Kolkata Test ಸೋಲಿಗೆ ಕಾರಣ ಏನು?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್ ಮುಗಿದಿದೆ. ಈ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ 30 ರನ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸೋತ ಭಾರತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ. ಟೀಮ್ ಇಂಡಿಯಾ ಕೋಲ್ಕತ್ತಾ ಟೆಸ್ಟ್ ಪಂದ್ಯ ಸೋಲು ಕಾರಣ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಭಾರತ ತಾನೇ ಮಾಡಿದ ತಪ್ಪಿಗೆ ಬೆಲೆ ತೆತ್ತಿದೆ. ಮೂರನೇ ದಿನದಾಟವನ್ನು ಆರಂಭಿಸಿದಾಗ ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 93 ರನ್ ಸೇರಿಸಿತ್ತು. ಈ ಹಿಡಿತವನ್ನು ಬಳಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ಸಂಪೂರ್ಣವಾಗಿ ವಿಫಲವಾಗಿದೆ. ಟೀಮ್ ಇಂಡಿಯಾ ಮೂರನೇ ದಿನದ ಆರಂಭದಲ್ಲಿ ಅಟ್ಯಾಕಿಂಗ್ ಅಪ್ರೋಚ್ ತೋರಿಸಲಿಲ್ಲ. ಡಿಫೆನ್ಸಿವ್ ಅಪ್ರೋಚ್ ತೋರಿಸಿದ್ದು, ದಕ್ಷಿಣ ಆಫ್ರಿಕಾ ತಂಡದ ಬ್ಯಾಟರ್‌ಗಳಿಗೆ ವರದಾನವಾಯಿತು. ಇದನ್ನೇ ಎರಡೂ ಕೈಯಿಂದ ದಕ್ಷಿಣ ಆಫ್ರಿಕಾದ ನಾಯಕ ತೆಂಬು ಬವುಮಾ ಬಳಸಿಕೊಂಡು ಅಬ್ಬರಿಸಿದರು.

ಮೂರನೇ ದಿನದಾಟದಲ್ಲಿ ಆರಂಭಿಕ 12 ಓವರ್‌ಗಳಲ್ಲಿ ವಿಕೆಟ್‌ಗಳೇ ಬೀಳಲಿಲ್ಲ. ಇದೇ ಟೀಮ್ ಇಂಡಿಯಾ ರನ್‌ಗಳನ್ನು ನೀಡುವಂತೆ ಮಾಡಿತು. ಇದಾದ ಬಳಿಕ ದಿನದ ಎರಡೂ ತುದಿಯಲ್ಲಿ ಸ್ಪಿನ್ ಬೌಲರ್ಸ್‌ಗಳನ್ನು ಬಳಸಿದ ರಿಷಭ್ ಪಂತ್ ಕೈ ಸುಟ್ಟುಕೊಂಡರು. ನುರಿತ ಕ್ರಿಕೆಟ್ ವಿಶ್ಲೇಷಕರ ಪ್ರಕಾರ ಒಂದು ಕಡೆಯಿಂದ ಜಡೇಜಾ ಬೌಲಿಂಗ್ ಮಾಡಿ, ಇನ್ನೊಂದು ಬದಿಯಲ್ಲಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡಿದ್ದರೆ, ಎದುರಾಳಿ ಮೇಲೆ ಒತ್ತಡವನ್ನು ಹೇರಬಹುದಿತ್ತು. ಆದರೆ ಈ ಚಾನ್ಸ್ ಬಳಸಿಕೊಳ್ಳುವಲ್ಲಿ ಟೀಮ್ ಇಂಡಿಯಾ ವಿಫಲವಾಯಿತು.
ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಸಿಂಗಲ್ ತೆಗೆದುಕೊಳ್ಳುವುದನ್ನು ಭಾರತೀಯ ಬೌಲರ್‌ಗಳು ತಡೆಯಬೇಕಿತ್ತು. ಆದರೆ ಈ ಕೆಲಸವನ್ನು ಮಾಡುವಲ್ಲಿ ಭಾರತ ತಂಡ ವಿಫಲವಾಯಿತು. ಶನಿವಾರ ದಕ್ಷಿಣ ಆಫ್ರಿಕಾ ತಂಡದ ಮೇಲೆ ಹೇರಲಾಗಿದ್ದ ಒತ್ತಡವನ್ನು ಮೂರನೇ ದಿನದಾಟದ ಆರಂಭದಲ್ಲಿ ಹೇರುವಲ್ಲಿ ವಿಫಲವಾಯಿತು. ಇದರಿಂದ ಸುಲಭವಾಗಿ ರನ್‌ಗಳು ಹರಿದು ಹೋದವು. ಪರಿಣಾಮ ದಕ್ಷಿಣ ಆಫ್ರಿಕಾ ಕೋಲ್ಕತ್ತಾದಲ್ಲಿ ಕಬ್ಬಿಣ್ಣದ ಕಡಲೆಯಂತೆ ಕಾಣುತ್ತಿದ್ದ 124 ರನ್ ಕಲೆ ಹಾಕುವ ಗುರಿಯನ್ನು ಟೀಮ್ ಇಂಡಿಯಾಗೆ ನೀಡಿತು.
ಬ್ಯಾಟರ್ಸ್ ವೈಫಲ್ಯ
ಭಾರತದ ಬ್ಯಾಟರ್‌ಗಳು ಸ್ಪಿನ್ ಹಾಗೂ ವೇಗ, ಬೌನ್ಸ್‌ನ್ನು ನೋಡಿಕೊಂಡು ಬ್ಯಾಟಿಂಗ್ ಮಾಡುವಲ್ಲಿ ವಿಫಲರಾದರು. ಈ ವೇಳೆ ತಾಳ್ಮೆಯಿಂದ ಬ್ಯಾಟ್ ಮಾಡುತ್ತಿದ್ದ ಕೆಎಲ್ ರಾಹುಲ್ ಸಹ ಬಿಗ್ ಇನಿಂಗ್ಸ್ ಕಟ್ಟದೇ ನಿರಾಸೆ ಅನುಭವಿಸಿದರು. ರಿಷಭ್ ಪಂತ್ ತಮ್ಮ ಅಟ್ಯಾಕಿಂಗ್ ಆಟವನ್ನು ಆಡಲು ಹೋಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಪರಿಣಾಮ ಭಾರತ ಸೋಲು ಕಂಡಿತು. ಯುವ ಹಾಗೂ ಪ್ರತಿಭಾನ್ವಿತ ಬ್ಯಾಟರ್‌ಗಳು ಟಿ20 ಶೈಲಿಯಲ್ಲಿ ಬ್ಯಾಟ್ ಮಾಡುವುದನ್ನು ಬಿಟ್ಟು ನೆಲಕಚ್ಚಿ ಬ್ಯಾಟ್ ಮಾಡಬೇಕಿದ್ದಲ್ಲಿ ವೈಫಲ್ಯ ಅನುಭವಿಸಿದರು. ಪರಿಣಾಮ ಭಾರತ ಮೊದಲ ಟೆಸ್ಟ್ ಪಂದ್ಯ ಸೋತು, 2 ಪಂದ್ಯಗಳ ಸರಣಿಯಲ್ಲಿ ಹಿನ್ನಡೆ ಅನುಭವಿಸುತ್ತಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications