WTC Points Table: ಕಿವೀಸ್ ವಿರುದ್ಧದ ಸೋನಿಂದ ಭಾರತಕ್ಕೆ ಹಾನಿ: ಮೊದಲೆರಡು ಸ್ಥಾನಗಳಿಗೆ ಭಾರೀ ಪೈಪೋಟೊ
ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ರೋಹಿತ್ ಪಡೆ ಸೋಲು ಕಂಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಮೇಲೆ ಚಿತ್ತ ನೆಟ್ಟಿರುವ ಟೀಮ್ ಇಂಡಿಯಾಗೆ ಈ ಸೋಲು ಭಾರೀ ಪೆಟ್ಟು ನೀಡಿದೆ. ಈ ಮೂಲಕ ಭಾರತ ತಂಡ 3 ಪಂದ್ಯಗಳ ಸರಣಿಯನ್ನು ಕಳೆದುಕೊಂಡಿದೆ. ಕಿವೀಸ್ ಸರಣಿಯ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆ ಗೆದ್ದು ಇತಿಹಾಸ ನಿರ್ಮಿಸಿದೆ.
ಭಾರತ ತಂಡವು 12 ವರ್ಷಗಳ ನಂತರ ತವರಿನಲ್ಲಿ ಟೆಸ್ಟ್ ಸರಣಿಯಲ್ಲಿ ಸೋಲನ್ನು ಎದುರಿಸಿದೆ. ಇದಕ್ಕೂ ಮುನ್ನ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಸೋತಿತ್ತು. ನ್ಯೂಜಿಲೆಂಡ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟುವಲ್ಲಿ ಟೀಮ್ ಇಂಡಿಯಾ ವಿಫಲವಾಗಿ, ಮುಖಭಂಗ ಅನುಭವಿಸಿದೆ.

ಸರಣಿ ಸೋತರೂ ಅಗ್ರ ಸ್ಥಾನದಲ್ಲಿ ಭಾರತ
ಪುಣೆ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದ್ದು, ಇದರ ನೇರ ಪರಿಣಾಮ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಮೇಲೆ ಬಿದ್ದಿದೆ. ಈ ಸೋಲಿನ ಪರಿಣಾಮ ಟೀಮ್ ಇಂಡಿಯಾದ ಅಂಕಗಳು ಕಡಿತವಾಗಿದೆ. ಡಬ್ಲ್ಯುಟಿಸಿಯ ಪಾಯಿಂಟ್‌ಗಳ ಪಟ್ಟಿಯಲ್ಲಿ ಭಾರಿ ನಷ್ಟವನ್ನು ಅನುಭವಿಸಿದೆ. ನ್ಯೂಜಿಲೆಂಡ್ ಅಂಕಪಟ್ಟಿಯಲ್ಲಿ ಮುನ್ನಡೆ ಸಾಧಿಸಿದೆ.
ಪುಣೆ ಟೆಸ್ಟ್‌ಗೂ ಮುನ್ನ ಟೀಂ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿತ್ತು. ಈ ಟೆಸ್ಟ್ ಸರಣಿಯಲ್ಲಿ ಸೋಲು ಕಂಡರೂ ಟೀಮ್ ಇಂಡಿಯಾ ನಂಬರ್ ಒನ್ ಸ್ಥಾನದಲ್ಲಿ ಮುಂದುವರೆಯಲಿದೆ. ಆದರೆ ಭಾರತ ಹಾಗೂ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಅಂಕಗಳ ವ್ಯತ್ಯಾಸ ತೀರ ಕಡಿಮೆ ಆಗಿದೆ. ಪುಣೇಯಲ್ಲಿ ಸರಣಿ ಸೋತಿರುವ ಟೀಮ್ ಇಂಡಿಯಾ ಗೆಲುವಿನ ಶೇಕಡಾವಾರು 62.82ಕ್ಕೆ ಕುಸಿದಿದೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು 62.50 ಆಗಿದೆ. ಏಕೆಂದರೆ ಆಸೀಸ್ ಕಳೆದ ಏಳು ತಿಂಗಳಿನಿಂದ ಯಾವುದೇ ಟೆಸ್ಟ್ ಸರಣಿ ಆಡಿಲ್ಲ.

ಮೂರನೇ ಸ್ಥಾನದಲ್ಲಿ ಲಂಕಾ
ಅಂಕ ಪಟ್ಟಿಯನ್ನು ನೋಡಿದರೆ ಭಾರತ, ಆಸ್ಟ್ರೇಲಿಯಾ ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಪಡೆದಿವೆ. ಈ ಪಟ್ಟಿಯಲ್ಲಿ ಶ್ರೀಲಂಕಾ ಮೂರನೇ ಸ್ಥಾನದಲ್ಲಿದೆ. ಶ್ರೀಲಂಕಾ ಗೆಲುವಿನ ಶೇಕಡಾವಾರು 55.56 ಆಗಿದೆ. ಮುಂಬೈನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯಕ್ಕೂ ಮುನ್ನ ಸರಣಿ ವಶ ಪಡಿಸಿಕೊಂಡಿರುವ ಕಿವೀಸ್ ಗೆಲುವಿನ ಶೇಕಡಾವಾರು 50.00 ಆಗಿದೆ. ಈ ಮೂಲಕ ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿದ ಕಿವೀಸ್ ನಾಲ್ಕನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಆಫ್ರಿಕಾ ಸದ್ಯ ಐದನೇ ಸ್ಥಾನದಲ್ಲಿದೆ.
ಪಾಕಿಸ್ತಾನ ತಂಡವು ಬಹಳ ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿದೆ. ಈ ಗೆಲುವು ಪಾಕ್ ಆತ್ಮ ವಿಶ್ವಾಸ ಇಮ್ಮಡಿ ಗೊಳಿಸಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ಗೆಲುವಿನ ಮೂಲಕ ಪಾಕ್ ಗೆಲುವಿನ ಶೆಕಾಡ 33.33 ಆಗಿದ್ದು, ಏಳನೇ ಸ್ಥಾನ ಪಡೆದಿದೆ. ಇನ್ನು ಪಾಕಿಸ್ತಾನದಲ್ಲಿ ಬಾಂಗ್ಲಾ ತಂಡವನ್ನು ಬಗ್ಗು ಬಡೆದಿದ್ದಾ ಬಾಂಗ್ಲಾ ಎಂಟನೇ ಸ್ಥಾನಕ್ಕೆ ಕುಸಿದಿದೆ. ವಿಂಡೀಸ್ 9ನೇ ಸ್ಥಾನವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications