Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆಕಾಶ್‌ ದೀಪ್‌ ಸಹೋದರಿ ಆರೋಗ್ಯ ವಿಚಾರಿಸಿದ ಕಿಂಗ್ಸ್‌ ಚಾರ್ಲ್ಸ್‌

ಭಾರತ ಹಾಗೂ ಇಂಗ್ಲೆಂಡ್ ನಡುವಣ ಆಂಡರ್ಸನ್‌, ತೆಂಡುಲ್ಕರ್ ಸರಣಿಯ ನಾಲ್ಕನೇ ಪಂದ್ಯ ಮ್ಯಾಚೆಂಸ್ಟರ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಲು ಪ್ಲ್ಯಾನ್ ಮಾಡಿಕೊಂಡಿದೆ. ಈ ಪಂದ್ಯಕ್ಕೆ ಇನ್ನು ಹಲವು ದಿನಗಳು ಬಾಕಿ ಇದ್ದು, ಈ ವೇಳೆ ಟೀಮ್ ಇಂಡಿಯಾ, ಇಂಗ್ಲೆಂಡ್‌ನಲ್ಲಿ ಕಿಂಗ್ ಚಾರ್ಲ್ಸ್‌ III ಬೇಟಿ ಆಗಿದೆ. ಈ ವೇಳೆ ಟೀಮ್ ಇಂಡಿಯಾ ಪುರುಷರ ತಂಡದೊಂದಿಗೆ, ಮಹಿಳಾ ಕ್ರಿಕೆಟ್ ತಂಡವೂ ಉಪಸ್ಥಿತಿ ಇತ್ತು.

ಈ ಭೇಟಿಯ ಬಗ್ಗೆ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಕಿಂಗ್ ಚಾರ್ಲ್ಸ್‌, ನಮ್ಮ ತಂಡದ ಆಟಗಾರರನ್ನು ಭೇಟಿ ಆಗುವ ಮುನ್ನ ಹೋಮ್‌ವರ್ಕ್ ಮಾಡಿಕೊಂಡೇ ಬಂದಿದ್ದರು. ಇದೇ ವೇಳೆ ಟೀಮ್ ಇಂಡಿಯಾದ ವೇಗದ ಬೌಲರ್‌ ಆಕಾಶ್‌ ದೀಪ್‌ ಅವರನ್ನು ಭೇಟಿಯಾದಗ, ಕಿಂಗ್‌ ಚಾರ್ಲ್ಸ್‌ ಸಹೋದರಿಯ ಬಗ್ಗೆ ಕೇಳಿದರು. ಈಗ ನಿಮ್ಮ ಸಹೋದರಿ ಹೇಗಿದ್ದಾರೆ ಎಂದು ಆಕಾಶ್‌ಗೆ ಪ್ರಶ್ನೆ ಕೇಳಿದ್ರು ಎಂದು ರಾಜೀವ್ ತಿಳಿಸಿದ್ದಾರೆ.

India s Cricket Team Meets King Charles III Ahead of Manchester Test

"ಇಂಗ್ಲೆಂಡ್ ಪ್ರವಾಸಕ್ಕೆ ಯುವ ತಂಡವನ್ನು ಕಳುಹಿಸಿದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು. ಅಲ್ಲದೆ ಮೂರನೇ ಟೆಸ್ಟ್‌ನಲ್ಲಿ ಇನ್ನೊಬ್ಬ ಬ್ಯಾಟರ್‌ ತಂಡದಲ್ಲಿ ಇದ್ದಿದ್ದರೆ ನಿಶ್ಚಿತವಾಗಿ ಗೆಲುವು ಸಾಧಿಸಬಹುದಿತ್ತು ಎಂದು ಕಿಂಗ್‌ ಚಾರ್ಲ್ಸ್‌ ತಿಳಿಸಿದ್ದಾರೆ. ಇನ್ನು ತಾವು ಇಂಗ್ಲೆಂಡ್‌ಗೆ ಯುವ ತಂಡವನ್ನು ಕಳುಹಿಸಿದ ಬಗ್ಗೆ ಶುಕ್ಲಾ ಅವರು ಕಿಂಗ್‌ ಚಾರ್ಲ್ಸ್‌ ಅವರಿಗೆ ಮಾಹಿತಿ ನೀಡಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಮಾಡಲಾಗಿದೆ ಎಂದು ಅವರು ತಿಳಿದ್ದಾರೆ.

ಲಾರ್ಡ್ಸ್ಸ್ ನಲ್ಲಿ ಟೀಮ್ ಇಂಡಿಯಾ 22 ರನ್‌ ಸೋಲು ಕಂಡ ಬಳಿಕ, ನಾಲ್ಕನೇ ಟೆಸ್ಟ್‌ಗೆ ತಯಾರಿ ನಡೆಸುತ್ತಿದೆ. ನಾಲ್ಕನೇ ಟೆಸ್ಟ್‌ ಜುಲೈ 23 ರಿಂದ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.

India s Cricket Team Meets King Charles III Ahead of Manchester Test

ಸಹೋದರಿಯ ಬಗ್ಗೆ ಮಾತನಾಡಿದ್ದ ಆಕಾಶ್‌ ದೀಪ್

ಎಡ್ಜ್‌ಬಸ್ಟನ್‌ನಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ದಾಖಲಿಸಿದಾಗ ಆಕಾಶ್‌ ದೀಪ್‌ ಸ್ಥಿರ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೆ ಆ ಟೆಸ್ಟ್‌ ಪಂದ್ಯದಲ್ಲಿ 10 ವಿಕೆಟ್‌ ಪಡೆದು ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಆಕಾಶ್ ದೀಪ್‌ ತಮ್ಮ ಸಹೋದರಿಗೆ ಈ ಪ್ರದರ್ಶನ ಉಡುಗೊರೆ ಎಂದು ತಿಳಿಸಿದ್ದಾರೆ. ಆಕಾಶ್‌ ದೀಪ್‌ ಸಹೋದರಿ ಇತ್ತೀಚಿಗೆ ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದರು. ಈ ಬಳಿಕ ಆಜ್‌ತಕ್‌ ಜೊತೆ ಮಾತನಾಡಿರುವ ಆಕಾಶ್‌ ದೀಪ್‌ ಸಹೋದರಿ ಜ್ಯೋತಿ, ಸಹೋದರ ಇಂಗ್ಲೆಂಡ್‌ ತೆರಳುವ ಮುನ್ನ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಹೇಳಿದ್ದಾನೆ. ಆಗ ನಾನು ನನ್ನ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿನ್ನ ಪ್ರದರ್ಶನದತ್ತ ಗಮನ ಹರಿಸುವಂತೆ ಹೇಳಿದ್ದೇ ಎಂದು ತಿಳಿಸಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ನಡೆದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಆಕಾಶ್ ದೀಪ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಮೂಡಿವೆ.

Story first published: Wednesday, July 16, 2025, 18:53 [IST]
Other articles published on Jul 16, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+