ಪಡಿಸಿಕೊಳ್ಳುವ ಇರಾದೆಯನ್ನು ಹೊಂದಿದೆ. ಸತತ ಮೂರನೇ ಬಾರಿಗೆ ಡಬಬ್ಲ್ಯುಟಿಸಿ ಫೈನಲ್ ಪ್ರವೇಶ ಪಡೆಯುವ ಕನಸು ಕಾಣುತ್ತಿರುವ ಭಾರತಕ್ಕೆ ಈ ಸರಣಿ ಗೆಲುವು ಅನಿವಾರ್ಯ.

Story first published: Tuesday, September 17, 2024, 8:30 [IST]
Other articles published on Sep 17, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+