WTC Final: ಎರಡು ಸ್ಥಾನಗಳಿಗೆ ಐದು ತಂಡಗಳು ಫೈಟ್: ಫೈನಲ್‌ಗೆ ಅರ್ಹತೆ ಪಡೆಯಲು ಭಾರತಕ್ಕೆ ಎಷ್ಟಿದೆ ಚಾನ್ಸ್?
ಕೆಲವು ವಾರಗಳ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಭಾರತ ಹೋಗುತ್ತದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಮ್ ಇಂಡಿಯಾ ಎರಡೂ ಪಂದ್ಯಗಳ ಸೋತರ ಬಳಿಕ ಸಮೀಕರಣ ಬದಲಾಗಿದೆ. ಈ ಬಾರಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಎರಡು ಸ್ಲಾಟ್‌ಗಳಿಗೆ ಭಾರೀ ಪೈಪೋಟಿ ನಡೆದಿದೆ. ಈ ಬಾರಿ ಎರಡು ಸ್ಲಾಟ್‌ಗೆ ಮೂರಲ್ಲ ಐದು ತಂಡಗಳು ಕಾಂಪಿಟೇಷನ್ ಮಾಡುತ್ತಿವೆ.
ತವರಿನಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹಿನ್ನಡೆ ಅನುಭವಿಸಿದರೂ, ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ. ಆದರೆ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ತಂಡ ಇದೆ. ಮೊದಲ ಸ್ಥಾನದಲ್ಲಿರುವ ಎರಡನೇ ಸ್ಥಾನದಲಿರುವ ತಂಡಗಳ ನಡುವೆ ಕಡಿಮೆ ಅಂತರ ಇದೆ. ಭಾರತ ತಂಡ ಫೈನಲ್‌ನಲ್ಲಿ ಸ್ಥಾನ ಪಡೆಯಬೇಕಾದರೆ, 6 ಪಂದ್ಯಗಳಲ್ಲಿ ಕನಿಷ್ಠ ನಾಲ್ಕು ಗೆಲುವು ದಾಖಲಿಸಬೇಕು. ಉಳಿದ ಎಲ್ಲ ಪಂದ್ಯಗಳ ನಂತರ ಟೀಮ್ ಇಂಡಿಯಾ ಮ್ಯಾಕ್ಸಿಮಮ್ ಶೇಕಡಾವಾರು 74.56 ಆಗಿರಬಹುದು.

ಆಸೀಸ್ ನಂಬರ್ 1 ಸ್ಥಾನ ಪಡೆಯಬಹುದು
ಇನ್ನು ಸದ್ಯ ಆಸ್ಟ್ರೇಲಿಯಾ ಎರಡನೇ ಸ್ಥಾನದಲ್ಲಿದೆ. ಆಸೀಸ್ ಗೆಲುವಿನ ಶೇಕಡಾವಾರು 62.50 ಆಗಿದೆ. ಮುಂದಿನ ಎಲ್ಲ ಪಂದ್ಯಗಳಲ್ಲಿ ಕಾಂಗರೂ ಪಡೆ ಗೆಲುವು ಸಾಧಿಸಿದರೆ, 76.32 ಅಂಕಗಳನ್ನು ಕಲೆ ಹಾಕಬಹುದು. ಅಲ್ಲದೆ ಮೊದಲ ಸ್ಥಾನವನ್ನು ಪಡೆಯಬಹುದು. ಇನ್ನು ಆಸೀಸ್ ಇನ್ನು ಏಳು ಪಂದ್ಯಗಳನ್ನು ಆಡಬೇಕಿದೆ. ಬಾರ್ಡರ್ ಗವಾಸ್ಕರ್ ಸರಣಿಯ ಐದು ಟೆಸ್ಟ್ ಪಂದ್ಯಗಳನ್ನು ಟೀಮ್ ಇಂಡಿಯಾ ವಿರುದ್ಧ ಆಡಬೇಕಿದೆ. ಅಲ್ಲದೆ ಶ್ರೀಲಂಕಾ ವಿರುದ್ಧ ಎರಡು ಪಂದ್ಯ ಆಡಬೇಕಿದೆ.
ಲಂಕಾಕ್ಕೂ ಇದೆ ಅವಕಾಶ
ನ್ಯೂಜಿಲೆಂಡ್ ವಿರುದ್ದ ಎರಡು ಟೆಸ್ಟ್ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಶ್ರೀಲಂಕಾ ಕ್ಲೀನ್ ಸ್ವೀಪ್ ಸಾಧನೆ ಮಾಡಿತು. ಈ ಸರಣಿಯ ಬಳಿಕ ಶ್ರೀಲಂಕಾ ಫೈನಲ್ ಪ್ರವೇಶಿಸುವ ಕನಸನ್ನು ಕಾಣುತ್ತಿದೆ. ಶ್ರೀಲಂಕಾ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 55.56 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ತಲಾ ಎರಡೂ ಪಂದ್ಯಗಳನ್ನು ಆಡುವ ಅವಕಾಶ ಇದೆ. ಹೀಗಾಗಿ ಲಂಕಾ ಗರಿಷ್ಠ ಗೆಲುವಿನ ಶೇಕಡಾವಾರು 69.23 ಕ್ಕೆ ಹೋಗುವ ಸಾಧ್ಯತೆ ಇದೆ.

ಈಗ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಗೆಲುವಿನ ಶೇಕಡಾವಾರು 50 ಆಗಿದೆ. ಇನ್ನು ಕಿವೀಸ್ ಭಾರತದ ವಿರುದ್ಧ ಒಂದು ಹಾಗೂ ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳನ್ನು ಆಡಬೇಕಿದೆ. ಅಲ್ಲದೆ ಕಿವೀಸ್ ಗೆಲುವಿನ ಶೇಕಡಾವಾರು ಗರಿಷ್ಠ 64.29 ಅಂಕ ಗಳಿಸಬಹುದು. ಅಲ್ಲದೆ ದಕ್ಷಿಣ ಆಫ್ರಿಕಾ ತಂಡ ಸದ್ಯ ಐದನೇ ಸ್ಥಾನದಲ್ಲಿದೆ. 47.62 ಗೇಲುವಿನ ಶೇಕಡಾ ವಾರು ಹೊಂದಿರುವ ದಕ್ಷಿಣ ಆಫ್ರಿಕಾ ಗರಿಷ್ಠ 69.44 ಅಂಕಗಳನ್ನು ಸಂಪಾದಿಸಬಹುದು. ದಕ್ಷಿಣ ಆಫ್ರಿಕಾ ವಿರುದ್ಧ ಬಾಂಗ್ಲಾ 1, ಶ್ರೀಲಂಕಾ ವಿರುದ್ಧ 2, ಪಾಕಿಸ್ತಾನ ವಿರುದ್ಧ 2 ಪಂದ್ಯ ಆಡಬೇಕಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications