ಪ್ರಾಯೋಜಕರಿಲ್ಲದೆ ಏಷ್ಯಾ ಕಪ್ ಆಡಲಿರುವ ಭಾರತ
ಸೆ.9 ರಿಂದ ಯುಎಇನಲ್ಲಿ ಏಷ್ಯಾ ಕಪ್ ಟಿ20 ಟೂರ್ನಿ ಆರಂಭವಾಗಿದೆ. ಈ ಟೂರ್ನಿಗಾಗಿ ಈಗಾಗಲೇ ಭಾರತ ತಂಡವನ್ನು ಪ್ರಕಟಿಸಿದೆ. ಇದಕ್ಕೂ ಮೊದಲ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿದೆ. ಇದಕ್ಕೆ ಕಾರಣ ಆನ್‌ಲೈನ್ ಗೇಮಿಂಗ್ ಬಿಲ್ 2025 ಅನ್ನು ಅಂಗೀಕರಿಸಿದೆ. ಈ ಕಾಯ್ದೆಯು ಜಾರಿಗೆ ಬರಲಿದ್ದು, ಇದರಿಂದ ಟೀಮ್ ಇಂಡಿಯಾ ಜೆರ್ಸಿಗೆ ಪ್ರಾಯೋಜಕರೇ ಇಲ್ಲದಂತೆ ಆಗಿದೆ.
ಈಗ ಏಷ್ಯಾ ಕಪ್ ಟಿ20 ಟೂರ್ನಿಗೆ ಭಾರತ ತಂಡವನ್ನು ಶೀರ್ಷಿಕೆ ಪ್ರಾಯೋಜಕರಿಲ್ಲದೆ ಕಳುಹಿಸಿ ಕೊಡಬೇಕಾಗುತ್ತದೆ. ಇದಕ್ಕೆ ಕಾರಣ ಡ್ರೀಮ್ 11 ಭಾರತೀಯ ತಂಡದ ಪ್ರಾಯೋಜಕತ್ವದಿಂದ ತನ್ನ ಹೆಸರನ್ನು ಹಿಂಪಡೆದಿದೆ.

ಡ್ರೀಮ್ 11 2023 ರಿಂದ 2026 ರವರೆಗೆ ಬಿಸಿಸಿಐ ಜೊತೆ 358 ಕೋಟಿ ರೂ.ಗಳ ಒಪ್ಪಂದವನ್ನು ಮಾಡಿಕೊಂಡಿತ್ತು. ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಂಗ್ ಬಿಲ್ ಅಂಗಿಕರಿಸಿದ್ದರಿಂದ, ಡ್ರೀಮ್ ಇಲೆವೆನ್ ತನ್ನ ಒಪ್ಪಂದದಿಂದ ಹಿಂದೆ ಸರಿಯಬಹುದು ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ಈ ಸುದ್ದಿಗೆ ಸಂಬಂಧಿಸಿದಂತೆ ಡ್ರೀಮ್ 11, ಭಾರತೀಯ ತಂಡವನ್ನು ಪ್ರಾಯೋಜಿಸಲು ಸಾಧ್ಯವಿಲ್ಲ ಎಂದು ಕಂಪನಿ ಬಿಸಿಸಿಐಗೆ ತಿಳಿಸಿದೆ. ಹೀಗಾಗಿ ಟೀಮ್ ಇಂಡಿಯಾ ಹೊಸ ಪ್ರಾಯೋಜಕರ ಹುಡುಕಾಟ ನಡೆಸಿದೆ.
ಬಿಸಿಸಿಐ ಹೇಳಿದ್ದೇನು?
ಡ್ರೀಮ್ 11 ಜೊತೆಗಿನ ಒಪ್ಪಂದವನ್ನು ಕೊನೆಗೊಳಿಸಿ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಅಂಗೀಕಾರದ ನಂತರ, ಬಿಸಿಸಿಐ, ಡ್ರೀಮ್ 11 ಜೊತೆಗಿನ ಸಂಬಂಧವನ್ನು ಕೊನೆಗೊಳಿಸುತ್ತದೆ. ಅಲ್ಲದೆ ಭವಿಷ್ಯದಲ್ಲೂ ಇಂತಹ ಕಂಪನಿಗಳೊಂದಿಗೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ಸಚಿವರು ಖಚಿತ ಪಡಿಸಿದ್ದಾರೆ.

ಕಾನೂನನ್ನು ಗೌರವಿಸುತ್ತೇವೆ ಮತ್ತು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025 ಅನ್ನು ಸಂಪೂರ್ಣವಾಗಿ ಅನುಸರಿಸುತ್ತೇವೆ ಎಂದು ಡ್ರೀಮ್ 11 ಅಧಿಕಾರಿ ಹೇಳಿದ್ದಾರೆ. ಅಲ್ಲದೆ ಈ ಕಂಪನಿ ಮೊದಲಿನಿಂದಲೂ ಕಾನೂನು ಬದ್ಧವಾಗಿದೆ. ಕಾನೂನಿನ ಅನುಸಾರವಾಗಿ ವ್ಯವಹಾರ ನಡೆಸುತ್ತಿರುವುದಾಗಿ ಕಂಪನಿ ತಿಳಿಸಿದೆ.
ಸೆ.9ರಿಂದ ಟೂರ್ನಿ
ಈ ಬಾರಿಯ ಏಷ್ಯಾ ಕಪ್ ಸೆಪ್ಟಂಬರ್ 9 ರಿಂದ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೆ.10 ರಂದು ಲೀಗ್ ಹಂತದ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಒಟ್ಟು 8 ತಂಡಗಳು ಈ ಲೀಗ್‌ನಲ್ಲಿ ಭಾಗವಹಿಸುತ್ತಿದ್ದು, 2 ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಗುಂಪು ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು ಸೂಪರ್ 4ಕ್ಕೆ ಅರ್ಹತೆ ಪಡೆಯಲಿವೆ. ಈ ಹಂತದಲ್ಲಿ ಅಗ್ರ 2 ಸ್ಥಾನ ಪಡೆಯುವ ತಂಡಗಳು, ಫೈನಲ್‌ನಲ್ಲಿ ಕಾದಾಟ ನಡೆಸಲಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications